ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ ಚಕ್ರ ಕಳವು
ಮೈಸೂರು

ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ ಚಕ್ರ ಕಳವು

July 2, 2018

ಮೈಸೂರು: ಖದೀಮರು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‍ನ 2 ಚಕ್ರ ಮತ್ತು ಸೀಟನ್ನು ಕಳವು ಮಾಡಿರುವ ಘಟನೆ ಹೆಬ್ಬಾಳ್ ಪೊಲೀಸ್ ಕ್ವಾರ್ಟಸ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ದರ್ಶನ್, ಜೂ.25ರಂದು ರಾತ್ರಿ 9 ಗಂಟೆ ವೇಳೆಗೆ ಬೈಕನ್ನು ಮನೆಯ ಮುಂದೆ ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಬೈಕ್ ಮನೆಯ ಮುಂದಿನ ಮರದ ಕೆಳಗೆ ಬಿದ್ದಿತ್ತು. ಸಮೀಪ ಹೋಗಿ ನೋಡಿದಾಗ ಖದೀಮರು ಬೈಕ್‍ನ 2 ಚಕ್ರ ಹಾಗೂ ಸೀಟನ್ನು ಕಳವು ಮಾಡಿದ್ದರು. ಈ ಸಂಬಂಧ ಹೆಬ್ಬಾಳ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »