ನಂಜನಗೂಡು: ಶಾಸಕ ಕಳಲೆ ಕೇಶವಮೂರ್ತಿ ತವರೂರಾದ ಕಳಲೆಯಲ್ಲಿ ಕಳೆದ ಉಪ ಚುನಾವಣೆ ಯಲ್ಲಿ ಬಿಜೆಪಿಗಿಂತ ಹೆಚ್ಚಿನ ಮತವನ್ನು ಕಾಂಗ್ರೆಸ್ ಪಡೆದಿತ್ತು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೋಟೆಗೆ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರವೇಶಿಸಿ, ಮತ ಬೇಟೆ ಆರಂಭಿಸಿದ್ದಾರೆ.
ಭಾನುವಾರ ಕಳಲೆ ಜಿಪಂ ವ್ಯಾಪ್ತಿಯ ಕಳಲೆ, ಕೆರೆಹುಂಡಿ, ಏಚಗುಂಡ್ಲ, ನವಿ ಲೂರು, ಹೊಸಪುರ, ಮುದ್ದಳ್ಳಿ, ಸಿಂಧುವಳ್ಳಿ, ಸಿಂಧುವಳ್ಳಿಪುರ, ಎಲಚಗೆರೆ, ಕೂಗಲೂರು, ಸಿದ್ದಯ್ಯನಹುಂಡಿ, ಕಸುವಿನ ಹಳ್ಳಿ, ಲಕ್ಷಣಾಪುರ, ಸೂರಳ್ಳಿ, ಬ್ಯಾಳಾರು ಹುಂಡಿ ಗ್ರಾಮಗಳಿಗೆ ಭೆಟಿ ನೀಡಿ ಹರ್ಷವರ್ಧನ್ ಮತಯಾಚಿಸಿದರು.
ಪ್ರತಿ ಗ್ರಾಮಗಳಲ್ಲೂ ಬೆಂಬಲಿಗರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿ ಕೊಂಡರು. ಜಿಲ್ಲಾ ಕಾರ್ಯಕಾರಿಣ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ಕೆ.ಕೆ.ಜಯ ದೇವ್, ರಾಜ್ಯ ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎನ್.ವಿ. ವಿನಯ್‍ಕುಮಾರ್, ತಾಲೂಕು ಘಟಕ ಅಧ್ಯಕ್ಷ ಕೆಂಡಗಣ್ಣಪ್ಪ, ಉಪಾಧ್ಯಕ್ಷ ಶ್ಯಾಂ ಪಟೇಲ್, ಅಣ್ಣಯ್ಯಶೆಟ್ಟಿ, ಎನ್.ಸಿ.ಬಸವಣ್ಣ, ಎಪಿಎಂಸಿ ಸದಸ್ಯ ಗುರುಸ್ವಾಮಿ, ಸಿಂಧುವಳ್ಳಿ ಅಶೋಕ, ಮುದ್ದಳ್ಳಿ ರಾಜೇಶ್, ಪ್ರಜ್ವಲ್, ಶಶಿ, ಸಂತೋಷ್, ಹುಲ್ಲಹಳ್ಳಿ ಸಣ್ಣಯ್ಯ, ಬದನವಾಳು ಗ್ರಾಪಂ ಅಧ್ಯಕ್ಷ ಮಹೇಶ್, ಬ್ಯಾಳಾರು ಮಲ್ಲಿಕಾರ್ಜುನ್, ವಾಲ್ಮೀಕಿ ಚಂದ್ರು, ಇದ್ದರು.