ನಿಲುವಾಗಿಲು ಏತ ನೀರಾವರಿ ಯಂತ್ರದ ಟ್ರಾನ್ಸ್‍ಫಾರ್ಮರ್‍ಗೆ ಶಾಸಕ ವಿಶ್ವನಾಥ್ ಚಾಲನೆ
ಮೈಸೂರು

ನಿಲುವಾಗಿಲು ಏತ ನೀರಾವರಿ ಯಂತ್ರದ ಟ್ರಾನ್ಸ್‍ಫಾರ್ಮರ್‍ಗೆ ಶಾಸಕ ವಿಶ್ವನಾಥ್ ಚಾಲನೆ

July 31, 2018

ಹುಣಸೂರು: ತಾಲೂಕಿನಲ್ಲಿರುವ ನೀರಿನ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿ ಜನ, ಜಾನುವಾರುಗಳಿಗೆ ಉಪಯೋಗವಾಗು ವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ತಾಲೂಕಿನ ನಿಲುವಾಗಿಲು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಗೆ ಅಳವಡಿಸಿರುವ ಚಿಲ್ಕುಂದ ಸೀರಿಸ್ ಏತ ನೀರಾವರಿ ಯಂತ್ರಕ್ಕೆ ನೂತನವಾಗಿ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್‍ಗೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, 100 ಹೆಚ್‍ಪಿ ಸಾಮಥ್ರ್ಯದ ಎರಡು ಮೋಟಾರ್‍ಗಳಿಂದ ಚಿಲ್ಕುಂದ, ಕಳಬೆಟ್ಟ, ನಾಗಮಂಗಲ ಹಾಗೂ ಹೊಸಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದ್ದು, ಇದರಿಂದ ನೀರಿನ ಸೆಲೆ ಜಾಸ್ತಿಯಾಗಿ ಜನ, ಜಾನುವಾರು ಮತ್ತು ಕೃಷಿಗೆ ಅನುಕೂಲವಾಗಲಿದೆ ಎಂದರು. ನಾನು ಸಂಸದನಾಗಿದ್ದಾಗ ನಿಲುವಾಗಿಲು ಏತ ನೀರಾವರಿಗೆ 4.5 ಕೋಟಿ ನೀಡಲಾಗಿತ್ತು, ಗುಣಮಟ್ಟದ ಕಾಮಗಾರಿ ನಡೆಯದೇ ಪೈಪ್‍ಗಳು ಒಡೆದು ಹೋಗಿದ್ದು ತಾತ್ಕಾಲಿಕ ರಿಪೇರಿ ಮೂಲಕ ಕೆರೆ ತುಂಬಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ಸಾಧ್ಯವಾಗು ವುದಿಲ್ಲ ಎಂದು ಹೇಳಿದರು. ಸದರಿ ಯೋಜನೆಯ 2ನೇ ಹಂತದಲ್ಲಿ 14ಕಿ.ಮೀಗೆ ಅಂದಾಜು ಮಾಡಿ 11 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ ಎಂದು ವಿಶ್ವನಾಥ್ ಹೇಳಿದರು.

ಇದೇ ಸಂದರ್ಭದಲ್ಲಿ ಯಶೋಧಪುರ ಗ್ರಾಮಸ್ಥರು ನಿಲುವಾಗಿಲು ಏತ ನೀರಾವರಿ ಯೋಜನೆಯಲ್ಲಿ ಯಶೋಧಪುರ ಕೆರೆಯನ್ನು ಕೈಬಿಡಲಾಗಿದೆ ಎಂದು ದೂರಿದಾಗ, ಸ್ಥಳದಲ್ಲಿದ್ದ ಪಿಡಿಒ ಸತೀಶ್ ಅವರು ಯಶೋಧಪುರ ತಟ್ಟೆಕೆರೆ ಗ್ರಾ.ಪಂಗೆ ಸೇರಿದ್ದು, ಕೆರೆಯನ್ನು ಲ್ಯಾಂಪ್ಸ್ ಮಹಾಮಂಡಲ ದವರು ನಿರ್ವಹಣೆ ಮಾಡುತ್ತಿ ದ್ದಾರೆ. ಈ ಕೆರೆಯನ್ನು ಪಂಚಾಯಿತಿಗೆ ವಹಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್, ಉಪಾಧ್ಯಕ್ಷ ಪ್ರೇಮ್ ಕುಮಾರ್, ಸದಸ್ಯ ಸುರೇಶ್, ಮಂಜುಳಾ ರಾಜೇಗೌಡ, ಶಿವಶೇಖರ, ಎ.ಪಿ.ಎಂ.ಸಿ. ಅಧ್ಯಕ್ಷ ಕುಮಾರ್, ಯಶೋಧಪುರ ವೆಂಕ ಟೇಶ್, ನಗರಸಭಾ ಸದಸ್ಯ ಪ್ರೇಮಾನಂಜಪ್ಪ, ಕೃಷ್ಣ ಬೋವಿ, ಬಿ.ಕೆ.ಪರಮೇಶ್, ವಾಸು, ಗ್ರಾಪಂ ಕುಡಿಯುವ ನೀರು ಯೋಜನೆಯ ಸಹಾಯಕ ಅಭಿಯಂತರ ರಾಜಾರಾಮ್, ಎ.ಇ.ಇ.ಆನಂದನ್ ಉಪಸ್ಥಿತರಿದ್ದರು.

Translate »