ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು
ಮೈಸೂರು

ಮೈಸೂರಲ್ಲಿ ವೃದ್ಧೆ ಅನುಮಾನಾಸ್ಪದ ಸಾವು

April 30, 2018

ಮೈಸೂರು: ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಬ್ಬಾಳು 2ನೇ ಹಂತ ಮಂಚೇಗೌಡನಕೊಪ್ಪಲಿನ ನಿವಾಸಿ ಚಂದ್ರಮ್ಮ(70) ಶನಿವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಕಾವೇರಿ ವೃತ್ತದ ಬಳಿ ಇರುವ ಕಟ್ಟಡದಲ್ಲಿ ಚಂದ್ರಮ್ಮ ತಮ್ಮ ಪತಿ ಪುರುಷೋತ್ತಮ್ ಅವರೊಂದಿಗೆ ವಾಸವಾಗಿ ದ್ದರು. ಇದೇ ಕಟ್ಟಡದ ಮತ್ತೊಂದು ಭಾಗದಲ್ಲಿ ಅವರ ಸೊಸೆ ಗೀತಾ ಅವರು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಶನಿವಾರ ಗೀತಾ ಅವರು ಸೂರ್ಯ ಬೇಕರಿಯ ಬಳಿ ಇರುವ ತಾಯಿಯ ಮನೆಗೆ ಹೋಗಿದ್ದರು. ಸಂಜೆ ಪಕ್ಕದ ಮನೆಯವರು ಕರೆ ಮಾಡಿ ಅತ್ತೆ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾರೆ.

ಕೂಡಲೇ ಮನೆಗೆ ಬಂದು ನೋಡಿದಾಗ ಮಲಗಿದ್ದ ಸ್ಥಿತಿ ಯಲ್ಲೇ ಅತ್ತೆ ಚಂದ್ರಮ್ಮ ಸಾವನ್ನಪ್ಪಿದ್ದರು. ಈ ವೇಳೆ ಮಾವ ಪುರುಷೋತ್ತಮ್ ಅವರನ್ನು ವಿಚಾರಿಸಿದಾಗ ಊಟ ಮಾಡಿ ಮಲಗಿದ್ದವರು ಮೇಲಕ್ಕೆದ್ದಿಲ್ಲ ಎಂದು ತಿಳಿಸಿದ್ದಾರೆ. ಪುರುಷೋತ್ತಮ್ ಅವರೂ ಸಹ ತೀವ್ರ ಅನಾರೋಗ್ಯ ಪೀಡಿತರಾಗಿರುವುದರಿಂದ ಸೊಸೆ ಗೀತಾ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ಚಂದ್ರಮ್ಮನವರು ತಮಗೆ ಸೇರಿದ ಜಾಗವನ್ನು ಸುಮಾರು 50 ಲಕ್ಷ ರೂ.ಗೆ ತಲಕಾಡು ಮೂಲದ ವ್ಯಕ್ತಿಯೊಬ್ಬರು ಮಾರಾಟ ಮಾಡಿದ್ದರು. ಚಂದ್ರಮ್ಮ ಅವರ ಮೊಮ್ಮಕ್ಕಳು ವಯಸ್ಕರಾಗಿದ್ದರೂ, ಅವರ ಸಹಿ ಪಡೆಯದೆ ಜಾಗ ಖರೀದಿಸಿ ದ್ದವರು ಬ್ರೋಕರ್ ಸಹಾಯದಿಂದ ಖಾತೆ ಮಾಡಿಸಿಕೊಂಡಿ ದ್ದರು. ಚಂದ್ರಮ್ಮ ಸಾವಿನ ನಂತರ ಬ್ಯಾಂಕ್ ಪಾಸ್ ಬುಕ್ ಹಾಗೂ ಆಸ್ತಿ ಪತ್ರಗಳು ನಾಪತ್ತೆಯಾಗಿವೆ. ಆದ್ದರಿಂದ ಇವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಸಂಬಂಧಿಕರು ಆರೋಪಿಸಿ ದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »