ಬ್ರೇಕ್ ವಿಫಲಗೊಂಡು ಅಂಗಡಿಗೆ ನುಗ್ಗಿದ ಬಸ್
ಕೊಡಗು

ಬ್ರೇಕ್ ವಿಫಲಗೊಂಡು ಅಂಗಡಿಗೆ ನುಗ್ಗಿದ ಬಸ್

June 2, 2018

ಕುಶಾಲನಗರ:  ಬ್ರೇಕ್ ವಿಫಲ ಗೊಂಡ ಖಾಸಗಿ ಬಸ್ ಅಂಗಡಿಗೆ ನುಗ್ಗಿದ ಪರಿಣಾಮ ಪಾದಚಾರಿ ಮೃತಪಟ್ಟು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ಕುಶಾಲನಗರದ ಬಿಎಂ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಇಲ್ಲಿನ ಪಟ್ಣಣ ಪಂಚಾಯಿತಿ ವ್ಯಾಪ್ತಿಯ ಬೈಚನಹಳ್ಳಿ ಗುಂಡುರಾವ್ ನಗರದ ನಿವಾಸಿ ಗೋಪಾಲ್ ಎಂಬುವರ ಪುತ್ರ ರಾಜೇಶ್ (17) ಅಪಘಾತದಲ್ಲಿ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಬಸ್ ಚಾಲಕ ಮೋಹನ್ ಕುಮಾರ್ ಕುಶಾಲ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಲ್ಲಿನ ಬೈಪಾಸ್ ಸರ್ಕಲ್‍ನಿಂದ ಐಬಿ ರಸ್ತೆ ಮಾರ್ಗವಾಗಿ ಕಾರ್ಯಪ್ಪ ವೃತ್ತದ ಬಳಿಯಿರುವ ತಾತ್ಕಲಿಕ ಬಸ್ ನಿಲ್ದಾಣ ದಕ್ಕೆ ಬರುತ್ತಿದ್ದ ಪ್ರಯಾಣ ಕರಿಲ್ಲದೆ ಖಾಸಗಿ ಬಸ್ ಬ್ರೇಕ್ ವಿಫಲಗೊಂಡು ಜಾಮೀಯ ಮಸೀದಿ ಮುಂಭಾಗದ ರಂಗನಾಥ ಎಂಟರ್ ಪ್ರೈಸಸ್‍ಗೆ ನುಗ್ಗಿದೆ. ಈ ಸಂದರ್ಭ ಅಂಗಡಿ ಮುಚ್ಚಿದ್ದು, ಅಂಗಡಿ ಮುಂದೆ ಹೋಗುತ್ತಿದ್ದ ಪಾದಚಾರಿ ರಾಜೇಶ್ ಮೇಲೆ ಬಸ್ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಶಾಂತಿ ಹೋಟೆಲ್ ಪಕ್ಕದ ಇಲಿಯಾಸ್ ಎಂಬುವರ ಹಣ ್ಣನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ತನ್ನ ಸಹೋ ದ್ಯೋಗಿಗಳಾದ ರಮೇಶ್ ಮತ್ತು ವಿಜಯ ಎಂಬವರೊಂದಿಗೆ ಊಟಕ್ಕಾಗಿ ಹೋಗು ತ್ತಿದ್ದ ವೇಳೆ ಬ್ರೇಕ್ ವಿಫಲವಾದ ಬಸ್ ಶರವೇಗದಲ್ಲಿ ನುಗ್ಗಿದೆ. ಈ ಸಂದರ್ಭದಲ್ಲಿ ರಮೇಶ್ ಮತ್ತು ವಿಜಯ ಅಪಾಯದ ಮುನ್ಸೂಚನೆ ಅರಿತು ಓಡಿ ಹೋದ ಪರಿಣಾಮ ಜೀವ ಉಳಿಸುಕೊಂಡರೆ ರಾಜೇಶ್ ಬಸ್‍ಗೆ ಸಿಲುಕಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ನನ್ನು ಆಟೋ ಚಾಲಕರು ಹಾಗೂ ಪೊಲೀಸರು ಕುಶಾಲನಗರ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮದ್ಯೆ ಆತ ಸಾವನ್ನಪ್ಪಿದ್ದಾನೆ.

ಬಸ್ ನುಗ್ಗಿದರಿಂದ ರಂಗನಾಥ ಎಂಟ ರ್‍ಪ್ರೈಸಸ್ ಅಂಗಡಿ ಮುಂಭಾಗ ಸಂಪೂರ್ಣವಾಗಿ ಹಾನಿಯಾಗಿದೆ. ಬಸ್‍ನ ಮುಂಭಾಗವೂ ಜಖಂಗೊಂಡಿದೆ.

ಅಪಘಾತದ ಸುದ್ದಿ ತಿಳಿದು ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಪೊಲೀಸರು ಬಸ್ ತೆರವುಗೊಳಿಸಿ, ಸಾರ್ವಜನಿಕರನ್ನು ಚದುರಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದರು.

ಪ್ರತಿಭಟನೆ: ಖಾಸಗಿ ಬಸ್ ಮಾಲೀಕರು ಸ್ಥಳಕ್ಕೆ ಆಗಮಿಸಿ ಮೃತ ಯುವಕನ ಕುಟುಂ ಬದವರಿಗೆ ಪರಿಹಾರ ನೀಡಬೇಕೆಂದು ಆಗ್ರ ಹಿಸಿ ರಾಜೇಶ್ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬಿಜಿಎಸ್ ಸರ್ಕಲ್ ಬಳಿ ಖಾಸಗಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಡಿವೈಎಸ್ಪಿ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾ ಧಾನ ಪಡಿಸಿದರು. ಖಾಸಗಿ ಬಸ್ ಮಾಲೀ ಕರ ಪರವಾಗಿ ಆನಂದ ಕರಂದ್ಲಾಜೆ, ಜೋಸೆಫ್ ವಿಕ್ಟರ್, ಮೊಹಿದ್ದೀನ್, ಅಬ್ದುಲ್ ಖಾದರ್ ಅವರು ಆಗಮಿಸಿ ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂಬಂಧ ಕುಶಾಲನಗರ ಪೊಲೀ ಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »