ವಿರಾಜಪೇಟೆ ರಸ್ತೆ ದುರಸ್ತಿಗೆ ಆಗ್ರಹ
ಕೊಡಗು

ವಿರಾಜಪೇಟೆ ರಸ್ತೆ ದುರಸ್ತಿಗೆ ಆಗ್ರಹ

June 2, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ವಾರ್ಡ್‍ಗಳಲ್ಲಿ ರಸ್ತೆಗಳು ತೀರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರು ಓಡಾಡಲು ಸಾದ್ಯವಾಗುತ್ತಿಲ್ಲ ಇದರ ಬಗ್ಗೆ ಪಂಚಾಯಿತಿ ಗಮನ ಹರಿಸದಿ ರುವುದರಿಂದ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಇನ್ನು ಮೂರು ವಾರಗಳಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಸಂಘಟನೆ ವತಿಯಿಂದ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ನಗರ ಘಟಕದ ಕಾರ್ಯದರ್ಶಿ ಶಿವಪ್ಪ ಅವರು ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮತನಾಡಿದ ಅವರು, ಈಗಾಗಲೇ ಮಳೆಗಾಲ ಪ್ರಾರಂಭಿಸಿದಂತಿದ್ದು, ರಸ್ತೆಗಳ ಬದಿ ಚರಂಡಿಗಳು ಮುಚ್ಚಿ ಹೋಗಿ ಸರಾಗವಾಗಿ ನೀರು ಹರಿಯುತ್ತಿಲ್ಲ, ತೋಡುಗಳನ್ನು ಸ್ವಚ್ಚಗೊಳಿಸಿಲ್ಲ, ಅರಸು ನಗರ, ಅಯ್ಯಪ್ಪ ಬೆಟ್ಟಗಳಲ್ಲಿ ಮೆಟ್ಟಿಲು ಗಳನ್ನು ನಿರ್ಮಿಸಬೇಕು. ದಿನ ನಿತ್ಯ ಒಡಾಡುವ ರಸ್ತೆಗಳಲ್ಲಿ ಹೊಂಡ ಗುಂಡಿಗಳಾಗಿದ್ದರೂ ಪಂಚಾಯಿತಿ ಮಾತ್ರ ಏನು ಗೊತ್ತಲ್ಲದಂತೆ ಮೌನ ವಹಿಸಿರುವುದು ಕಂಡುಬಂದಿದೆ. ಪಟ್ಟಣದ ಕಾರು ನಿಲ್ದಾಣ, ಗೌರಿಕೆರೆ ರಸ್ತೆ, ವಿಜಯ ನಗರ, ತಿಮ್ಮಯ್ಯ ಲೇಔಟ್, ಶಿವಕೇರಿ, ದೊಡ್ಡಟ್ಟಿ ಚೌಕಿಯಿಂದ ಶಾಂತ ಚಿತ್ರಮಂದಿರ ದವರೆಗೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇದನ್ನು ಕೂಡಲೇ ಸರಿಪಡಿ ಸುವಂತೆ ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಹರಿದಾಸ್, ಹಮೀದ್ ಇತರರು ಉಪಸ್ಥಿತರಿದ್ದರು.

Translate »