ಹಾಲಿ,ಮಾಜಿ ಶಾಸಕರ ಆರೋಪ- ಪ್ರತ್ಯಾರೋಪ: ಮಂಜುನಾಥ್ ಕುಟುಂಬಕ್ಕೆ ‘ಸುಳ್ಳೇ ಮನೆ ದೇವರು’ – ಹೆಚ್.ವಿಶ್ವನಾಥ್
ಮೈಸೂರು

ಹಾಲಿ,ಮಾಜಿ ಶಾಸಕರ ಆರೋಪ- ಪ್ರತ್ಯಾರೋಪ: ಮಂಜುನಾಥ್ ಕುಟುಂಬಕ್ಕೆ ‘ಸುಳ್ಳೇ ಮನೆ ದೇವರು’ – ಹೆಚ್.ವಿಶ್ವನಾಥ್

July 30, 2018

ಹುಣಸೂರು: ‘ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಅವರ ಕುಟುಂಬ ಸದಸ್ಯರಿಗೆ ಸುಳ್ಳೇ ಮನೆದೇವರು ಎಂದು ಶಾಸಕ ಹೆಚ್.ವಿಶ್ವನಾಥ್ ಟೀಕಿಸಿದರು.

ನಗರದ ವರದಿಗಾರರಕೂಟದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಆದರೆ, ನಡೆದಿರುವ ಎಲ್ಲಾ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ನಾನು ನೀಡಿದ ಹೇಳಿಕೆಗೆ ಮಂಜುನಾಥ ಅವರು ಪ್ರತಿಕ್ರಿಯೆ ನೀಡುವ ಭರದಲ್ಲಿ ನನ್ನನ್ನು ಬ್ಲಾಕ್ ಮೇಲರ್ ಎಂದು ಹೇಳಿದ್ದಾರೆ. ಇದು ಸಭ್ಯ ರಾಜಕಾರಣಿಯ ಲಕ್ಷಣವಲ್ಲ ಎಂದರು.

45 ವರ್ಷಗಳ ರಾಜಕಾರಣದಲ್ಲಿ ನಾನು ಎಂದು ಚಂಡಾಳ ರಾಜಕರಣ ಮಾಡಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ತಿಳಿದಿದೆ. ಆದರೆ, ಎರಡು ಬಾರಿ ಶಾಸಕರಾಗಿದ್ದ ಮಂಜುನಾಥ್ ಅವರಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದೇ ಗೊತ್ತಿಲ್ಲ. ‘ಕುಂಬಳಕಾಯಿ ಕಳ್ಳ ಎಂದರೇ…’ ಇವರು ಏಕೆ? ಹೆಗಲು ಮುಟ್ಟಿ ನೋಡಿಕೋಳ್ಳುತ್ತಾರೆ. ನನ್ನನ್ನು ಬ್ಲಾಕ್ ಮೇಲರ್ ಎಂದಿರುವ ಮಂಜುನಾಥ್ ಬ್ಲಾಕ್‍ಮೇಲರ್ ಮಾತ್ರವಲ್ಲ ಸುಳ್ಳುಗಾರ. ನನ್ನ ಬಗ್ಗೆ ಅವರು ನೀಡಿ ರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಏತ ನೀರಾವರಿ ಯೋಜನೆ ಗುತ್ತಿಗೆಯನ್ನು ನನ್ನ ಸಂಬಂಧಿಕರು ಪಡೆದಿರುವುದಾಗಿ ಅವರು ಹೇಳಿದ್ದಾರೆ. ಇದು ಅವರ ಸುಳ್ಳಿನ ಮಾತು. ನನ್ನ ಸಂಬಂಧಿಕರ ಮತ್ತು ಸಮುದಾಯದವರ ಕುರಿತು ಮಾತನಾಡಬಾರದು. ಇದೇ ಸಮುದಾಯ ಎರಡು ಬಾರಿ ನಿಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ಅವರಿಗೆ ನಿಮ್ಮ ಹೇಳಿಕೆಯಿಂದ ಅಪಮಾನ ಮಾಡಿದರೆ ನಾನು ಸಹಿಸುವುದಿಲ್ಲ. ಒಡೆದು ಅಳುವ ನೀತಿ ಬಿಡಿ, ನನ್ನ ಸಮುದಾಯದ ಮತ್ತು ಪಕ್ಷದ ವಿರುದ್ಧ ಟೀಕಿಸಿದರೆ ಪರಿಸ್ಥಿತಿ ನೇಟ್ಟ ಗಿರುವುದಿಲ್ಲ ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಕರ್ಮಭೂಮಿ ಕಲ್ಲಹಳ್ಳಿಯ ಅಭಿವೃದ್ಧಿಗೆ 10 ಕೋಟಿ ಹಣ ಕೋಡಿಸಿದ್ಧೇನೆ. ಈ ಹಣ ಏನಾಯಿತು? ಕಲ್ಲಹಳ್ಳಿ ಏಕೆ ಅಭಿವೃದ್ಧಿ ಹೊಂದಿಲ್ಲ? ನಾನು ಸಂಸದ ನಾಗಿದ್ದಾಗ ಸಂಸದ ನಿಧಿಯಿಂದ 5 ಕೋಟಿ ಹಣ ನೀಡಿದ್ದೇನೆ. ಈ ಅನುದಾನದಲ್ಲಿ ಯಾವ ಕೆಲಸ ಮಾಡಿಸಿದ್ದೀರಾ? ಎಂದು ಪ್ರಶ್ನಿಸಿದರು. ಹಿರಿಯರ ಬಗ್ಗೆ ಗೌರವದಿಂದ ಮಾತನಾಡುವು ದನ್ನು ಮೊದಲು ಕಲಿತುಕೊಳ್ಳಿ. ತಾಲೂಕಿನ ಅಭಿವೃದ್ಧಿ ಬಗ್ಗೆ ನಿಮಗೆ ಚಿಂತನೆ ಇದ್ದರೆ ಸಲಹೆ ನೀಡಿ, ಎಲ್ಲರು ಸೇರಿ ಕೆಲಸ ಮಾಡೋಣ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಎಂ.ಶಿವ ಕುಮಾರ್, ಮುಖಂಡ ರಾದ ಅಣ್ಣಯ್ಯನಾಯಕ, ಡಿ.ಕೆ.ಕುನ್ನೇಗೌಡ, ಬಸವಲಿಂಗಯ್ಯ, ವಕೀಲ ಪುಟ್ಟರಾಜು

‘ನಮ್ಮ ಮನೆ ದೇವರು ಸುಳ್ಳಲ್ಲ : ಮಾಜಿ ಶಾಸಕ ಮಂಜುನಾಥ್

ಹುಣಸೂರು:  ‘ಶಾಸಕ ಹೆಚ್.ವಿಶ್ವನಾಥ ಅವರು ಮಾದ್ಯಮಗಳಲ್ಲಿ ನನ್ನ ಕುಟುಂಬದವರ ಬಗ್ಗೆ ಕೀಳಾಗಿ ಮಾತನಾಡಿರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ನಮ್ಮ ಮನೆ ದೇವರು ಸುಳ್ಳಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿ, ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ’ ಎಂದು ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ತಿರುಗೇಟು ನೀಡಿದರು.

ನಗರದ ವರದಿಗಾರರ ಕೂಟದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಹೆಚ್. ವಿಶ್ವನಾಥ್ ಅವರು ರಾಜಕಾರಣದಲ್ಲಿ ನಲವತ್ತೈದು ವರ್ಷಗಳ ಅನುಭವ ಹೊಂದಿರುವ ಹಿರಿಯ ರಾಜಕಾರಣಿ. ಅವರು ನನಗೆ ತಿಳಿ ಹೇಳುವುದನ್ನು ಬಿಟ್ಟು, ಕೀಳು ರಾಜಕೀಯ ಮಾಡುವುದು ಬೇಡ. ಅವರು ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು. ಅದನ್ನು ಬಿಟ್ಟು ಚಿಕ್ಕವರಿಂದ ಬುದ್ಧಿ ಹೇಳಿಸಿಕೋಳ್ಳುವುದು ಬೇಡ’ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಗ್ರಾಮ ಕಲ್ಲಹಳ್ಳಿಯ ಕಾಮಗಾರಿಯ ಉಸ್ತು ವಾರಿಯನ್ನು ನಿಮ್ಮ ಅಳಿಯ ಹೆಚ್.ಸಿ.ರಾಮೇಂದ್ರ ನೋಡಿಕೊಳ್ಳುತ್ತಿದರು. ಅದನ್ನು ನಿಮ್ಮ ಆಪ್ತರಾದ ಚೇತನ ಕೆಲಸ ಮಾಡಿದ್ದು, ಇದು ನಾನು ಹೇಳಿದ ಸುಳ್ಳುಲ್ಲ. ಎಂ.ಬಿ. ಪುಸ್ತಕಗಳು ಹೇಳುತ್ತಿವೆ ಎಂದು ಶಾಸಕರ ಮಾತಿಗೆ ಉತ್ತರಿಸಿದರು.

ವಿಶ್ವನಾಥ್ ಅವರು ತಾರ್ಕಿಕವಾಗಿ ಚಚೆರ್ ಮಾಡುವುದನ್ನು ಬಿಡಿ. ಹಿಂದೆ ಹೆಚ್.ಡಿ.ದೇವೇಗೌಡರಿಗೆ ಹಾಗೂ ಹೆಚ್.ಡಿ.ಕುಮಾರ ಸ್ವಾಮಿ ಅವರ ಬಗ್ಗೆಯೂ ಮಾತನಾಡಿದ್ದೀರಿ. ನಿಮ್ಮ ಬೇನ್ನ ಹಿಂದೆ ನಡೆದಿರುವ ಸತ್ಯ ತಿಳಿದುಕೊಳ್ಳಿ ನನಗೆ 10 ವರ್ಷದಲ್ಲಿ ಬುದ್ಧಿ ಬಂದಿಲ್ಲ. ನಿಮಗೆ 45 ವರ್ಷವಾದರೂ ಬುದ್ದಿಯೆ ಇಲ್ಲದವರಂತೆ ಸಾಮಾನ್ಯ ರಾಜಕರಣಿಯಂತೆ ವರ್ತಿ ಸುತ್ತಿದ್ದೀರಿ. ಹಾಗಾಗಿಯೇ, ರಾಜ್ಯ ಮಟ್ಟದಲ್ಲಿ ನಿಮಗೆ ‘ಬೊಗಳೆ ವಿಶ್ವನಾಥ್’ ಎಂದು ಬಿರುದು ನೀಡಿರುವುದು ಮರೆಯಬೇಡಿ ಎಂದರು.

ಹಿಂದೆ ನೀವು ಸೋತಿದಾಗ ಮೈಸೂರು-ಕೊಡಗು ಲೋಕಸಭಾ ಸಭಾ ಸದಸ್ಯ ಸ್ಥಾನಕ್ಕೆ ಟಿಕೆಟ್ ಕೊಡಿಸಿ ನಿಮ್ಮ ಗೆಲುವಿಗೆ ನನ್ನ ಪರಿಶ್ರಮವಿದೆ. ನೀವು ಸಂಸದ ರಾಗಿದ್ದಾಗ 5 ಕೋಟಿ ಅನುದಾನ ನೀಡಿದ್ದೇನೆ ಎಂದು ಹೇಳಿದ್ದೀರಾ. ನೀವು ನನಗೆ ಸಾಲ ನೀಡಿದ್ದೀರಾ? ನೀವು ಯಾರಿಗೆ ಕೊಟ್ಟಿದ್ದೀರಾ ಅವರನ್ನೇ ಹೋಗಿ ಲೆಕ್ಕ ಕೇಳಿ ಎಂದು ಶಾಸಕರ ಪ್ರಶ್ನೆಗೆ ಉತ್ತರಿಸಿದರು.

ಕಲ್ಲಹಳ್ಳಿ ಅಭಿವೃದ್ಧಿಗೆ 10 ಕೋಟಿ ನೀಡಿದ್ದೀರಿ. ಆ ಸಮಿತಿಯಲ್ಲಿ ನೀವು ಇದ್ದೀರಾ. ಬಂದು ಲೆಕ್ಕ ಹಾಕಿಸಿ ಅಕ್ರಮವಾಗಿದ್ದರೆ ತನಿಖೆ ಮಾಡಿಸಿ ದಯ ಮಾಡಿ ನಿಮ್ಮ ತಪ್ಪನ್ನು ಮರೆತು ನಮ್ಮಗಳ ತೇಜೋವಧೆ ಮಾಡುವುದನ್ನು ಬಿಡಿ. ಇದು ನಿಮಗೆ ಶೋಭೆಯಲ್ಲ. 20 ವರ್ಷ ನಿಮ್ಮೊಂದಿಗೆ ಇದ್ದ ನಮಗೆ ನಿಮ್ಮಲಿ ಇಷ್ಟೊಂದು ವಿಷ ಇದೆ ಎಂದು ತಿಳಿದುಕೊಳ್ಳಲು ಆಗಲಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಂಬಾಕು ಮಂಡಳಿ ಮಾಜಿ ಸದಸ್ಯ ಬಿ.ಎನ್.ಜಯರಾಮು, ಕಾಂಗ್ರೆಸ್ ನಗರಾಧ್ಯಕ್ಷ ಹೆಚ್.ಎಸ್.ಶಿವಯ್ಯ, ಮುಖಂಡರಾದ ಪುಟ್ಟಮಾದಯ್ಯ, ಆಶ್ವಾಳ್ ಕೆಂಪೇಗೌಡ ಇದ್ದರು.

Translate »