ಶುದ್ಧ ಕುಡಿಯುವ ನೀರು ಘಟಕ ಪರಿಶೀಲಿಸಿದ ಶಾಸಕ ಹರ್ಷವರ್ಧನ್
ಮೈಸೂರು

ಶುದ್ಧ ಕುಡಿಯುವ ನೀರು ಘಟಕ ಪರಿಶೀಲಿಸಿದ ಶಾಸಕ ಹರ್ಷವರ್ಧನ್

June 2, 2018

ಮಲ್ಕುಂಡಿ:  ನಂಜನಗೂಡು ತಾಲೂಕಿನ ಮಾದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಹರ್ಷವರ್ಧನ್ ಪರಿಶೀಲಿಸಿ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಮಾರು 124 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಸರಬರಾಜಿನ ಕನಸು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರದ್ದಾಗಿದ್ದು, ಅವರ ಅಭಿವೃದ್ದಿ ಶ್ರೀರಕ್ಷೆಯಿಂದ ನಾನು ಗೆಲುವು ಸಾದಿಸಿದೆ. ನಾನು ಮತದಾರರಿಗೆ ಚಿರಋಣ ಯಾಗಿ ಕೆಲಸ ಮಾಡುತ್ತೇನೆ ಎಂದರು.

ಹುಲ್ಲಹಳ್ಳಿ ಭಾಗದ ನಾಡ ಕಛೇರಿ, ಪ್ರವಾಸಿ ಮಂದಿರಗಳಿಗೆ ಬೇಟಿ ನೀಡಿ ಅವ್ಯವಸ್ಥೆ ಯಾಗಿರುವ ಬಗ್ಗೆ ಸ್ಥಳದಲ್ಲೆ ದೂರವಾಣ ಮೂಲಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಕೂಡಲೇ ಸರಿಪಡಿಸಬೇಕೆಂದು ಎಚ್ಚರಿಕೆ ನೀಡಿದರು. ಈ ವೇಳೆ ತಾ.ಪಂ. ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ಹಿಂದುಳಿದ ವರ್ಗದ ಜಿಲ್ಲಾ ಉಪಾಧ್ಯಕ್ಷ ಅಣ್ಣಯ್ಯಶೆಟ್ಟಿ, ತಾ.ಪಂ. ಸದಸ್ಯರುಗಳಾದ ಎಸ್.ಬಸವ ರಾಜು, ಶಿವಣ್ಣ ನಾಯಕ ಮುಖಂಡರುಗಳಾದ ಎಂ.ಪುಟ್ಟಸ್ವಾಮಿ, ತರಗನಹಳ್ಳಿ ಬಸವರಾಜು, ಹರದನಹಳ್ಳಿ ಬಸಪ್ಪ, ಕೆ.ಟಿ.ನಟರಾಜು, ಹುರ ಚಂದ್ರು, ಸಂತೋಷ್, ದೇವಿರಮನಹಳ್ಳಿ ಬಸವರಾಜು, ರಜಾಕ್ ಸೇರಿದಂತೆ ಪ್ರಮುಖರು ಹಾಜರಿದ್ದರು

Translate »