ಹುಣಸೂರು: ‘ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರ ಕುಟುಂಬ ಸದಸ್ಯರಿಗೆ ಸುಳ್ಳೇ ಮನೆದೇವರು ಎಂದು ಶಾಸಕ ಹೆಚ್.ವಿಶ್ವನಾಥ್ ಟೀಕಿಸಿದರು. ನಗರದ ವರದಿಗಾರರಕೂಟದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಆದರೆ, ನಡೆದಿರುವ ಎಲ್ಲಾ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ನಾನು ನೀಡಿದ ಹೇಳಿಕೆಗೆ ಮಂಜುನಾಥ ಅವರು ಪ್ರತಿಕ್ರಿಯೆ ನೀಡುವ ಭರದಲ್ಲಿ ನನ್ನನ್ನು ಬ್ಲಾಕ್ ಮೇಲರ್ ಎಂದು ಹೇಳಿದ್ದಾರೆ. ಇದು ಸಭ್ಯ ರಾಜಕಾರಣಿಯ ಲಕ್ಷಣವಲ್ಲ ಎಂದರು….
ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರ
July 28, 2018ಹುಣಸೂರು: ಬಸವಣ್ಣ ನವರ ಕಾಲದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರರಾಗಿದ್ದು, ಇವರ ವಚನದಲ್ಲಿ ತೀರ ಸರಳತೆ ಮತ್ತು ಗಂಭೀರತೆ ಎದ್ದು ಕಾಣುತದೆ ಎಂದು ಸಾಹಿತಿ ಮಾಧು ಪ್ರಸಾದ್ ತಿಳಿಸಿದರು. ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಸವಿತಾ ಸಮಾಜ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರ ರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಚನಗಳಿದ್ದು, ಅದರಲ್ಲಿ ಅಪ್ಪಣ್ಣ ನವರ 200ಕ್ಕೂ ಹೆಚ್ಚು ವಚನಗಳು ಸೇರಿವೆ…
ಹುಣಸೂರು ಮಹಾನ್ ಸಾಧಕರ ತವರೂರು ಸಾಹಿತಿ ಬನ್ನೂರು ರಾಜು ಅಭಿಮತ
July 10, 2018ಮೈಸೂರು: ಕರ್ನಾಟಕದ ಇತಿಹಾಸದಲ್ಲಿ ಹಲವಾರು ಚಾರಿತ್ರಿಕ ದಾಖಲೆಗಳನ್ನು ನಿರ್ಮಿಸಿರುವ ಅನೇಕ ಸಾಧಕರನ್ನು, ಸಾಹಿತಿಗಳನ್ನು, ಪ್ರತಿಭಾ ಸಂಪನ್ನರನ್ನು, ದೈತ್ಯ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ವಿಶಿಷ್ಟ ನೆಲ, ಮಹಾನ್ ಸಾಧಕರ ತವರೂರು ಹುಣಸೂರು ಎಂದು ಸಾಹಿತಿ ಬನ್ನೂರು ಕೆ.ರಾಜು ಹುಣಸೂರಿನ ಮಹತ್ವದ ಬಗ್ಗೆ ತಿಳಿಸಿದರು. ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಆಶ್ರಯದಲ್ಲಿ ಹುಣಸೂರಿನ ರಂಗನಾಥ ಬಡಾವಣೆ (ಕಲ್ಕುಣ ಕೆ)ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಡಿನ…
ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು
June 25, 2018ಮೈಸೂರು: ಪ್ರಥಮ ಸ್ವಚ್ಛನಗರಿ ಎಂಬ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮೈಸೂರು ಜನತೆಗೆ ನಿರಾಸೆಯಾಗಿದ್ದು, 2018ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ 8ನೇ ಸ್ಥಾನಕ್ಕೆ ಕುಸಿದಿದೆ. ಆದರೆ 3 ರಿಂದ 10 ಲಕ್ಷ ಜನ ಸಂಖ್ಯೆಹೊಂದಿರುವ ದೇಶದ 220 ನಗರಗಳ ಪೈಕಿ ಪಾರಂಪರಿಕ ನಗರಿ ಮೈಸೂರಿಗೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಬಂದಿರುವುದು ಹೆಗ್ಗಳಿಕೆಯಾಗಿದೆ. ಮಧ್ಯಪ್ರದೇಶದ ಇಂದೂರಿನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛನಗರ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ಮೇಯರ್ ಬಿ.ಭಾಗ್ಯವತಿ, ಪಾಲಿಕೆ ಕಮೀಷ್ನರ್…
ಕೆಸರು ಗದ್ದೆಯಂತಾಗಿರುವ ರಸ್ತೆ
June 15, 2018ಕಟ್ಟೆಮಳಲವಾಡಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದೆ. ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಜಿ.ಟಿ. ಬಡಾವಣೆಯ ರಸ್ತೆಯ ಕಥೆ ಇದು. ಬಡಾವಣೆಯ ಪ್ರಾರಂಭದಿಂ ದಲೇ ಈ ಸಮಸ್ಯೆ ಎದುರಾಗಿದ್ದು ಬೈಕ್ ಸವಾರರು ದೂರದಲ್ಲಿಯೇ ನಿಲ್ಲಿಸಿ ಚರಂಡಿ ಅಂಚಿನಲ್ಲಿ ಸಾಗಬೇಕಿದೆ ಶಾಲೆ, ಕಾನ್ವೆಂಟ್‍ಗೆ ಹೋಗುವ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಹೋಗಲು ಬಹಳ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿ ಮಾಡಿಸಿದರೆ ನಿವಾಸಿಗಳಿಗೆ ತಿರುಗಾಡಲು ಅನುಕೂಲವಾಗುತ್ತದೆ ಎಂದು ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ. ಜಿ.ಟಿ.ಬಡಾವಣೆ…
ಒಂದೇ ನಂಬರ್‍ನ ಎರಡು ಬೈಕ್: ಓರ್ವನ ಬಂಧನ
June 11, 2018ಹುಣಸೂರು: ಒಂದೇ ನೋಂದಣಿ ಸಂಖ್ಯೆ ಇದ್ದ ಎರಡು ಬೈಕ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯದಲ್ಲಿ ರಾಜ್ಯ ಮಟ್ಟದ ಪತ್ರಿಕೆ ಯೊಂದರ ಪ್ರಸಾರಣಾಧಿಕಾರಿ ಗಿರೀಶ್ ಬಂಧಿತನಾಗಿದ್ದು, ಅವರನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿವರ: ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಗರದ ಬೈಪಾಸ್ ರಸ್ತೆಯ ಕಿರಿಜಾಜಿ ಸರ್ಕಲ್‍ನಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಮೈಸೂರು ಕಡೆಯಿಂದ ನಗರದ ಕಡೆಗೆ (ಕೆಎ 11-ವಿ 8117) ಒಂದೇ ನಂಬರಿನ…
ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ
June 4, 2018ಹನಗೋಡು: ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತವಾಗಿ, ಕೆರೆಗಳಂತೆ ಗೋಚರಿಸುತ್ತಿದ್ದರೆ, ಕೆಲವೆಡೆ ಕೊಚ್ಚಿ ಹೋಗಿದೆ. ಹತ್ತಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ಹನಗೋಡಿಗೆ ಸಮೀಪದ ಕಿರಂಗೂರು, ಹಿಂಡಗುಡ್ಲು, ದಾಸನಪುರ, ದೊಡ್ಡ ಹೆಜ್ಜೂರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ 1.30 ರಿಂದ 2.30ರವರೆಗೆ ಸುರಿದ ಭಾರೀ ಮಳೆಯು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ,…
ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
June 2, 2018ಹುಣಸೂರು: ತಾಲೂಕಿನ ಗಾವಡಗೆರೆ ಸಮೀಪದ ಕಳ್ಳಿಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಇಂದು ಬೆಳಿಗ್ಗೆ ಚಿರತೆಯೊಂದು ಕಾಣ ಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ವರು ಬಂದು ಗ್ರಾಮಸ್ಥರ ಸಹಾಯದಿಂದ ಚಿರತೆಗೆ ಅರವಳಿಕೆ ಚುಚುಮದ್ದು ನೀಡಿ ಬಲೆಯ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಾಗೇಗೌಡರ ಜಮೀನಿನಲ್ಲಿ ಉಳುಮೆ ಮಾಡುವಾಗ ಜಮೀನಿನ ಮರದ ಕೆಳಗೆ ಕರುವನ್ನು ಕಟ್ಟಿಹಾಕಲಾಗಿತ್ತು. ಇದನ್ನು ಕಂಡ ಚಿರತೆ ಮರದಿಂದ ಕೆಳಗೆ ಇಳಿದು ಬರುತಿದ್ದಂತೆ ಜಮೀನಿನಲ್ಲಿದ್ದ ನಾಲ್ಕು ನಾಯಿ…
ತಂಬಾಕು ಸೇವನೆ ಮಾರಕ ರೋಗಗಳಿಗೆ ನಾಂದಿ
June 1, 2018ಹುಣಸೂರು: ನಮ್ಮ ದೇಶದಲ್ಲಿ ತಂಬಾಕು ಸೇವÀನೆಯಿಂದ ಪ್ರತಿ ದಿನ 2500ಕ್ಕೂ ಹೆಚ್ಚು ಜನರು ಸಾಯು ತ್ತಿದ್ದು, ಈ ದುಶ್ಚಟದಿಂದ ಮಾನವ ಶಕ್ತಿ ಕುಂದುತ್ತಿದೆ ಎಂದು ತಾಲೂಕು ಆರೋಗ್ಯಾ ಧಿಕಾರಿ ದೇವತಾಲಕ್ಷ್ಮಿ ವಿಷಾದಿಸಿದರು. ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮುಂದೆ ಇಂದು ಬೆಳಿಗ್ಗೆ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆ, ಐಟಿಐ ಹಾಗೂ ಮೆಡಿಕಲ್ ವರ್ಕರ್ ಸಂಯುಕ್ತವಾಗಿ ಏರ್ಪಡಿಸಿದ್ದ ತಂಬಾಕು ರಹಿತ ಅರಿವು ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂಬಾಕು ಸೇವನೆ ಈಗ ಕೇವಲ…
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ
April 30, 2018ಹುಣಸೂರು: ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ ಕಾಂಗ್ರೆಸ್ ಮುಸ್ಲಿಂ ಸಮುದಾಯದ ರಕ್ತದಿಂದ ಕೈಯನ್ನು ತೊಳೆದು ಕೊಂಡಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕಿಸಿದ್ದಾರೆ. ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ರುವ ಸುಮನ್ ಫಂಕ್ಷನ್ ಹಾಲ್‍ನಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಮಾ ವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‍ನಲ್ಲಿ ಮುಸ್ಲಿಮರಿಗೆ ಉಸಿರು ಗಟ್ಟಿದ ವಾತಾವರಣವಿದೆ. ಅಲ್ಪಸಂಖ್ಯಾತರ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ. ಈ…