ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ
ಮೈಸೂರು

ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ

June 2, 2018

ತಿ.ನರಸೀಪುರ: ಪ್ರಸ್ತುತ ಸಮಾಜವನ್ನು ಚಾರಿತ್ರಿಕ ಜಾಗೃತಿ ಗೊಳಿಸಿ, ಬಹುಜನರನ್ನು ರಾಜಕೀಯ ಎಚ್ಚರಿ ಸುವುದೇ ಬಹುಜನ ಸಮಾಜ ಪಕ್ಷದ ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಹಾಗೂ ಹಿರಿಯ ಮುಖಂಡ ಬಿ.ಆರ್.ಪುಟ್ಟಸ್ವಾಮಿ ಹೇಳಿದರು.

ಪಟ್ಟಣದ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನಡೆದ ಬಹುಜನ ಸಮಾಜ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಬುದ್ಧ ರಾಷ್ಟ್ರವಾಗಬೇಕಿದ್ದ ಭಾರತ ದೇಶದ ಹಲವಾರು ಐತಿಹಾಸಿಕ ಘಟನೆಗಳನ್ನು ಮರೆಮಾಚಿರುವ ಮನುವಾದಿ ವ್ಯವಸ್ಥೆ ಬರೀ ಸುಳ್ಳನ್ನೇ ಜನರ ತಲೆಯಲ್ಲಿ ತುಂಬುತ್ತಿದೆ. ಗತಕಾಲದಲ್ಲಿ ಮುಚ್ಚಿ ಹೋಗಿರುವ ಐತಿ ಹಾಸಿಕ ಸತ್ಯ ಸಂಗತಿಗಳನ್ನು ಮುನ್ನೆಲೆಗೆ ತಂದು ಜನರಲ್ಲಿ ಚಾರಿತ್ರಿಕ ಜಾಗೃತಿ ಮೂಡಿ ಸುವುದು ಬಿಎಸ್ಪಿ ಚಳವಳಿಯಾಗಿದೆ ಎಂದರು.

ಮೈಸೂರು ಸಂಸ್ಥಾನದ ದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಂಜರು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ವನ್ನು ಕಲ್ಪಿಸಲು ಕೆಆರ್‍ಎಸ್ ಜಲಾಶಯ ವನ್ನು ನಾಡಿನ ಜನರ ತೆರಿಗೆ ಹಣ ಹಾಗೂ ಸಂಸ್ಥಾನದಿಂದ ಬಂಡವಾಳವನ್ನು ಬಳಸಿ ಕೊಂಡು ನಿರ್ಮಾಣ ಮಾಡಿದರು. ಆದರೆ ಡ್ಯಾಂ ಕಟ್ಟಿದವರು ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವಯ್ಯ ಅವರು ಎಂಬಂತೆ ಬಿಂಬಿಸಲಾಗಿದೆ. ಜೊತೆಗೆ ರಾಜಕೀಯ ಅಧಿಕಾರದ ಬಗ್ಗೆ ಜನರನ್ನು ಎಚ್ಚರಗೊಳಿ ಸುವ ಕೆಲಸವನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬಿ.ಆರ್. ಪುಟ್ಟಸ್ವಾಮಿ ತಿಳಿಸಿದರು.

ನೂತನ ಕಛೇರಿಯನ್ನು ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ 63ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಬಿಎಸ್ಪಿ ಜಿಲ್ಲಾ ಕಾರ್ಯ ದರ್ಶಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪುಟ್ಟ ಮರುಡಯ್ಯ, ಮುಖಂಡರಾದ ಸೋಸಲೆ ಶ್ರೀನಿವಾಸಮೂರ್ತಿ, ಕೃಷ್ಣಾಪುರ ಗೋವಿಂದ, ಕೈಯಂಬಳ್ಳಿ ಪುಟ್ಟಸ್ವಾಮಿ, ಕೆಬ್ಬೇಹುಂಡಿ ಬಸವರಾಜು, ಆಟೋ ನಾಗ, ಮುಸುವಿನ ಕೊಪ್ಪಲು ನಾಗರಾಜು, ಮನ್ನೇಹುಂಡಿ ನಾಗರಾಜು, ಮೂಗೂರು ಮಹೇಂದ್ರ, ಪ್ರವೀಣ, ಸೋಮೇಶ, ಪಿ.ಸಿದ್ದಯ್ಯ ಹಾಗೂ ಇನ್ನಿತರರು ಹಾಜರಿದ್ದರು.

Translate »