ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಮೈಸೂರು

ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

June 2, 2018

ಹುಣಸೂರು: ತಾಲೂಕಿನ ಗಾವಡಗೆರೆ ಸಮೀಪದ ಕಳ್ಳಿಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಇಂದು ಬೆಳಿಗ್ಗೆ ಚಿರತೆಯೊಂದು ಕಾಣ ಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ವಿಷಯ ತಿಳಿದು ಅರಣ್ಯ ಇಲಾಖೆಯ ವರು ಬಂದು ಗ್ರಾಮಸ್ಥರ ಸಹಾಯದಿಂದ ಚಿರತೆಗೆ ಅರವಳಿಕೆ ಚುಚುಮದ್ದು ನೀಡಿ ಬಲೆಯ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ನಾಗೇಗೌಡರ ಜಮೀನಿನಲ್ಲಿ ಉಳುಮೆ ಮಾಡುವಾಗ ಜಮೀನಿನ ಮರದ ಕೆಳಗೆ ಕರುವನ್ನು ಕಟ್ಟಿಹಾಕಲಾಗಿತ್ತು. ಇದನ್ನು ಕಂಡ ಚಿರತೆ ಮರದಿಂದ ಕೆಳಗೆ ಇಳಿದು ಬರುತಿದ್ದಂತೆ ಜಮೀನಿನಲ್ಲಿದ್ದ ನಾಲ್ಕು ನಾಯಿ ಗಳು ಚಿರತೆಯನ್ನು ಹೆದರಿಸಲು ಕಿರುಚಿದವು. ಈ ಶಬ್ದಕ್ಕೆ ಚಿರತೆ ಮತ್ತೆ ಮರದ ಮೇಲೆ ಹೋಯಿತು. ವಿಷಯ ತಿಳಿದ ಅಕ್ಕಪಕ್ಕದ ಜಮೀನಿನವರು ಹಾಗೂ ನೂರಾರು ಗ್ರಾಮಸ್ಥರು ಜಮಾಯಿಸಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಬಂದು ಬಲೆ ಯನ್ನು ತರಿಸಿದರು. ಪಶುವೈದ್ಯಾಧಿಕಾರಿ ಡಾ.ಮುಜಿಬ್ ಅರವಳಿಕೆಯ ಔಷಧಿ ಉಳ್ಳ ಸೂಜಿಯನ್ನು ಶೂಟ್ ಮಾಡಿದಾಗ ಪ್ರಜ್ಞೆ ಕಳೆದುಕೊಂಡಿತು. ನಂತರ ಬಲೆ ಹಾಕಿ ಬಂಧಿಸಿ ಗ್ರಾಮಸ್ಥರ ಸಹಾಯದಿಂದ ಚಿರತೆಯನ್ನು ಆನೆಚೌಕೂರ್ ಗೇಟ್ ಬಳಿಯ ಅರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಆರ್‍ಎಫ್‍ಓ ಶಾಂತ ಕುಮಾರಸ್ವಾಮಿ, ಎಸಿಎಫ್ ಪೂವಯ್ಯ, ವನ್ಯಜೀವಿ ವಿಭಾಗದ ಪ್ರಸನ್ನಕುಮಾರ್, ಎನ್.ಎಂ. ರಿಜ್ವಾನ್‍ಅಹಮದ್, ಅರಣ್ಯ ರಕ್ಷಕರಾದ ಪ್ಯಾರೆಜಾನ್, ದೇವಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಈ ಸಂದರ್ಭ ದಲ್ಲಿ ಜಿಪಂ ಸದಸ್ಯರಾದ ಸಾವಿತ್ರಮ್ಮ ಮಂಜು, ಮಾಜಿ ಸದಸ್ಯ ದೇವರಾಜ್, ಗ್ರಾಮದವ ರಾದ ಮಂಜುನಾಥ್, ಎಂ. ದೇವರಾಜು, ಗಣಪತಿ ಇಂದಾಲ್ಕರ್ ಸೇರಿದಂತೆ ನೂರಾರು ಮಂದಿ ನೆರೆದಿದ್ದರು.

Translate »