ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿ: ಅರ್ಜಿ ಆಹ್ವಾನ
ಮೈಸೂರು

ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿ: ಅರ್ಜಿ ಆಹ್ವಾನ

May 29, 2018

ಮೈಸೂರು:  ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುವ ಟೆಲಿವಿಷನ್ ಜರ್ನಲಿಸಂ/ಕ್ಯಾಮರಾಮ್ಯಾನ್ ತರಬೇತಿಗೆ 2018-19ನೇ ಸಾಲಿನಲ್ಲಿ ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹಿಂದೆ ತರಬೇತಿ ಪಡೆದವರು ಮತ್ತೊಮ್ಮೆ ತರಬೇತಿ ಪಡೆಯಲು ಅರ್ಹರಿರುವುದಿಲ್ಲ. ಟೆಲಿವಿಷನ್ ಜರ್ನಲಿಸಂ ತರಬೇತಿಗೆ ಕನಿಷ್ಠ ಪದವಿ ಮತ್ತು ಕ್ಯಾಮರಾಮ್ಯಾನ್ ತರಬೇತಿಗೆ ಕನಿಷ್ಠ ಎಸ್‍ಎಸ್‍ಎಲ್‍ಸಿ ಉತ್ತೀರ್ಣವಾಗಿರಬೇಕು. ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅಂಕಪಟ್ಟಿಯನ್ನು ದೃಢೀಕರಿಸಿ ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸುವವರು ದಿನಾಂಕ 1.4.2018ಕ್ಕೆ 18 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ನಿಗದಿತ ಅರ್ಜಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ನಂ.9/ಎ, ಎಸ್‍ಬಿಎಂ ಜೋನಲ್ ಕಚೇರಿ ಕಟ್ಟಡದ 3ನೇ ಮಹಡಿ, ಸಾಹುಕಾರ್ ಚನ್ನಯ್ಯ ರಸ್ತೆ, ಚಾಮರಾಜಮೊಹಲ್ಲಾ, ಸರಸ್ವತಿಪುರಂ, ಮೈಸೂರು-9 ಇಲ್ಲಿ ಅರ್ಜಿ ಪಡೆದು ಜೂನ್ 8ರೊಳಗೆ ಸಲ್ಲಿಸುವುದು. ಮಾಹಿತಿಗೆ ದೂ.0821-2332480 ಅನ್ನು ಸಂಪರ್ಕಿಸುವುದು.

Translate »