ಜೆಡಿಎಸ್ ಹೋಬಳಿ ಅಧ್ಯಕ್ಷನ ಮೇಲೆ ಹಲ್ಲೆ
ಕೊಡಗು

ಜೆಡಿಎಸ್ ಹೋಬಳಿ ಅಧ್ಯಕ್ಷನ ಮೇಲೆ ಹಲ್ಲೆ

June 2, 2018

ಮಡಿಕೇರಿ:  ಗ್ರಾಪಂ ಸದಸ್ಯರಾಗಿರುವ ಮಾದಾಪುರ ಹೋಬಳಿ ಜೆಡಿಎಸ್ ಅಧ್ಯಕ್ಷರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಸಮೀಪದ ಮೂವತೋಕ್ಲು ಗ್ರಾಮದಲ್ಲಿ ನಡೆದಿದೆ.

ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯ, ಜೆಡಿಎಸ್ ಹೋಬಳಿ ಅಧ್ಯಕ್ಷ ಮುಕ್ಕಾಟೀರ ಬೆಳ್ಳಿ ಯಪ್ಪ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದ ಹಬ್ಬ ಆಚರಣೆ ಸಂಬಂಧ ಸಭೆ ನಡೆಯುತ್ತಿದ್ದ ವೇಳೆ ಇವರ ಮೇಲೆ ಶ್ರೀನಾಥ್ ಎಂಬಾತ ಹಲ್ಲೆ ನಡೆಸಿದ್ದಾನೆ.

ತನ್ನ ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ನೀರಿನ ಗೇಟ್ ವಾಲ್ ಅಳ ವಡಿಸಿದ್ದು, ಮೂರು ಗೇಟ್ ವಾಲ್‍ಗಳಿಗೆ ಬಿಕಲ್ ಮಾಡುವ ಪ್ರಯತ್ನ ನಡೆದಿತ್ತು. ತಾವು ಅದಕ್ಕೆ ಅಡ್ಡಪಡಿಸಿದ ಕಾರಣ ಪಿಡಿಓ ಪರಮೇಶ್ ಅವರ ಪ್ರಚೋದನೆ ನೀಡಿದ ಕಾರಣ ತನ್ನ ಮೇಲೆ ಶ್ರೀನಾಥ್ ಹಲ್ಲೆ ನಡೆಸಿದ್ದಾನೆ ಎಂದು ಬೆಳ್ಳಿಯಪ್ಪ ಆರೋಪಿಸಿದ್ದಾರೆ.
ಮಾಹಿತಿ ತಿಳಿದ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಬೆಳ್ಳಿಯಪ್ಪನ ಕ್ಷೇಮ ವಿಚಾರಿಸಿದರು.

ಸ್ಥಳದಿಂದ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರನ್ನು ದೂರವಾಣ ಮೂಲಕ ಸಂಪರ್ಕಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಕೂಡಲೇ ಕ್ರಮಕೈಗೊಳ್ಳುವ ಭರವಸೆ ನೀಡಿದ ಎಸ್ಪಿ ರಾಜೇಂದ್ರ ಪ್ರಸಾದ್, ಸೋಮವಾರಪೇಟೆ ಠಾಣಾಧಿಕಾರಿಗಳಿಗೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.ಆಸ್ಪತ್ರೆ ಭೇಟಿಯ ವೇಳೆ,ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಸ್.ಎಚ್. ಮತೀನ್, ವಿರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಯುವ ಜನತಾದಳ ಅಧ್ಯಕ್ಷ ಅಮ್ಮಂಡ ವಿವೇಕ್, ಮುಖಂಡರಾದ ರೆನ್ನಿ, ಮುಂತಾದವರು ಹಾಜರಿದ್ದರು.

Translate »