ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ
ಮೈಸೂರು

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ

April 30, 2018

ಹುಣಸೂರು: ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ ಕಾಂಗ್ರೆಸ್ ಮುಸ್ಲಿಂ ಸಮುದಾಯದ ರಕ್ತದಿಂದ ಕೈಯನ್ನು ತೊಳೆದು ಕೊಂಡಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ರುವ ಸುಮನ್ ಫಂಕ್ಷನ್ ಹಾಲ್‍ನಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಮಾ ವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‍ನಲ್ಲಿ ಮುಸ್ಲಿಮರಿಗೆ ಉಸಿರು ಗಟ್ಟಿದ ವಾತಾವರಣವಿದೆ. ಅಲ್ಪಸಂಖ್ಯಾತರ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ. ಈ ಬಾರಿ ಚುನಾವಣೆ ಯಲ್ಲಿ ಅಲ್ಪಸಂಖ್ಯಾತರು ಒಂದಾಗಿ ಜೆಡಿಎಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಹೆಚ್. ವಿಶ್ವನಾಥ್ ಮಾತ ನಾಡಿ, ಜೆಡಿಎಸ್ ಸಂಘ ಪರಿವಾರ ಅಲ್ಲ. ಕಾಂಗ್ರೆಸ್ ಸಂಘ ಪರಿವಾರ. ತಾಲೂಕಿ ನಲ್ಲಿ ನಾನು ಕೂಡ 35 ವರ್ಷಗಳಿಂದ ಅಲ್ಪಸಂಖ್ಯಾತರ ಬೆನ್ನೆಲುಬಾಗಿ ನಿಂತಿ ದ್ದೇನೆ. ಕೆ.ಆರ್.ನಗರದಲ್ಲಿ ಅಲ್ಪಸಂಖ್ಯಾತ ರಿಗೆ ಧಕ್ಕೆಯಾಗದಂತೆ ನಾನು ಬೆಂಬಲಿಸಿ ದ್ದೇನೆ. ಈ ಬಾರಿ ಹುಣಸೂರಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ವಿರುದ್ಧ ದಾಖಲಿಸಲಾಗಿರುವ ದೂರು ಗಳನ್ನು ಕೂಡಲೇ ರದ್ದುಪಡಿಸಲಾ ಗುವುದು ಎಂದು ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹೆಚ್.ಎಂ.ಫಜ್ಹಲುಲ್ಲಾ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದ ಮೇಲೆ ನಮ್ಮ ತಾಲೂಕಿನ ಹಿರಿಯ ಮುಖಂಡರು ಹಾಗೂ ನಾನು ಸೂಕ್ತ ಸ್ಥಾನಮಾನ ಪಡೆದಿದ್ದೇವೆ. ಇನ್ನು ಮುಂದೆ ನಾವು ಹೆಚ್.ವಿಶ್ವನಾಥ್ ಅವರನ್ನು ಬೆಂಬ ಲಿಸಲು ಒಂದಾಗುತ್ತೇವೆ ಎಂದರು.

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ, ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ರಾದ ಹಜರತ್‍ಜಾನ್, ಹೆಚ್.ಪಿ.ಸತೀಶ್ ಕುಮಾರ್, ನಂಜಪ್ಪ, ಸರ್ದಾರ್, ಜೆಡಿಎಸ್ ಹಿರಿಯ ಮುಖಂಡ ಡಾ.ಮಹಬೂಬ್‍ಖಾನ್, ಮಾಜಿ ಶಾಸಕರ ಪುತ್ರ ಗಣೇಶಗೌಡ, ಮಾಜಿ ಪುರಸಭಾಧ್ಯಕ್ಷ ಚಂದ್ರಶೇಖರ್, ಮಹಮದ್ ಪೀರ್, ಫಜûಲ್ ಹಾಗೂ ಇನ್ನಿತರರು ಹಾಜರಿದ್ದರು.

Translate »