ವಿದ್ಯಾರ್ಥಿನಿಲಯ: ಅರ್ಜಿ ಆಹ್ವಾನ
ಮೈಸೂರು

ವಿದ್ಯಾರ್ಥಿನಿಲಯ: ಅರ್ಜಿ ಆಹ್ವಾನ

June 2, 2018

ಮೈಸೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆ (ಆಂಗ್ಲ ಮಾದ್ಯಮ)ಗಳಿಗೆ  6 ಮತ್ತು 7ನೇ ತರಗತಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಮೈಸೂರಿನ ಗೌಸಿಯಾನಗರ ಹಾಗೂ ರಾಜೇಂದ್ರನಗರ, ಹುಣಸೂರಿನ ಟೌನ್ ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆ (ಆಂಗ್ಲ ಮಾದ್ಯಮ) ಪ್ರವೇಶಕ್ಕೆ ಅರ್ಜಿ ಆಹ್ವಾನಿsಸಿದೆ.

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರುರವರ ಕಛೇರಿ # 446, ಎಸ್.ಕೆ.ಎರ್. ವಿದ್ಯಾಸಂಸ್ಥೆ, ಸರಸ್ವತಿ ನಿಲಯ, ಕೆಂಪನಂಜಾಂಬ ಆಗ್ರಹಾರ, ಕೆ.ಆರ್. ಮೊಹಲ್ಲಾ, ಮೈಸೂರು-570024 ಇಲ್ಲಿ ಅರ್ಜಿ ಪಡೆದು ಜುಲೈ 10 ರೊಳಗಾಗಿ ಸದರಿ ವಿದ್ಯಾರ್ಥಿನಿಲಯಗಳಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣ ಸಂಖ್ಯೆ: 0821-2422088ನ್ನು ಸಂಪರ್ಕಿಸಬಹುದು.

Translate »