ಲಾಕ್‍ಡೌನ್ ನಡುವೆಯೂ ಮೈಸೂರಲ್ಲಿ ಖದೀಮರ ಕೈಚಳಕ
ಮೈಸೂರು

ಲಾಕ್‍ಡೌನ್ ನಡುವೆಯೂ ಮೈಸೂರಲ್ಲಿ ಖದೀಮರ ಕೈಚಳಕ

April 18, 2020

ಮೈಸೂರು,ಏ.17(ಆರ್‍ಕೆ)- ಕೊರೊನಾ ವೈರಸ್ ಅಟ್ಟಹಾಸದಿಂದ ಇಡೀ ದೇಶವೇ ಲಾಕ್‍ಡೌನ್ ಮೂಲಕ ಸ್ತಬ್ಧಗೊಂಡಿದ್ದರೂ ಮೈಸೂರಲ್ಲಿ ಕಳೆದ ರಾತ್ರಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಪೊಲೀಸರು ಲಾಕ್‍ಡೌನ್ ನಿರ್ಬಂಧ ವನ್ನು ಮತ್ತಷ್ಟು ಕಠಿಣಗೊಳಿಸಿರುವ ಕಾರಣ ಇಡೀ ಮೈಸೂರು ಜನತೆ ಮನೆಯಲ್ಲೇ ಉಳಿದಿದ್ದರೂ ಕಳ್ಳರು ಮಾತ್ರ ಎರಡು ಬಡಾ ವಣೆಗಳಲ್ಲಿ ನಂದಿನಿ ಹಾಲಿನ ಬೂತ್ ಹಾಗೂ ದೇವಸ್ಥಾನದ ಬಾಗಿಲು ಮೀಟಿ ಕಾಣಿಕೆ ಹುಂಡಿಯನ್ನು ದೋಚಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ಮೈಸೂರಿನ ಹೆಬ್ಬಾಳು 2ನೇ ಹಂತ ಬಡಾವಣೆಯ ಸಿಐಟಿಬಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿನ ಉಮಾ ಮಹೇಶ್ವರಿ ದೇವಸ್ಥಾನದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಪ್ರಾಂಗಣದಲ್ಲಿದ್ದ 2 ಹುಂಡಿಯನ್ನು ಒಡೆದು ಕಾಣಿಕೆ ಹಣ ಕೊಂಡೊಯ್ದಿರು ವುದು ಇಂದು ಬೆಳಿಗ್ಗೆ ತಿಳಿದು ಬಂದಿತು.

ಅದೇ ವೇಳೆ ಸಿಐಟಿಬಿ ಕಲ್ಯಾಣ ಮಂಟ ಪದ ಮುಖ್ಯ ರಸ್ತೆಯ ಕಾರ್ನರ್‍ನಲ್ಲಿರುವ ನಂದಿನಿ ಹಾಲಿನ ಬೂತ್‍ನ ಶೆಟರ್ ಮೀಟಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 4 ಸಾವಿರ ರೂ. ನಗದನ್ನು ಕಳವು ಮಾಡಿ ದ್ದಾರೆ. ಇಂದು ಮುಂಜಾನೆ ಬಾಗಿಲು ತೆರೆಯಲು ಹೋದ ಮಾಲೀಕರಾದ ಮೀನಮ್ಮ ಅವರಿಗೆ ಬೂತ್‍ನಲ್ಲಿ ಕಳ್ಳತನ ವಾಗಿರುವುದು ಕಂಡು ಬಂದಿತು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದಾವಿಸಿದ ಹೆಬ್ಬಾಳು ಠಾಣೆ ಪೊಲೀಸರು, ದೇವಸ್ಥಾನ ಮತ್ತು ಹಾಲಿನ ಬೂತ್ ಮಹ ಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಮತ್ತೊಂದೆಡೆ ದಟ್ಟಗಳ್ಳಿಯ ಕನಕ ದಾಸ ಸರ್ಕಲ್ ಸಮೀಪವೂ ಒಂದು ಹಾಲಿನ ಬೂತ್ ಶೆಟರ್ ಮೀಟಿರುವ ಖದೀ ಮರು ಸುಮಾರು ಎರಡು ಸಾವಿರ ರೂ. ನಗದು ಕದ್ದಿದ್ದಾರೆ. ಕುವೆಂಪುನಗರ ಠಾಣೆ ಇನ್‍ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಸ್ಥಳೀಯ ಕಾರ್ಪೊರೇಟರ್ ಪ್ರೇಮಾ ಶಂಕರೇಗೌಡ, ಶ್ವಾನ ದಳದ ಸಿಬ್ಬಂ ದಿಯೂ ಕಳ್ಳತನವಾಗಿದ್ದ ಉಮಾ ಮಹೇ ಶ್ವರಿ ದೇವಸ್ಥಾನ ಮತ್ತು ಹಾಲಿನ ಬೂತ್ ಬಳಿ ತೆರಳಿ ಪರಿಶೀಲನೆ ನಡೆಸಿದರು.

ಈ ನಡುವೆ ಗುರುವಾರ ಸಂಜೆ ಮೈಸೂರಿನ ಹೆಬ್ಬಾಳು ಎರಡನೇ ಹಂತದ ಸಿಐಟಿಬಿ ಕಲ್ಯಾಣ ಮಂಟಪದ ಹಿಂಭಾ ಗದ ರಸ್ತೆಯಲ್ಲಿ 100 ರೂ. ನ ಏಳು ನೋಟುಗಳು ಪ್ರತ್ಯಕ್ಷವಾಗಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು. ಆ ವೇಳೆ ಹೆಬ್ಬಾಳು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ನೋಟುಗಳನ್ನು ವಶಕ್ಕೆ ತೆಗೆದು ಕೊಂಡು ತನಿಖೆ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »