ಚಾಮರಾಜನಗರ: ಸಂಸದ ಆರ್.ಧ್ರುವನಾರಾಯಣ್ ಅವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗ ಚಾ.ನಗರದಲ್ಲಿ ಜುಲೈ 31 ರಂದು ಬೃಹತ್ ಉದ್ಯೋಗ ಮೇಳ ಹಾಗೂ ಆರೋಗ್ಯ ತಪಾಸಣೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಲಿದೆ.
ನಗರದ ತಾಲೂಕು ಕಚೇರಿ ಪಕ್ಕದ ಮೈದಾನದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೋದಿದತ್ತ ಬಂತೇಜಿ, ಮೋಹನ್ ಮನೋರಾಜ್, ಸೈಯದ್ ಮುಖ್ತರ್ ಹಾಫಿಜ್ ಎ ಖುರಾನ್, ಸಚಿವ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಮಲೆಯೂರು ಗುರುಸ್ವಾಮಿ, ಗೀತಾಮಹದೇವಪ್ರಸಾದ್, ಎನ್.ಧರ್ಮ ಸೇನಾ, ಎಸ್.ಜಯಣ್ಣ, ಎ.ಆರ್.ಕೃಷ್ಣ ಮೂರ್ತಿ, ಕಳಲೆ ಎನ್.ಕೇಶವಮೂರ್ತಿ, ಜೆ.ಜಿ.ಕಾವೇರಿಯಪ್ಪ, ಎಸ್.ಬಾಲರಾಜು ಇತರರು ಪಾಲ್ಗೊಳ್ಳಲಿದ್ದಾರೆ.