ತಂಬಾಕು ಸೇವನೆ ಮಾರಕ ರೋಗಗಳಿಗೆ ನಾಂದಿ
ಮೈಸೂರು

ತಂಬಾಕು ಸೇವನೆ ಮಾರಕ ರೋಗಗಳಿಗೆ ನಾಂದಿ

June 1, 2018

ಹುಣಸೂರು: ನಮ್ಮ ದೇಶದಲ್ಲಿ ತಂಬಾಕು ಸೇವÀನೆಯಿಂದ ಪ್ರತಿ ದಿನ 2500ಕ್ಕೂ ಹೆಚ್ಚು ಜನರು ಸಾಯು ತ್ತಿದ್ದು, ಈ ದುಶ್ಚಟದಿಂದ ಮಾನವ ಶಕ್ತಿ ಕುಂದುತ್ತಿದೆ ಎಂದು ತಾಲೂಕು ಆರೋಗ್ಯಾ ಧಿಕಾರಿ ದೇವತಾಲಕ್ಷ್ಮಿ ವಿಷಾದಿಸಿದರು.

ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮುಂದೆ ಇಂದು ಬೆಳಿಗ್ಗೆ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಆರೋಗ್ಯ ಇಲಾಖೆ, ಐಟಿಐ ಹಾಗೂ ಮೆಡಿಕಲ್ ವರ್ಕರ್ ಸಂಯುಕ್ತವಾಗಿ ಏರ್ಪಡಿಸಿದ್ದ ತಂಬಾಕು ರಹಿತ ಅರಿವು ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂಬಾಕು ಸೇವನೆ ಈಗ ಕೇವಲ ಶೋಕಿಗಾಗಿ ಮಾಡುವ ಚಟವಾಗಿದ್ದು, ತಂಬಾಕಿನಲ್ಲಿ 4000ಕ್ಕೂ ಹೆಚ್ಚು ರಸಾಯನಿಕಗಳಿವೆ. ಅದರ ಸೇವನೆಯಿಂದ ಅನೇಕ ರೋಗ ಗಳಿಗೆ ಕಾರಣವಾಗಲಿದೆ ಎಂದರು.
ಸಿಗರೇಟು, ಬೀಡಿ ಸೇರಿದಂತೆ ಅನೇಕ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡು ವುದರಿಂದ ಶ್ವಾಸಕೋಶದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ದಂತ ಕ್ಷಯ, ಹೊಟ್ಟೆಯಲ್ಲಿ ಅಲ್ಸರ್, ರಕ್ತಹೀನತೆ, ನರದೌರ್ಬಲ್ಯ, ಕಣ ್ಣನ ತೊಂದರೆ, ಗ್ಯಾಂಗ್ರಿನ್, ವಿಕೃತ ವಿರ್ಯಾಣು, ಕುಂದಿದ ಕಾರ್ಯಕ್ಷಮತೆ ಸೇರಿದಂತೆ ನೂರಾರು ಕಾಯಿಲೆಗಳಿಗೆ ತುತ್ತಾಗಿ ಅಂತ್ಯ ಕಾಣ ಬೇಕಾಗುತ್ತದೆ ಎಂದರು.

ತಂಬಾಕು ಸೇವನೆಯ ಪಿಡುಗಿನಲ್ಲಿ ಹೆಚ್ಚಾಗಿ ಯುವಜನರು ಮಾರು ಹೋಗಿದ್ದು, ಇದರಿಂದ ಅವರ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಯುವ ಶಕ್ತಿ ದಿನೇ ದಿನೆ ತಮ್ಮ ಚೈತನ್ಯದ ಉತ್ತಮ ಬದುಕನ್ನು ಹಾಳು ಮಾಡಿಕೊಂಡು ಬೇಗ ಅಂತ್ಯ ಕಾಣುತ್ತಿದ್ದಾರೆ. ಇದಕ್ಕಾಗಿ ತಂಬಾಕು ಸೇವನೆಯಿಂದ ಯುವ ಜನರು ಹೊರ ಬಂದು, ಸ್ವಚ್ಛಂದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವು, ಹಿರಿಯ ಸಹಾಯಕ ಶಿವನಂಜು, ಐ.ಟಿ.ಐ ವಿದ್ಯಾರ್ಥಿ ಗಳು, ಆಶಾ ಕಾರ್ಯಕರ್ತರು, ಮಹಿಳಾ ಎ.ಎನ್.ಎಂ ಗಳು, ಅರ್.ಬಿ.ಎಸ್.ಕೆ ಮೆಡಿಕಲ್ಸ್ ವರ್ಕರ್ಸ್ ಭಾಗವಹಿಸಿದ್ದರು.

Translate »