ಒಂದೇ ನಂಬರ್‍ನ ಎರಡು ಬೈಕ್: ಓರ್ವನ ಬಂಧನ
ಮೈಸೂರು

ಒಂದೇ ನಂಬರ್‍ನ ಎರಡು ಬೈಕ್: ಓರ್ವನ ಬಂಧನ

June 11, 2018

ಹುಣಸೂರು:  ಒಂದೇ ನೋಂದಣಿ ಸಂಖ್ಯೆ ಇದ್ದ ಎರಡು ಬೈಕ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯದಲ್ಲಿ ರಾಜ್ಯ ಮಟ್ಟದ ಪತ್ರಿಕೆ ಯೊಂದರ ಪ್ರಸಾರಣಾಧಿಕಾರಿ ಗಿರೀಶ್ ಬಂಧಿತನಾಗಿದ್ದು, ಅವರನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿವರ: ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಗರದ ಬೈಪಾಸ್ ರಸ್ತೆಯ ಕಿರಿಜಾಜಿ ಸರ್ಕಲ್‍ನಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಮೈಸೂರು ಕಡೆಯಿಂದ ನಗರದ ಕಡೆಗೆ (ಕೆಎ 11-ವಿ 8117) ಒಂದೇ ನಂಬರಿನ ಎರಡು ಬೈಕ್‍ಗಳು ಬರುತ್ತಿದ್ದುದನ್ನು ಗಮನಿಸಿದ ಎಎಸ್‍ಐ ಪಾಪೇಗೌಡ ಮತ್ತು ತಂಡದವರು, ಬೈಕ್‍ಗಳನ್ನು ತಡೆದು ವಾಹನಗಳ ದಾಖಲಾತಿ ಪರಿಶೀಲಿಸಿದಾಗ ಯಾವುದೇ ದಾಖಲಾತಿಗಳು ಇಲ್ಲದ ಕಾರಣ ವಾಹನಗಳ ಸಮೇತ ಇಬ್ಬರನ್ನೂ ತಮ್ಮ ವಶಕ್ಕೆ ಪಡೆದುಕೊಂಡರು.

ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಒಂದೇ ನಂಬರಿನ ಎರಡು ಬೈಕ್‍ಗಳು ಇರುವುದನ್ನು ಕಂಡ ಗ್ರಾಮದ ಜನರು ಅನುಮಾನದಿಂದ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಗ್ರಾಮಾಂ ತರ ಪೆÇಲೀಸರು ನಗರ ಪೆÇಲೀಸರಿಗೆ ವಿಷಯ ತಿಳಿಸಿದಾಗ ತಕ್ಷಣ ಹೆದ್ದಾರಿ ವಾಹನ ಪರಿಶೀಲನೆ ನಡೆಸುತ್ತಿರುವ ತಂಡಕ್ಕೆ ಮಾಹಿತಿ ನೀಡಿದರು. ಮಾಹಿತಿ ಪಡೆದ ತಂಡ ವಾಹನ ಪರಿಶೀಲನೆ ನಡೆಸುವಾಗ ಈ ವಾಹನಗಳು ಸಿಕ್ಕಿಬಿದ್ದವು.

ಗಿರೀಶ್ ಕೆಎ 11-ವಿ 8117 ನಂಬರಿನ ಹೀರೋ ಹೋಂಡಾ ಫ್ಯಾಷನ್ ಪ್ರೋ ಹಾಗೂ ಅದೇ ನಂಬರಿನ ಮತ್ತೊಂದು ಹೀರೋ ಹೋಂಡಾ ಶೈನ್ ಬೈಕ್‍ಗಳನ್ನು ಹೊಂದಿದ್ದು, ಒಂದು ಬೈಕ್‍ನ್ನು ತನ್ನ ತಂಗಿಯ ಗಂಡ ತಾಲೂಕಿನ ಸೋಮನ ಹಳ್ಳಿ ಗ್ರಾಮದ ಪುಟ್ಟಸ್ವಾಮಿಯವರ ಮಗ ಶಿವಕುಮಾರ ಹುಣಸೂರಿನಲ್ಲಿ ಓಡಿಸು ತ್ತಿದ್ದು, ಮತ್ತೊಂದು ಹೋಂಡಾ ಶೈನ್ ಬಿ.ಎಸ್. ಗಿರೀಶ್ ಮಂಡ್ಯದಲ್ಲಿ ಓಡಿಸುತ್ತಿದ್ದರು. ಇಂದು ಹುಣಸೂರಿನ ತಂಗಿ ಮನೆಗೆ ಗಿರೀಶ ಬಂದಿದ್ದಾಗ ಒಂದೇ ನಂಬರಿನ ಎರಡು ಬೈಕ್‍ಗಳು ಕಂಡು ಗ್ರಾಮಸ್ಥರು ಪೆÇಲೀಸರಿಗೆ ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ.

ವಿಷಯ ತಿಳಿದ ನಗರ ಪೆÇಲೀಸರು ದಾಖಲೆಗಳೇ ಇಲ್ಲದ ಎರಡು ಬೈಕ್‍ಗಳನ್ನು ತಮ್ಮ ವಶಕ್ಕೆ ಪಡೆದು, ಆರೋಪಿ ಗಿರೀಶ್.ಬಿ.ಎಸ್ ಅವರನ್ನು ಬಂಧಿಸಿ ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಗಂಗಾಧರಪ್ಪ ತಿಳಿಸಿದರು.

Translate »