ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ
ಮೈಸೂರು

ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ

June 17, 2018

ಮೈಸೂರು:  ಅಧಿಕ ಮಾಸದ ಅಂಗವಾಗಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ `ಗಾನ ಸಿರಿ ವೇದಾಂತ ಲಹರಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಜೂ.17ರಂದು ಸಂಜೆ 5 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಎಸ್.ರವಿಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.16ರಂದು ಸಂಜೆ 5ರಿಂದ 6ರವರೆಗೆ ಬೆಂಗಳೂರಿನ ವಿದ್ವಾನ್ ಕೆ.ವೇಣುಗೋಪಾಲ್ ಅವರಿಂದ ದಾಸರ ಪದ, ವಿದ್ವಾನ್ ಅನಂತ ಕುಲಕರ್ಣಿ, ವಿದ್ವಾನ್ ಡಾ.ಬೆ.ನಾ. ವಿಜಯೀಂದ್ರಾಚಾರ್ಯರಿಂದ ಗಾನಸಿರಿ ವೇದಾಂತ ಲಹರಿ ಕಾರ್ಯಕ್ರಮ ನಡೆಯಲಿದೆ. ಬಾಳಗಾರು ಅಕ್ಷೋಭ್ಯತೀರ್ಥ ಸಂಸ್ಥಾನ ಪೀಠಾಧಿಪತಿ ಶ್ರೀ ರಘುಭೂಷಣ ತೀರ್ಥರು ಉಪನ್ಯಾಸ ನೀಡುವರು ಎಂದು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂ.17ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭದಲ್ಲಿ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಶ್ರೀ ಸುಶಮೀಂದ್ರತೀರ್ಥ ಸ್ವಾಮೀಜಿ, ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 33 ದಿನಗಳ ಕಾಲ ಹರಿಕಥೆ ಮಾಡಿದ ವಿದ್ವಾನ್ ಡಾ.ಬೆ.ನಾ. ವಿಜಯೀಂದ್ರಾಚಾರ್ಯರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ವಿದ್ವಾನ್ ಅನಂತ ಕುಲಕರ್ಣಿ ಅವರಿಂದ ಸಂಗೀತ ಕಾರ್ಯ ಕ್ರಮವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಯಶ್ರೀ ರವಿಕುಮಾರ್ ಉಪಸ್ಥಿತರಿದ್ದರು.

Translate »