Tag: Hunsur

ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ
ಮೈಸೂರು

ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ

September 7, 2018

ಹುಣಸೂರು: ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರು, ಸಾರ್ವ ಜನಿಕ ರಸ್ತೆ ಒತ್ತುವರಿ, ಸ್ಮಶಾನ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾವೇರಿದ ಚರ್ಚೆ ನಡೆಯಿತು. ಹಾಗಾಗಿ ಗದ್ದಲವೂ ಉಂಟಾಯಿತು. ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಅಗಲಿದ ಮಾಜಿ ಪ್ರಧಾನಿ ವಾಜಪೇಯಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಲಾಯಿತು. ನಂತರ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ನಗರ…

ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

September 5, 2018

ಹುಣಸೂರು: ಯುವ ಜನರು ತಮ್ಮ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡೆ ಮತ್ತು ಯೋಗವನ್ನು ಕಡ್ಡಾಯವಾಗಿ ರೂಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೆಗೌಡರು ತಿಳಿಸಿದರು. ತಾಲೂಕಿನ ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲಾಸಲೇಟ್ ವಿದ್ಯಾಸಂಸ್ಥೆಯಲ್ಲಿ ಪಿಯು ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾಭ್ಯಾಸದ ಜೊತೆಗೆ ನಾಟಕ, ಕ್ರೀಡೆ, ಯೋಗ ಅಭ್ಯಾಸಗಳನ್ನು ಮೈಗೂಡಿಸಿ ಕೊಂಡರೆ ಉತ್ತಮ ಆರೋಗ್ಯ ಲಭಿಸುವುದು ಎಂದರು. ಪ್ರಸ್ತುತ ದಿನಗಳಲ್ಲಿ ಶೆ.80ರಷ್ಟು ನೀರುದ್ಯೋಗಿಗಳಿದ್ದು ಯುವ ಶಕ್ತಿಗೆ…

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್
ಮೈಸೂರು

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್

September 5, 2018

ಹುಣಸೂರು: ಸಾಹಿತಿಗಳನ್ನು ಚಿಂತಕರನ್ನು ಬಂಧಿಸಿ ದೇಶದ್ರೋಹಿಗಳಂತೆ ನಡೆಸಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ಶೋಭಾಯಮಾನವಲ್ಲ ಒಬ್ಬ ಸಾಹಿತಿಯಾಗಿ ಮತ್ತು ಬರಹಗಾರನಾಗಿ ಕೇಂದ್ರದ ಕ್ರಮವನ್ನು ಖಂಡಿಸುತ್ತೇನೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ಇಂದು ಸಂಜೆ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿಗಳು ಬರಹಗಾರರು, ಚಿಂತಕರು, ಮಾಧ್ಯಮಗಳಲ್ಲಿ ಬರೆಯುವವರನ್ನು ಪಟ್ಟಿ ಮಾಡುತ್ತಿದ್ದೀರಿ. ಈ ಬೆಳವಣಿಗೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಇಣುಕಿ ನೋಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಆತಂಕ ವ್ಯಕ್ತಪಡಿಸಿದರು.ಈ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಹಿತ್ಯ ಕ್ಷೇತ್ರದ ಸಾಹಿತಿಗಳು, ಚಿಂತಕರು, ಬರಹಗಾರರು,…

ಎಂಸಿಡಿಸಿಸಿ ಬ್ಯಾಂಕ್ ಹುಣಸೂರು ಶಾಖೆ ಮ್ಯಾನೇಜರ್‍ರಿಂದ 27.79 ಕೋಟಿ ದುರುಪಯೋಗ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಹುಣಸೂರು ಶಾಖೆ ಮ್ಯಾನೇಜರ್‍ರಿಂದ 27.79 ಕೋಟಿ ದುರುಪಯೋಗ

September 2, 2018

ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ(ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ 27,79,60,719 ರೂ.ಗಳನ್ನು ದುರುಪಯೋಗಪಡಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಅವರನ್ನು ಇಂದು ಸೇವೆಯಿಂದ ಬಿಡುಗಡೆ ಮಾಡಿದ್ದು, ನೋಟೀಸ್ ನೀಡಲು ಸಿದ್ಧತೆಗಳು ನಡೆದಿವೆ. ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ ರಾಮಪ್ಪ ಪೂಜಾರ್, ರೈತರಿಗೆ ನೀಡಬೇಕಾದ ಸಾಲದ ಮೊತ್ತ ಕೋಟ್ಯಾಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಎದುರಿಸುತ್ತಿರುವವರು. ಇವರು ರೈತರಿಗೆ ಸಾಲ ನೀಡುವ ಸಲುವಾಗಿ ಹುಣಸೂರು ತಾಲೂಕಿನ ವಿವಿಧ ಸಹಕಾರ ಸಂಘಗಳಿಗೆ ಪೂರೈಸಲು ಕೇಂದ್ರ…

ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

August 30, 2018

ಹುಣಸೂರು: ಹಾಡ ಹಗಲೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಣಸೂರು ತಾಲೂಕು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಇಂದು ಬೆಳಿಗ್ಗೆ ನಡೆದಿದ್ದು, ವಿವಾಹಿತ ಯುವತಿ ನಾಪತ್ತೆ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಕುಟ್ಟವಾಡಿ ಗ್ರಾಮದ ನಾಗರಾಜು (35) ಹತ್ಯೆಗೀಡಾದವರಾ ಗಿದ್ದು, ಇವರು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಶಾಮಿಯಾನ ಅಂಗಡಿ ನಡೆಸುತ್ತಿದ್ದರು. ಇಂದು ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ನಾಗರಾಜು ತನ್ನ…

ಹುಲಿ ಪತ್ತೆಗೆ ಮತ್ತೆ ಕಾರ್ಯಾಚರಣೆ
ಮೈಸೂರು

ಹುಲಿ ಪತ್ತೆಗೆ ಮತ್ತೆ ಕಾರ್ಯಾಚರಣೆ

August 25, 2018

ಹುಣಸೂರು: ತಾಲೂಕಿನ ಹನಗೋಡು ಸಮೀಪದ ಕೆ.ಜಿ. ಹಬ್ಬನಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಯಲ್ಲಿ ಇಲಾಖೆ ಕಾರ್ಯಾಚರಣೆ ಕಾರ್ಯ ಕೈಗೊಂಡಿದ್ದು, ಸ್ಥಳಕ್ಕೆ ವನ್ಯಜೀವಿ ವಿಭಾಗದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ ಮತ್ತು ಸಹಾಯಕ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ವಲಯಕ್ಕೆ ಹೊಂದಿಕೊಂಡಿರುವ ಕೆ.ಜಿ. ಹಬ್ಬನಕುಪ್ಪೆ ಗ್ರಾಮದಲ್ಲಿರುವ 650 ಎಕರೆ ಪ್ರದೇಶದ ತರಗನ್ ಎಸ್ಟೇಟ್‍ನಲ್ಲಿ ಕಳೆದ 8 ದಿನಗಳಿಂದ ನಿರಂತರವಾಗಿ…

ಹುಲಿ ಸೆರೆ ಕಾರ್ಯಾಚರಣೆಗೆ ಡ್ರೋನ್ ಬಳಕೆ
ಮೈಸೂರು

ಹುಲಿ ಸೆರೆ ಕಾರ್ಯಾಚರಣೆಗೆ ಡ್ರೋನ್ ಬಳಕೆ

August 19, 2018

ಹುಣಸೂರು:  ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಕೆ.ಜಿ.ಹಬ್ಬನ ಕುಪ್ಪೆಯಲ್ಲಿ ಜಾನು ವಾರುಗಳನ್ನು ಬಲಿ ತೆಗೆದುಕೊಂಡು ಆತಂಕ ಹುಟ್ಟಿಸಿದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ. ಕಳೆದೊಂದು ವಾರದಿಂದೀಚೆಗೆ ಕೆ.ಜಿ. ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡಿರುವುದಲ್ಲದೆ, ಈಗಾಗಲೇ ಎರಡು ಜಾನುವಾರುಗಳನ್ನು ತಿಂದು ಹಾಕಿದೆ, ಮತ್ತೆರಡು ಜಾನುವಾರು ಗಳನ್ನು ಗಾಯಗೊಳಿಸಿದೆ. ಹುಲಿ ಹಸು ವೊಂದರ ಮೇಲೆ ದಾಳಿ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ವನ್ಯಜೀವಿ…

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ
ಮೈಸೂರು

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ

August 14, 2018

ಹುಣಸೂರು:  ಸರಕಾರ ದಿಂದ ಸಿಗುವ ಕೌಶಲ್ಯ ತರಬೇತಿಗಳನ್ನು ಆದಿವಾಸಿ ಯುವ ಜನತೆ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಎಲ್ಲರಂತೆ ಗೌರವದ ಬದುಕು ನಡೆಸಬೇಕು ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಆದಿವಾಸಿಗಳಿಗೆ ಸಲಹೆ ನೀಡಿದರು. ನಗರದ ಡೀಡ್ ಸಂಸ್ಥೆಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಹೊಲಿಗೆ, ಕಂಪ್ಯೂಟರ್, ವಾಹನ ಚಾಲನಾ ತರಬೇತಿಗಳನ್ನು, ಆದಿವಾಸಿ ವಿದ್ಯಾವಂತ ಯುವಕರು ಪಡೆದುಕೊಳ್ಳುವ ಮೂಲಕ ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಹಲವಾರು ವರ್ಷಗಳಿಂದ ಧ್ವನಿಯಾಗಿ ಪ್ರೋತ್ಸಾಹ…

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕರ್ಮ ಭೂಮಿ ಕಲ್ಲಹಳ್ಳಿಯ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ವಿಶ್ವನಾಥ್
ಮೈಸೂರು

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕರ್ಮ ಭೂಮಿ ಕಲ್ಲಹಳ್ಳಿಯ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ವಿಶ್ವನಾಥ್

August 1, 2018

ಹುಣಸೂರು, ಜು.31- ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸರ ಕರ್ಮಭೂಮಿ ಕಲ್ಲಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ 175ಕ್ಕೆ ಹೊಂದಿಕೊಂಡಿದ್ದು, ಇದರ ಪಕ್ಕದಲ್ಲಿರುವ 2 ಎಕರೆ ಸರ್ಕಾರಿ ಭೂಮಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅರಸರ ಪ್ರತಿಮೆ, ಕಾಂಪ್ಲೆಕ್ಸ್, ಮ್ಯೂಸಿಯಂ ಹಾಗೂ ಸ್ಟಡಿ ಸೆಂಟರ್ ನಿರ್ಮಾಣ ಮಾಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್. ವಿಶ್ವನಾಥ್ ತಿಳಿಸಿದರು. ಅಧಿಕಾರಿಗಳೊಂದಿಗೆ ಕಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅರಸರ ಶತಮಾನೋತ್ಸವ ಅಂಗವಾಗಿ…

ನಿಲುವಾಗಿಲು ಏತ ನೀರಾವರಿ ಯಂತ್ರದ ಟ್ರಾನ್ಸ್‍ಫಾರ್ಮರ್‍ಗೆ ಶಾಸಕ ವಿಶ್ವನಾಥ್ ಚಾಲನೆ
ಮೈಸೂರು

ನಿಲುವಾಗಿಲು ಏತ ನೀರಾವರಿ ಯಂತ್ರದ ಟ್ರಾನ್ಸ್‍ಫಾರ್ಮರ್‍ಗೆ ಶಾಸಕ ವಿಶ್ವನಾಥ್ ಚಾಲನೆ

July 31, 2018

ಹುಣಸೂರು: ತಾಲೂಕಿನಲ್ಲಿರುವ ನೀರಿನ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿ ಜನ, ಜಾನುವಾರುಗಳಿಗೆ ಉಪಯೋಗವಾಗು ವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ತಾಲೂಕಿನ ನಿಲುವಾಗಿಲು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಗೆ ಅಳವಡಿಸಿರುವ ಚಿಲ್ಕುಂದ ಸೀರಿಸ್ ಏತ ನೀರಾವರಿ ಯಂತ್ರಕ್ಕೆ ನೂತನವಾಗಿ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್‍ಗೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, 100 ಹೆಚ್‍ಪಿ ಸಾಮಥ್ರ್ಯದ ಎರಡು ಮೋಟಾರ್‍ಗಳಿಂದ ಚಿಲ್ಕುಂದ, ಕಳಬೆಟ್ಟ, ನಾಗಮಂಗಲ ಹಾಗೂ ಹೊಸಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದ್ದು, ಇದರಿಂದ ನೀರಿನ ಸೆಲೆ…

1 4 5 6 7 8
Translate »