ಯುವತಿ ಕಣ್ಮರೆ
ಮೈಸೂರು

ಯುವತಿ ಕಣ್ಮರೆ

June 17, 2018

ಮೈಸೂರು: ಮೈಸೂರಿನ ಲಕ್ಷ್ಮೀ ಕಾಂತನಗರದ ನಾಗೇಶ ಎಂಬುವರ ಪುತ್ರಿ ನಿಶ್ಚಿತ ಅರಸ್ ಜೂ.12ರ ರಾತ್ರಿ ಮನೆಯಿಂದ ಹೊರ ಹೋದವರು ಕಣ್ಮರೆ ಯಾಗಿದ್ದಾರೆ. 21 ವರ್ಷ ವಯಸ್ಸು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿರುವ ಆಕೆ ಕನ್ನಡ ಮಾತನಾಡುತ್ತಾರೆ. ಸುಳಿವು ಸಿಕ್ಕಿದಲ್ಲಿ ಹೆಬ್ಬಾಳು ಪೊಲೀಸ್ ಠಾಣೆ (0821-2418318) ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Translate »