ಇಂದಿನಿಂದ ಚಾರ್ವಾಕ ಕಥಾ ನಾಟಕೋತ್ಸವ
ಮೈಸೂರು

ಇಂದಿನಿಂದ ಚಾರ್ವಾಕ ಕಥಾ ನಾಟಕೋತ್ಸವ

July 2, 2018

ಮೈಸೂರು: ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಜು.2ರಂದು ಬೆಳಿಗ್ಗೆ 10.30 ಗಂಟೆಗೆ ಚಾರ್ವಾಕ ಕಥಾ ನಾಟಕೋತ್ಸವದ ಉದ್ಘಾಟನೆ ನೆರವೇರಲಿದೆ. ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ಕುರಿತ ವಿಚಾರ ಸಂಕಿರಣಕ್ಕೆ ಮಾಜಿ ಎಂಎಲ್‍ಸಿ ಗೋ.ಮಧುಸೂದನ್ ಚಾಲನೆ ನೀಡುವರು. ವಿಚಾರವಾದಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಹೆಚ್.ಮೋಹನ್‍ಕುಮಾರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪತ್ರಕರ್ತ ಡಾ.ಕೃಷ್ಣಮೂರ್ತಿ ಚಮರಂ, ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ, ಚಾರ್ವಾಕ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾಚಳ್ಳಿ ಭಾಗವಹಿಸುವರು.

ಪ್ರತಿ ದಿನ ಸಂಜೆ 6.30ಕ್ಕೆ ಚಾರ್ವಾಕ ಕಥಾ ನಾಟಕೋತ್ಸವದಲ್ಲಿ ಜು.2ರಂದು ದಿನೇಶ್ ಚಮ್ಮಾಳೆ ನಿರ್ದೇಶನದಲ್ಲಿ ಮಂಜುನಾಥ ಬೆಳಕೆರೆಯವರ ಷರೀಫ, ಜು.3ರಂದು ಮಹಾದೇವ ಹಡಪದ ನಿರ್ದೇಶನದಲ್ಲಿ ರಾಘವೇಂದ್ರ ಪಾಟೀಲರ ಮತ್ತೊಬ್ಬ ಮಹಾಮಾಯಿ, 4ರಂದು ಡಾ.ಶಶಿಧರ ನರೇಂದ್ರ ನಿರ್ದೇಶನದಲ್ಲಿ ಪ್ಲೀಸ್ ಅರೆಸ್ಟ್ ಮಿ ಹಾಗೂ ಜು.5ರಂದು ಡಾ.ಗಣೇಶ್ ಹೆಗ್ಗೋಡು ನಿರ್ದೇಶನದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಗಳಿಗೆ ಉಚಿತ ಪ್ರವೇಶವಿದೆ.

Translate »