ಕೊಡಗಿನ ಸುಟ್ಟತ್‍ಮಲೆಯಲ್ಲಿ ಅಕ್ರಮ ಹರಳು ಕಲ್ಲು ದಂಧೆ
ಕೊಡಗು

ಕೊಡಗಿನ ಸುಟ್ಟತ್‍ಮಲೆಯಲ್ಲಿ ಅಕ್ರಮ ಹರಳು ಕಲ್ಲು ದಂಧೆ

June 2, 2018

ಮಡಿಕೇರಿ:  ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ವಲಯ ಹಾಗೂ ಕೊಡಗಿನ ಪುಷ್ಪಗಿರಿ ಅರಣ್ಯ ವಲಯದ ಗಡಿಯಲ್ಲಿ ರುವ ಕೂಜಿಮಲೆ ಮತ್ತು ಕೊಡಗಿನ ಸುಟ್ಟತ್‍ಮಲೆ ವ್ಯಾಪ್ತಿಯಲ್ಲಿ ಮರಳಿ ಅಕ್ರಮ ಹರಳು ಕಲ್ಲು ದಂಧೆ ನಡೆಯುತ್ತಿದ್ದು ಮಡಿಕೇರಿಯ ಕೆಲವರು ಈ ವನಸಂಪತ್ತು ಲೂಟಿಯಲ್ಲಿ ತೊಡಗಿರುವ ಸುಳಿವು ಲಭಿಸಿದೆ. ಒಂದೊಮ್ಮೆ ರೂ. 500 ರಿಂದ 700 ಮೊತ್ತಕ್ಕೆ ಹರಳು ಕಲ್ಲು ಕೆ.ಜಿ.ಯೊಂದಕ್ಕೆ ಮಾರಾಟ ವಾಗುತ್ತಿದ್ದರೆ, ಪ್ರಸಕ್ತ ಸುಮಾರು ರೂ.25 ಸಾವಿರ ದೊರಕಲಿದೆ ಎನ್ನಲಾಗುತ್ತಿದೆ.

1990ರ ಬಳಿಕ ಸುಬ್ರಹಣ್ಯ ವ್ಯಾಪ್ತಿಯ ಕೂಜಿಮಲೆಯಲ್ಲಿ ಈ ದಂಧೆ ಕಾಣ ಸಿ ಕೊಂಡು ಬಳಿಕ ನಿಧಾನವಾಗಿ ಮಡಿಕೇರಿ ಬಳಿಯ ಬಿಳಿಗೇರಿ, ಸಕಲೇಶಪುರ ವಲಯ, ಭಾಗಮಂಡಲ ವ್ಯಾಪ್ತಿಯಲ್ಲಿ ಅವ್ಯಾಹತ ವಾಗಿ ನಡೆಯತೊಡಗಿತ್ತು, ಒಂದು ದಶಕದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿ ಗಳು ಹರಳು ಕಲ್ಲು ದಂಧೆಗೆ ಕಡಿವಾಣ ಹಾಕಿದ್ದರು. ದಂಧೆಯ ಮೂಲ 1992ರಲ್ಲಿ ಬಹಿರಂಗಗೊಂಡ ಅಕ್ರಮ ಹರಳು ಕಲ್ಲು ದಂಧೆಯನ್ನು ಮೊದಲಿಗೆ ಕಡಮಕಲ್ ರಬ್ಬರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಕಾರ್ಮಿ ಕನೊಬ್ಬ ಅರಿತುಕೊಂಡು ಆರ್ಥಿಕವಾಗಿ ಸ್ಥಿತಿ ವಂತನಾಗ ತೊಡಗಿದನಂತೆ. ಆ ಭಾಗದ ಗ್ರಾಮಸ್ಥರು ಹರಳು ಕಲ್ಲುವಿನ ಸುಳಿವು ಪಡೆದು ನಾಲ್ಕೈದು ವರ್ಷ ಸಾವಿರಾರು ಸಂಖ್ಯೆ ಯಲ್ಲಿ ಅದೇ ಕಸುಬಿನಲ್ಲಿ ತೊಡಗಿದ್ದರು.

ಪರಿಣಾಮ ಕೆಲವರು ಮಣ್ಣಿನಡಿ ಸಿಲುಕಿ ದ್ದರೆ,ಮತ್ತೆ ಕೆಲವರು ಈ ದಂಧೆಯಿಂದ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಅಂತಹ ಸನ್ನಿವೇಶದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಜಿಲ್ಲೆಯ ಗಡಿಯಲ್ಲಿ ಹರಳು ಕಲ್ಲು ದೊರಕುವ ಸ್ಥಳಗಳಲ್ಲಿ ಪ್ರತ್ಯೇಕ ಟೆಂಟ್‍ಗಳನ್ನು ನಿರ್ಮಿಸಿ ಕಾವಲು ಸಿಬ್ಬಂದಿ ನಿಯೋಜಿಸಿದ್ದಾರೆ.

ಮೇಲ್ನೋಟಕ್ಕೆ ಹರಳು ಕಲ್ಲು ನಿಯಂತ್ರಿ ಸಲ್ಪಟ್ಟಂತೆ ಭಾಸವಾದರೂ, ಅರಣ್ಯ ಸಿಬ್ಬಂದಿ ಹಾಗೂ ದಂಧೆಕೋರರು ಒಳ ಒಪ್ಪಂದ ಮಾಡಿಕೊಂಡು ಕಳ್ಳ ಮಾರ್ಗ ದಿಂದ ಕೃತ್ಯ ಮುಂದುವರೆಸಿದ್ದಾರೆ. ಮಾತ್ರವಲ್ಲದೆ ಆಮಿಷಗಳಿಗೆ ಒಳಗಾಗಿ ರುವ ಗ್ರಾಮೀಣ ಮುಗ್ಧ ಜನರು ದಿನಗಟ್ಟಲೆ ಮಣ ್ಣನೊಳಗೆ ಸುರಂಗ ಕೊರೆದು, ಕಷ್ಟ ಪಟ್ಟು ಖನಿಜ ಸಂಪತ್ತು (ಹರಳು) ಸಂಗ್ರ ಹಿಸಿ ಕನಿಷ್ಟ ಬೆಲೆಗೆ ದಂಧೆಕೋರರಿಗೆ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಆನಂತ ರದ ವರ್ಷಗಳಲ್ಲಿ ದಂಧೆ ಹತೋಟಿಗೆ ಬಂದಿರುವುದಾಗಿ ಹೇಳಲಾಗಿತ್ತು.

ಆದರೆ, ಕೂಜಿಮಲೆಗೆ ಸೀಮಿತ ವಾಗಿದ್ದ ಹರಳು ಕಲ್ಲು ನಿಕ್ಷೇಪ ಅಗೆಯುವ ಕೆಲಸ ಬಾಳುಗೋಡುವಿನ ಸುಟ್ಟತ್‍ಮಲೆ, ಉಪ್ಪುಕಳ ಮುಂತಾದೆಡೆಗಳಲ್ಲಿ ವಿಸ್ತಾರ ಗೊಂಡಿರುವದಾಗಿ ಗೊತ್ತಾಗಿದೆ. ಈ ಪ್ರದೇ ಶಕ್ಕೆ ಹೊಂದಿಕೊಂಡಂತೆ ಕಡಮಕಲ್ಲು ಬಳಿ ಖಾಸಗಿ ಕಂಪನಿಗೆ ಸೇರಿದ ರಬ್ಬರ್ ತೋಟದ ಕಾರ್ಮಿಕರನ್ನು ಬಳಸಿಕೊಂಡು ಮಡಿಕೇರಿಯ ಕೆಲ ಮಂದಿ ದಂಧೆ ಮುಂದು ವರೆಸಿರುವ ಆರೋಪಗಳು ಕೇಳಿಬಂದಿದೆ.

Translate »