ಹಳೇಬೀಡು ಉಪ ತಹಶೀಲ್ದಾರ್ ಕಟ್ಟಡ ದುರಸ್ತಿಗೆ ಆಗ್ರಹ
ಹಾಸನ

ಹಳೇಬೀಡು ಉಪ ತಹಶೀಲ್ದಾರ್ ಕಟ್ಟಡ ದುರಸ್ತಿಗೆ ಆಗ್ರಹ

July 30, 2018

ಬೇಲೂರು: ತಾಲೂಕಿನ ಹಳೇಬೀಡಿನ ಉಪತಹಶೀಲ್ದಾರ್ ಕಟ್ಟಡ ಶಿಥಿಲಗೊಂಡು ಕಚೇರಿ ಕೆಲಸ ಕಾರ್ಯಗಳಿಗೆ ಬರುವ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಅಡ್ಡಿಯಾಗಿದ್ದು, ಕಟ್ಟಡ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬ್ರಿಟೀಷರ ಕಾಲದಲ್ಲಿ ನಿರ್ಮಿತ ಗೊಂಡಿದ್ದ ಕಟ್ಟಡ ಪೂರ್ಣ ಪ್ರಮಾಣ ದಲ್ಲಿ ಶಿಥಿಲಗೊಂಡಿದೆ. ಛಾವಣಿಯ ಹೆಂಚುಗಳು ಉದುರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಸ್ವಲ್ಪಮಟ್ಟಿಗೆ ಮಳೆ ಬಂದರೂ ಸಾಕು ನೀರು ಕಚೇರಿಯೊಳಗೆ ಇಳಿಯುತ್ತದೆ. ಇದರಿಂದ ಕಚೇರಿಯಲ್ಲಿರುವ ಯಂತ್ರೋಪಕರಣಗಳು, ಪೀಠೋಪಕರಣಗಳು ಹಾಗೂ ದಾಖಲೆಗಳಿಗೆ ಹಾನಿಯಾಗುತ್ತಿದೆ. ಮಳೆಯ ನೀರಿನಿಂದ ಇವುಗಳನ್ನು ರಕ್ಷಿಸಿಡುವುದೇ ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಮಳೆ ಬಂದಾಗ ಪ್ಲಾಸ್ಟಿಕ್ ಹೊದಿಸಿ ಕಂಪ್ಯೂಟರ್, ಯುಪಿಎಸ್, ಪ್ರಿಂಟರ್ ರಕ್ಷಿಸಿಕೊಳ್ಳಬೇಕಾದ ಅಗತ್ಯತೆ ಯಿದೆ ಎದುರಾಗಿದ್ದು ಇದರಿಂದ ಇಲ್ಲಿನ ನೌಕರರಿಗೆ ತ್ರಾಸದಾಯಕವಾಗಿದೆ.

ಈ ನಾಡಕಚೇರಿಗೆ ಹಳೇಬೀಡು ಸುತ್ತಲಿನ ಅಂದಾಜು 50 ಗ್ರಾಮಗಳ ರೈತರು ತಮ್ಮ ದಾಖಲೆಗಳನ್ನು ಇತ್ಯಾದಿಗಳನ್ನು ಪಡೆಯಲು ಬರುತ್ತಾರೆ. ಸೂಕ್ತ ಮಳೆಯಲ್ಲೂ ಸರತಿ ಸಾಲಿನಲ್ಲಿ ನಿಂತು ದಾಖಲೆ ಪಡೆಯು ವಂತಾಗಿದೆ. ಮಳೆ ವೇಳೆ ಕಚೇರಿಯೊಳಗೆ ನೀರು ಆವರಿಸುವುದರಿಂದ ನೀರಿನಲ್ಲೇ ನಿಂತು ತಮ್ಮ ಕೆಲಸ ಮುಗಿಸಿಕೊಂಡು ಹೋಗುವ ಅನಿವಾರ್ಯತೆ ಜನಸಾಮಾನ್ಯರದ್ದಾಗಿದೆ.

ಕಚೇರಿಯಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಶೌಚಾಲಯಕ್ಕೆ ಹೋಗಬೇಕೆಂದರೆ ದೂರದ ಬಸ್ ನಿಲ್ದಾಣಕ್ಕೆ ಬರಬೇಕಿದೆ. ಶಿಥಿಲಗೊಂಡಿ ರುವ ಉಪತಹಶೀಲ್ದಾರ್ ಕಟ್ಟಡ ದುರಸ್ತಿ ಇಲ್ಲವೆ ಬದಲಿ ಕಟ್ಟಡ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Translate »