ಹುಲಿ ದಿನಾಚರಣೆ ಅಂಗವಾಗಿ ಹುಲಿ ಚಿತ್ರವುಳ್ಳ ಲಕೋಟೆ ಬಿಡುಗಡೆ
ಚಾಮರಾಜನಗರ

ಹುಲಿ ದಿನಾಚರಣೆ ಅಂಗವಾಗಿ ಹುಲಿ ಚಿತ್ರವುಳ್ಳ ಲಕೋಟೆ ಬಿಡುಗಡೆ

July 30, 2018

ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನವನವಾದ ಬಂಡೀ ಪುರವು ಅತಿ ಹೆಚ್ಚು ಹುಲಿಗಳನ್ನು ಹೊಂದುವುದರೊಂದಿಗೆ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಶಾಸಕ ಸಿ.ಎಸ್.ನಿರಂ ಜನಕುಮಾರ್ ಹೇಳಿದರು.

ತಾಲೂಕಿನ ಬಂಡೀಪುರದಲ್ಲಿ ಏರ್ಪ ಡಿಸಲಾಗಿದ್ದ ಅಂತರಾಷ್ಟ್ರೀಯ ಹುಲಿ ದಿನಾಚರಣೆ ಮತ್ತು ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 406 ಹುಲಿ ಇದೆ. ಅದರಲ್ಲೂ ಬಂಡೀಪುರದಲ್ಲಿ 139 ಹುಲಿಗಳು ಇರುವುದು ಹುಲಿ ಗಣತಿಯಲ್ಲಿ ಸಾಬೀತಾಗಿದೆ. ಇದು ನಾಡಿನ ಹೆಮ್ಮೆಯಾಗಿದೆ ಎಂದರು.
ಇತ್ತೀಚಿಗೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಉತ್ತಮವಾದ ಮಳೆಯಾಗಿದ್ದು, ಪರಿಸರವು ಹಸಿರಿನಿಂದ ಕಂಗೊಳಿಸುತ್ತಿದೆ.

ಇಂತಹ ಉತ್ತಮ ಪರಿಸರ ಹುಲಿಗಳ ಆವಾಸ ಸ್ಥಾನವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಅರಣ್ಯ ಇಲಾಖೆ ಮತ್ತಷ್ಟು ದಕ್ಷತೆ ಯಿಂದ ಕರ್ತವ್ಯ ನಿರ್ವಹಿಸಲಿ ಎಂದು ಆಶಿಸಿದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಮಾತನಾಡಿ, ದೇಶದಲ್ಲಿಯೇ ಅತೀ ಹೆಚ್ಚು 406 ಹುಲಿ ಕರ್ನಾಟಕದಲ್ಲಿ ಇದೆ. ಅದರಲ್ಲೂ ಬಂಡೀಪುರದಲ್ಲಿ ಅತಿ ಹೆಚ್ಚು ಹುಲಿ ಇದೆ. ಮುಂಬರುವ 2020ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಬಂಡೀಪುರ ಹುಲಿ ಮತ್ತು ಹೆಜ್ಜೆಗುರುತು ಇರುವ ಛಾಯಾಚಿತ್ರವನ್ನು ಭಾರತ ಅಂಚೆ ಇಲಾಖೆಯು 25 ರೂಪಾಯಿ ಮೌಲ್ಯದ ಅಂಚೆ ಲಕೋಟೆಯಲ್ಲಿ ಬಳಸಿ ಇಡೀ ದೇಶಕ್ಕೆ ಬಂಡೀಪುರ ಮತ್ತಷ್ಟು ಪ್ರಸಿದ್ದಿ ಪಡೆಯಲು ಸಹಕಾರಿಯಾಗಿರುವುದು ಹೆಮ್ಮೆಯ ವಿಚಾರ ಎಂದರು.

ಅಂಚೆ ಇಲಾಖೆಯ ಪೆÇೀಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ್ ಮಾತ ನಾಡಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸಲು ಅಂಚೆ ಇಲಾಖೆಯು ಸಾರ್ವಜನಿ ಕರ ಗಮನ ಸೆಳೆಯಲು ಹುಲಿಯ ಚಿತ್ರ ಮತ್ತು ಹೆಜ್ಜೆ ಗುರುತು ಬಳಸಿ ಅಂಚೆ ಲಕೋಟೆ ಬಿಡುಗಡೆ ಮಾಡಿರುವುದು ಅರಣ್ಯ ಹಾಗೂ ಹುಲಿ ಸಂರಕ್ಷಣೆಗೆ ಸಂದೇಶ ಸಾರುವ ಉದ್ದೇಶವಾಗಿದೆ ಎಂದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿ ಕಾರದ ಅಧಿಕಾರಿ ರಾಜೇಂದ್ರ ಗಾರವಾಡ್ ಮಾತನಾಡಿ, ದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶವನ್ನು ಗುರುತಿಸಲಾಗಿತ್ತು,ಇದೀಗ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 50 ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲಾಗಿದೆ. ಹುಲಿಗಳ ಸಂಖ್ಯೆಯಲ್ಲಿ ವಿಶ್ವದ 13 ದೇಶಗಳಲ್ಲಿ ಭಾರತ ದೇಶವು ಹುಲಿಗಳ ಸಂಖ್ಯೆಯಲ್ಲಿ ಅಗ್ರಗಣ್ಯ ಸ್ಥಾನ ಕಾಪಾಡಿಕೊಂಡಿರುವುದು ಭಾರತದ ಹೆಮ್ಮೆಯ ವಿಚಾರವಾಗಿದೆ. ಹುಲಿ ಗಳ ಸಂಖ್ಯೆಯು ಹೆಚ್ಚಾಗಲು ಅರಣ್ಯ ಇಲಾ ಖೆಯ ಕಟ್ಟು ನಿಟ್ಟಿನ ಕ್ರಮಗಳೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಬಂಡೀ ಪುರ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್, ಬಂಡೀಪುರದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಬರೀ 5 ಹುಲಿಗಳು ಇದ್ದವು. ಇದೀಗ 139 ಹುಲಿಗಳು ಇದೆ. ಹುಲಿಗಳ ಸಂಖ್ಯೆ ಹೆಚ್ಚಾಗಲು ಹಾಗೂ ಈ ಬಾರಿ ಅರಣ್ಯಕ್ಕೆ ಶೂನ್ಯ ಬೆಂಕಿಯಾ ಗಲು ಕಾಡಂಚಿನ ಜನರ , ಮಾಧ್ಯಮಗಳ ಸಹಕಾರ ಹೆಚ್ಚಿತ್ತು ಎಂದು ಶ್ಲಾಘಿಸಿದರು.

ಅರಣ್ಯ ಇಲಾಖೆಯು 43 ಸಾವಿರ ಎಲ್‍ಪಿಜಿ ಸಂಪರ್ಕ ಕಲ್ಪಿಸಿದ ಪರಿಣಾಮ ಮರ ಕಡಿತ ಕಡಿಮೆಯಾಗಿ ಪರಿಸರ ಉಳಿಯಲು ಕಾರಣವಾಗಿದೆ. ಕಳೆದ ಬಾರಿ ಉತ್ತಮವಾಗಿ ಮಳೆಯಾದ ಕಾರಣ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ 315 ಕ್ಕೂ ಹೆಚ್ಚು ಕೆರೆಗಳು ತುಂಬಿವೆ, ಈ ಬಾರಿಯೂ ಕೂಡ ಮುಂಗಾರು ಮಳೆಯು ಮಾರ್ಚ್ ತಿಂಗಳ ಲ್ಲಿಯೇ ಆಗಮಿಸಿದ ಹಿನ್ನಲೆಯಲ್ಲಿ ಈ ಬಾರಿಯೂ ಎಲ್ಲಾ ಕೆರೆಗಳು ಭರ್ತಿಯಾ ಗಲಿದ್ದು, ಅರಣ್ಯದ ವನ್ಯಜೀವಿಗಳ ಸಹಜ ಜೀವನಕ್ಕೆ ಉತ್ತಮ ವಾತಾವರಣ ಕೂಡಿದೆ ಎಂದರು. ಕಾರ್ಯಕ್ರಮದಲ್ಲಿ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಗತ್ ರಾಂ, ಹಿರಿಯ ಅಂಚೆ ಅಧೀಕ್ಷಕ ಸಂದೇಶಮಹದೇವಪ್ಪ, ಜಿಲ್ಲಾ ಪಂಚಾ ಯಿತಿ ಸದಸ್ಯ ಬಿ.ಕೆ.ಬೊಮ್ಮಯ್ಯ, ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ವನ್ಯಜೀವಿಗಳ ಪರಿಪಾಲಕ ಚೋಳರಾಜ್ ಇತರರು ಇದ್ದರು.

Translate »