ಚುನಾವಣೆಗೆ ಕೊಡಗು ಜಿಲ್ಲಾಡಳಿತ ಸಿದ್ಧತೆ
ಕೊಡಗು

ಚುನಾವಣೆಗೆ ಕೊಡಗು ಜಿಲ್ಲಾಡಳಿತ ಸಿದ್ಧತೆ

June 2, 2018

ಮಡಿಕೇರಿ: ಇದೇ ಜೂನ್ 8 ರಂದು ನಡೆಯುವ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 8 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪಂಚಾಯತ್(ಸೋಮವಾರಪೇಟೆ ತಾಲೂ ಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಶಾಂತಳ್ಳಿ ಹೋಬಳಿ), ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ(ಸೋಮವಾರಪೇಟೆ ತಾಲೂ ಕಿನ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ), ಮಡಿಕೇರಿ ನಗರಸಭೆ ಕಾವೇರಿ ಕಲಾ ಕ್ಷೇತ್ರ, ವಿರಾಜಪೇಟೆಯ ಪಟ್ಟಣ ಪಂಚಾಯತ್‍ಗಳಲ್ಲಿ ತಲಾ ಎರಡು (ನೈರುತ್ಯ ಶಿಕ್ಷಕರ ಮತಗಟ್ಟೆ ಎಡಭಾಗ) ಮತ್ತು ಪದವೀಧರರ ಮತಗಟ್ಟೆ ಬಲಭಾಗ) ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಧಿಕಾರಿ ಅವರು ಹೇಳಿದರು.
ಮತ ಎಣ ಕೆಯು ಮೈಸೂರಿನ ಮಹಾ ರಾಣ ಮಹಿಳಾ ವಾಣ ಜ್ಯ ಮತ್ತು ನಿರ್ವ ಹಣಾ ಕಾಲೇಜಿನಲ್ಲಿ ಜೂನ್ 12 ರಂದು ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕೇತ್ರದ ವ್ಯಾಪ್ತಿಲ್ಲಿ ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವ ಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳು ಒಳಪಟ್ಟಿದ್ದು, ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ತಿತಿತಿ.ಞoಜಚಿgu.ಟಿiಛಿ.iಟಿ ರಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1633 ಮತ ದಾರರಿದ್ದಾರೆ. ಇವರಲ್ಲಿ 947 ಪುರುಷರು ಮತ್ತು 686 ಮಹಿಳಾ ಮತದಾರರಿದ್ದಾರೆ. ಹಾಗೆಯೇ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 1250 ಮತದಾರರಿದ್ದು, 583 ಪುರುಷರು ಮತ್ತು 667 ಮಹಿಳಾ ಮತ ದಾರರು ಇದ್ದಾರೆ ಎಂದು ಎಂದು ಪಿ.ಐ. ಶ್ರೀವಿದ್ಯಾ ಅವರು ವಿವರಿಸಿದರು.
ಜಿಲ್ಲೆಯ 8 ಮತಗಟ್ಟೆಗಳಲ್ಲಿ ಪ್ರತಿ ಮತ ಗಟ್ಟೆಗೆ 4 ರಂತೆ ಮತಗಟ್ಟೆ ಸಿಬ್ಬಂದಿಗಳನ್ನು ಮತ್ತು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೋ ವೀಕ್ಷಕರ ಹಾಗೂ ಪ್ರತಿ ಮತಗಟ್ಟೆಗೆ ಒಬ್ಬರು ವಿಡಿಯೋ ಗ್ರಾಫರ್‍ನ್ನು ನೇಮಕ ಮಾಡಲಾಗಿದೆ ಎಂದರು.

ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಒಟ್ಟು 8 ಜನ ಅಭ್ಯರ್ಥಿಗಳು ಹಾಗೂ ಶಿಕ್ಷಕರ ಕ್ಷೇತ್ರದಿಂದ ಒಟ್ಟು 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾರರು ಚುನಾವಣಾಧಿಕಾರಿಗಳು ನಿಡುವ ನೇರಳೆ ಬಣ್ಣ ಸ್ಕೆಚ್ ಪೆನ್ನು ಮೂಲಕ ಪ್ರಾಶಸ್ತ್ಯ ಮತ 1,2,3 ಎಂದು ನಮೂದಿಸ ಬೇಕಿದೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾ ಯಿಸಿರುವ ಬಗ್ಗೆ ಮತ್ತು ಭಾಗ ಸಂಖ್ಯೆ, ಕ್ರಮ ಸಂಖ್ಯೆಯ ಮಾಹಿತಿಯನ್ನು ಪಡೆದು ಕೊಳ್ಳಲು ತಾಲೂಕು ಕಚೇರಿಗಳಲ್ಲಿ ಮತ ದಾರರ ಮಾಹಿತಿ ಕೇಂದ್ರ ತೆರೆಯಲಾಗಿದೆ ದೂರವಾಣ ಮೂಲಕ ಮಾಹಿತಿ ಪಡೆಯ ಬಹುದಾಗಿದೆ ಎಂದರು.

ದೂರವಣ ವಿವರ ಇಂತಿದೆ: ಮಡಿಕೇರಿ ತಾಲ್ಲೂಕು ಕಚೇರಿ 08272-228396, ಸೋಮವಾರಪೇಟೆ ತಾಲೂಕು ಕಚೇರಿ 08276-284044 ಮತ್ತು ವಿರಾಜಪೇಟೆ ತಾಲ್ಲೂಕು ಕಚೇರಿ 08274-257328 ಸಂಪರ್ಕಿಸಬಹುದಾಗಿದೆ ಎಂದರು.

ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಪ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನಿಯೋಜಿಸಲಾಗಿದ್ದು, ಟಿ.ಎನ್.ಜೀವನ್ ಕುಮಾರ್(ಮಡಿಕೇರಿ ತಾಲೂಕು ಗ್ರಾಮಾಂತರ), ಪಿ.ಲಕ್ಷ್ಮಿ (ಮಡಿಕೇರಿ ನಗರ), ಸುನಿಲ್ ಕುಮಾರ್ (ಸೋಮ ವಾರಪೇಟೆ ತಾಲೂಕು ಗ್ರಾಮಾಂತರ), ಧರ್ಮರಾಜು (ಕುಶಾಲನಗರ ಪಟ್ಟಣ), ಜಯಣ್ಣ (ವಿರಾಜಪೇಟೆ ತಾಲ್ಲೂಕು ಗ್ರಾಮಾಂತರ), ಲಕ್ಷ್ಮಿಕಾಂತ್ (ವಿರಾಜ ಪೇಟೆ ನಗರ) ಇವರನ್ನು ನಿಯೋ ಜಿಸಲಾಗಿದೆ. ಚುನಾವಣೆ ಸಂಬಂಧ 4 ಜೀಪು, ತಲಾ ಒಂದು ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 6 ವಾಹನ ನಿಯೋ ಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಿಳಿಸಿದರು.

Translate »