ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿ: ವಿಜಯೇಂದ್ರ
ಚಾಮರಾಜನಗರ

ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿ: ವಿಜಯೇಂದ್ರ

April 30, 2018

ಸರಗೂರು: ಕಾಂಗ್ರೆಸ್ ನವರ ದುರಾಡಳಿತದಿಂದ ಬೇಸತ್ತಿರುವ ಜನರೇ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಠ ಕಲಿಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು.

ಪಟ್ಟಣದ ಅಖಿಲ ನಾಮಧಾರಿ ಗೌಡರ ಸಮುದಾಯ ಭವನದಲ್ಲಿ ಹಮ್ಮಿಕೊಂ ಡಿದ್ದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದ ರಾಜು ಪರ ಮತ ಯಾಚಿಸಿ ಮಾತನಾ ಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಂಬರ್ ಒನ್ ಸರ್ಕಾರ ಎನ್ನು ತ್ತಾರೆ. ಆದರೆ ಮೈಸೂರು ಜಿಲ್ಲೆಯಲ್ಲೇ ರೈತರ ಸಾವು ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಬರೀ ಸುಳ್ಳು ಆಶ್ವಾ ಸನೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಪಣ ತೊಡೋಣ ಎಂದು ಕಾರ್ಯ ಕರ್ತರಿಗೆ ಕರೆ ನೀಡಿದರು. ಅಭ್ಯರ್ಥಿ ಸಿದ್ದರಾಜು ಮಾತನಾಡಿ, ವಿಜಯದ ಯಾತ್ರೆ ನಡೆಸಲು ವಿಜಯೇಂದ್ರ ಬಂದಿ ದ್ದಾರೆ. ಹೆಚ್.ಡಿ.ಕೋಟೆ ತಾಲೂಕಿಗೆ ವಿಜಯೇಂದ್ರ ರವರೇ ಅಭ್ಯರ್ಥಿ ಎಂದು ಭಾವಿಸಿ ಬಿಜೆಪಿಯನ್ನು ಗೆಲ್ಲಿಸಿ. ಯಡಿ ಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿ ಯಾಗಲು ಶ್ರಮಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಕಾರ್ಯಕರ್ತರನ್ನು ಕುರಿತು ಮಾತನಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ. ಗಿರೀಶ್, ಸಮಾಜದ ಹಿರಿಯ ಮುಖಂಡ ರಾದ ಅಪ್ಪಣ್ಣ, ರುದ್ರಪ್ಪ, ಮಾಜಿ ಅಧ್ಯಕ್ಷ ಮಹದೇವಪ್ಪ, ಮೊತ್ತ ಬಸವರಾಜಪ್ಪ, ಜೆ.ಪಿ.ಚಂದ್ರಶೇಖರ್, ಹೋಟೆಲ್ ನಂಜುಂಡಸ್ವಾಮಿ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಯೋಗೀಶ್, ದಡದಹಳ್ಳಿ ಶಿವರಾಜ್, ಹಂಚೀಪುರ ಶಿವಪ್ಪಾಜಿ, ಗಣಪತಿ, ಪುಟ್ಟರಾಜು, ಮಹದೇವಸ್ವಾಮಿ, ಕೆರೆಯೂರು ನಾಗರಾಜಪ್ಪ, ಸರಗೂರು ಬ್ಲಾಕ್ ಅಧ್ಯಕ್ಷ ವಿನಯ್, ತಾಪಂ ಸದಸ್ಯ ಆನಂದ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ, ಸದಸ್ಯ ಮಂಜುಳ ರವಿಕುಮಾರ್, ಮಂಜುಳ ನಾಗರಾಜು ಹಾಗೂ ಕಾರ್ಯಕರ್ತರು ಹಾಜರಿದ್ದರು.

Translate »