ಮಡಿಕೇರಿ ಕೋಟೆಯಲ್ಲಿ ವಾಸ್ತವ್ಯ ಹೂಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್
ಕೊಡಗು

ಮಡಿಕೇರಿ ಕೋಟೆಯಲ್ಲಿ ವಾಸ್ತವ್ಯ ಹೂಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್

June 2, 2018

ಮಡಿಕೇರಿ: ಮಡಿಕೇರಿಯಲ್ಲಿ ರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂ ರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಕೋಟೆ ಆವರಣ ದಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಮ್ಮ ದ್ವಿಚಕ್ರ ವಾಹನದಲ್ಲಿ ದಾಖಲಾತಿ ಗಳ ಸಹಿತ ಗಂಟುಮೂಟೆಯೊಂದಿಗೆ ಮೈಸೂರಿನಿಂದ ಮಡಿಕೇರಿ ಆಗಮಿಸಿದ ಹಾಲೇರಿ ನಾಗರಾಜು ಒಡೆಯರ್ ಜಿಲ್ಲಾ ಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸತೀಶ್ ಅವರಿಗೆ ಮಡಿಕೇರಿ ಕೋಟೆ ಪ್ರದೇಶ ತನಗೆ ಸೇರಬೇಕೆಂದು ಪ್ರತಿ ಪಾದಿಸಿ ಮನವಿ ಪತ್ರ ಸಲ್ಲಿಸಿದರು.

ಇಂಗ್ಲೆಂಡ್ ರಾಣ , ವಿವಿಧ ಪುರಾತತ್ವ ಇಲಾಖೆಗಳು ಮತ್ತು ವಂಶವೃಕ್ಷದಲ್ಲೂ ತನ್ನ ಹೆಸರಿನ ದಾಖಲೆಗಳಿವೆ ಎಂದು ನಾಗರಾಜು ಒಡೆಯರ್ ಅಪರ ಜಿಲ್ಲಾ ಧಿಕಾರಿಗಳ ಗಮನ ಸೆಳೆದರು. ಬಳಿಕ ಮಡಿಕೇರಿ ಕೋಟೆಗೆ ತೆರಳಿದ ಅವರು ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದ ಕಚೇರಿ ಆವ ರಣದಲ್ಲಿ ಹಾಸಿಗೆ ಹಾಸಿ ಮಲಗುವ ಮೂಲಕ ತಮ್ಮ ಹಕ್ಕು ಪ್ರತಿಪಾದಿಸಿದರು.

ಈ ಸಂದರ್ಭ ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್, ತಾನು ದೊಡ್ಡ ವೀರರಾಜ ಅವರ ಮಗಳು ಮಹಾರಾಣ ದೇವಮ್ಮಾಜಿ ಮತ್ತು ಮಲ್ಲಪ್ಪ ದಂಪತಿಯ ಮರಿಮಗನಾಗಿದ್ದೇನೆ. ಹಾಲೇರಿ ವಂಶಸ್ಥರ ವಂಶವೃಕ್ಷದಲ್ಲೂ ನನ್ನ ಹೆಸರಿದ್ದು, ವಿವಿಧ ನ್ಯಾಯಾಲಯಗಳು ಕೂಡಾ ಅದನ್ನು ಮಾನ್ಯ ಮಾಡಿವೆ. ನನ್ನ ಬಳಿ ಮಡಿಕೇರಿ ಕೋಟೆ ತನಗೆ ಸೇರಬೇಕೆಂಬುದಕ್ಕೆ 400 ಬಗೆಯ ದಾಖಲೆಗಳಿವೆ. ಇಂಗ್ಲೆಂಡ್‍ನ ರಾಜಮನೆತನ ದಿಂದ ಈ ದಾಖಲೆಗಳನ್ನು ಪಡೆಯ ಲಾಗಿದೆ. ಕೇಂದ್ರ ಹಾಗೂ ಮದ್ರಾಸ್, ಮೈಸೂರು ಪುರಾತತ್ವ ಇಲಾಖೆ ಮತ್ತು ಬೆಂಗಳೂರು ವಿಧಾನಸೌಧದಿಂದಲೂ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದು, ಹಾಲೇರಿ ವಂಶಸ್ಥರ ಕುಡಿಗಳು ಇಂದಿಗೂ ಪಿರಿಯಾಪಟ್ಟಣ ಭಾಗದಲ್ಲಿ ನೆಲೆಸಿ ದ್ದಾರೆಂದು ವಿವರಿಸಿದರು.

ಮಡಿಕೇರಿಯಲ್ಲಿ ಹಾಲೇರಿ ವಂಶಸ್ಥರು ಆಳ್ವಿಕೆ ನಡೆಸುತ್ತಿದ್ದ ಸಂದರ್ಭ ಇಂಗ್ಲೆಂಡ್‍ನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸುಮಾರು 6,59,960 ರೂಪಾಯಿಗಳನ್ನು ಶೇ.6 ರಷ್ಟು ಬಡ್ಡಿ ನೀಡುವುದಾಗಿ ಹೇಳಿ ಪಡೆದುಕೊಂಡಿತ್ತು. ಈ ಕುರಿತು ತಾವು ಇಂಗ್ಲೆಂಡ್‍ನಲ್ಲಿ ಪೀಟರ್ ಟಾಲ್ಡ್ ಎಂಬ ಬ್ರಿಟಿಷ್ ವಕೀಲರನ್ನು ನೇಮಿಸಿ ಆ ಮೂಲಕ ಈ ವಿಚಾರವನ್ನು ದಾಖಲೆ ಸಹಿತ ಇಂಗ್ಲೆಂಡ್‍ನ ರಾಣ ಎಲಿಜಬೆತ್ ಮತ್ತು ಯುವರಾಜ ಚಾಲ್ರ್ಸ್ ಹಾಗೂ ಪ್ರಧಾನಿ ಕಾರ್ಟನ್ ಬ್ರೌನ್ ಅವರ ಗಮನಕ್ಕೆ ತಂದಿದ್ದೇ ಈ ಸಂದರ್ಭ ಅವರು ಸಾಲ ಪಡೆದು ಹಿಂತಿರುಗಿಸದಿದ್ದುದಕ್ಕೆ ಲಿಖಿತ ರೂಪದಲ್ಲಿ ಕ್ಷಮೆ ಕೋರಿದ್ದರೆಂದು ನಾಗರಾಜು ಒಡೆಯರ್ ತಿಳಿಸಿದರು.

ಈ ಕುರಿತು ತಾನು ಕಾಮನ್‍ವೆಲ್ತ್ ಕಚೇರಿಗೂ ನೋಟಿಸ್ ನೀಡಿದ್ದೆ ಎಂದು ವಿವರಿಸಿದ ಅವರು, ಮಡಿಕೇರಿಯ ಕೋಟೆ ಒಳಗೆ ವಿವಿಧ ಇಲಾಖೆಗಳು ಕಚೇರಿ ತೆರೆ ದಿವೆ. ಈ ಇಲಾಖೆಗಳು ತಮಗೆ ಬಾಡಿಗೆ ಪಾವತಿಸುತ್ತಿಲ್ಲ ಇದರಿಂದ ತಮಗೆ ನಷ್ಟ ವಾಗಿದ್ದು, ಇಲಾಖೆಗಳು ತಕ್ಷಣವೇ ತಮಗೆ ಬಾಡಿಗೆ ಪಾವತಿಸಬೇಕೆಂದು ಆಗ್ರಹಿಸಿದರು.

ಮಡಿಕೇರಿ ಕೋಟೆಯ ಆಸ್ತಿ ನನ್ನ ಸ್ವಂತ ಸ್ವತ್ತಾಗಿದ್ದು, ಆಸ್ತಿ ವಿವಾದ ಬಗೆಹರಿಯದೇ ತಾನು ನಿರ್ಗಮಿಸುವುದಿಲ್ಲವೆಂದು ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಸ್ಪಷ್ಟಪಡಿಸಿದರು. 76 ವರ್ಷದ ಇಳಿ ವಯಸ್ಸಿನಲ್ಲೂ ಎರಡು ಚೀಲ ದಾಖಲೆ ಗಳು, ಹಾಸಿಗೆ, ದಿಂಬು, ಬೆಡ್‍ಶೀಟ್ ಕಂಬಳಿಯೊಂದಿಗೆ ರಾತ್ರಿ ಊಟವನ್ನು ಕೂಡಾ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ತಮ್ಮ ದ್ವಿಚಕ್ರ ವಾಹನದಲ್ಲಿ ಮಡಿಕೇರಿಗೆ ಹೊತ್ತು ತಂದಿರುವುದು ವಿಶೇಷ.

Translate »