ಮಳೆ: ಮನೆ ಗೋಡೆ ಕುಸಿತ
ಹಾಸನ

ಮಳೆ: ಮನೆ ಗೋಡೆ ಕುಸಿತ

July 30, 2018

ಬೇಲೂರು:  ಮಳೆಯ ಪರಿಣಾಮ ಪಟ್ಟಣದ ಕೆರೆ ಬೀದಿಯಲ್ಲಿ ವಾಸದ ಮನೆ ಗೋಡೆ ಕುಸಿದು ಬಿದ್ದಿದೆ.

ಇಂದು ಬೆಳಿಗ್ಗೆ ಪ್ರಾರಂಭವಾದ ಜಡಿ ಮಳೆಯಿಂದ 9ನೇ ವಾರ್ಡಿನ ಕೆರೆಯ ಬೀದಿ ಮುಜೀಪ್ ಅವರ ವಾಸದ ಮನೆಯ ಗೋಡೆಯು ಕುಸಿದು ಬಿದ್ದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ಮನೆ ಮಾಲೀಕರಿಗೆ ಸಾಂತ್ವನ ಹೇಳಿ 5,000 ರೂ.ಗಳ ಧನ ಸಹಾಯ ಮಾಡುವುದರೊಂದಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಸ್ಥಳೀಯರಾದ ರುದ್ರಯ್ಯ ಮುಂತಾದವರಿದ್ದರು.

Translate »