ಬಿಜೆಪಿ ಅಭ್ಯರ್ಥಿ ಶಂಕರ್ ಬೆಂಬಲಿಸಿ ನಾಮಪತ್ರ ಹಿಂದಕ್ಕೆ: ಮಹೇಶ್‍ಕುಮಾರ್
ಮೈಸೂರು

ಬಿಜೆಪಿ ಅಭ್ಯರ್ಥಿ ಶಂಕರ್ ಬೆಂಬಲಿಸಿ ನಾಮಪತ್ರ ಹಿಂದಕ್ಕೆ: ಮಹೇಶ್‍ಕುಮಾರ್

April 30, 2018

ತಿ.ನರಸೀಪುರ: ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರನ್ನು ಬೆಂಬಲಿಸಿ ಜೆಡಿಎಸ್ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಮಹೇಶ್‍ಕುಮಾರ್ ಅವರು ಶುಕ್ರವಾರ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಕಟ್ಟಡ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಧಿಕಾರಿಗಳ ಕಚೇರಿಯಲ್ಲಿ ಉಮೇದು ವಾರಿಕೆಯನ್ನು ಹಿಂಪಡೆದ ನಂತರ ಪಟ್ಟಣದ ವಿವೇಕಾನಂದನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜಾತ್ಯಾತೀತ ಜನತಾದಳ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿದು ಕಾರ್ಯಕರ್ತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಾಮಾಣ ಕವಾಗಿ ಮಾಡಿ ದರೂ ಪಕ್ಷದ ವರಿಷ್ಠರು ಅವಕಾಶದಿಂದ ವಂಚಿಸಿದರು ಎಂದು ಆರೋಪಿಸಿದರು.

ಹಿರಿಯರ ಸಲಹೆ ಹಾಗೂ ಬೆಂಬಲಿಗರ ಒತ್ತಾಯದಂತೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಣಕ್ಕಿಳಿದಿ ದ್ದೇಯಾದರೂ ಈಗ ರಾಜಕೀಯವಾಗಿ ಬಿಜೆಪಿ ಪಕ್ಷದಲ್ಲಿ ದುಡಿಯಲು ನಿರ್ಧರಿಸಿ ಅಭ್ಯರ್ಥಿ ಎಸ್.ಶಂಕರ್ ಅವರನ್ನು ಬೆಂಬಲಿಸಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ. ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿ ಯನ್ನು ಸೇರ್ಪಡೆಗೊಂಡು ಕ್ಷೇತ್ರದಲ್ಲಿ ಗೆಲುವಿಗೆ ನಿಷ್ಠೆಯಿಂದ ದುಡಿಯುತ್ತೇನೆ ಎಂದು ಮಹೇಶ್ ಕುಮಾರ್ ತಿಳಿಸಿದರು.

Translate »