ವ್ಯಾಪಾರಿಯ 1.80 ಲಕ್ಷ ಹಣವಿದ್ದ ಬ್ಯಾಗ್ ಕಳವು
ಮೈಸೂರು

ವ್ಯಾಪಾರಿಯ 1.80 ಲಕ್ಷ ಹಣವಿದ್ದ ಬ್ಯಾಗ್ ಕಳವು

May 29, 2018

ಮೈಸೂರು: ವ್ಯಾಪಾರಿಯೊಬ್ಬರು ತಮ್ಮ ಮನೆಯ ಮುಂಭಾಗದ ಕಾಂಪೌಂಡ್ ಮೇಲೆ 1.80 ಲಕ್ಷ ರೂ. ಇಟ್ಟಿದ್ದ ಬ್ಯಾಗನ್ನು ಅಪರಿಚಿತ ವ್ಯಕ್ತಿಗಳು ಕದ್ದು, ಪರಾರಿಯಾಗಿರುವ ಘಟನೆ ಲಕ್ಷ್ಮೀಪುರಂ 2ನೇ ಮುಖ್ಯ ರಸ್ತೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮೀಪುರಂ ನಿವಾಸಿ ಸದಾಶಿವ 1.80 ಲಕ್ಷ ರೂ. ಇದ್ದ ಬ್ಯಾಗ್ ಕಳೆದು ಕೊಂಡವರು. ಮೇ 26 ರಂದು ಸದಾಶಿವ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಲಕ್ಷಾಂತರ ರೂ.ಗಳನ್ನು ಬ್ಯಾಗ್‍ನಲ್ಲಿಟ್ಟು ಕೊಂಡು ಲಕ್ಷ್ಮೀಪುರಂನ ತಮ್ಮ ನಿವಾಸಕ್ಕೆ ರಾತ್ರಿ 9.20ಕ್ಕೆ ಕಾರಿನಲ್ಲಿ ಬಂದಿದ್ದಾರೆ. ಸದಾಶಿವ, ತಮ್ಮ ಮನೆಯ ಕಾಂಪೌಂಡ್‍ನಲ್ಲಿ ಕಾರ್ ಪಾರ್ಕ್ ಮಾಡಿ, ಒಳಗಿದ್ದ ಹಣದ ಬ್ಯಾಗ್ ಹಾಗೂ ಇತರೆ ಪದಾರ್ಥಗಳನ್ನು ಹೊರ ತೆಗೆದು ಮನೆಯ ಕಾಂಪೌಂಡ್ ಮೇಲೆ ಇಟ್ಟಿದ್ದಾರೆ. ಕೈಯ್ಯಲ್ಲಿದ್ದ ಇತರೆ ವಸ್ತುಗಳನ್ನು ಒಳಗೆ ಇಟ್ಟು ಬರುವಷ್ಟರಲ್ಲಿ ಕಾಂಪೌಂಡ್ ಮೇಲೆ ಇಟ್ಟಿದ್ದ ಹಣದ ಬ್ಯಾಗನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »