ನಂ.ಗೂಡಲ್ಲಿ 23 ವರ್ಷಗಳ ನಂತರ ಮತ್ತೆ ಎಸಿ ಕೋರ್ಟ್ ಪ್ರಾರಂಭ
ಮೈಸೂರು

ನಂ.ಗೂಡಲ್ಲಿ 23 ವರ್ಷಗಳ ನಂತರ ಮತ್ತೆ ಎಸಿ ಕೋರ್ಟ್ ಪ್ರಾರಂಭ

July 31, 2018

ನಂಜನಗೂಡು:  23 ವರ್ಷ ಗಳಿಂದ ಎ.ಸಿ.ಕೋರ್ಟ್ ಇಲ್ಲದೇ ಇಲ್ಲಿನ ವಕೀಲರು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡಲು ಮೈಸೂರಿನ ಎ.ಸಿ.ಕೋರ್ಟ್‍ಗೆ ಅಲೆಯ ಬೇಕಾಗಿತ್ತು.

ಮೈಸೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ನಂಜನಗೂಡು ತಾಲೂಕು ವ್ಯಾಪ್ತಿಯ ಪ್ರಕರಣಗಳನ್ನು ಇಲ್ಲಿನ ತಾಲೂಕು ಕಛೇರಿಯ ನ್ಯಾಯಾಲಯ ಸಭಾಂಗಣ ದಲ್ಲಿ ಕಲಾಪಗಳನ್ನು ನಡೆಸಲು ಇಂದು ಉಪವಿಭಾಗಾಧಿಕಾರಿ ಶಿವೇಗೌಡ ಅಧಿಕೃತ ವಾಗಿ ಚಾಲನೆ ನೀಡುವುದರ ಮೂಲಕ ಎ.ಸಿ.ಕೋರ್ಟ್ ಉದ್ಘಾಟಿಸಿದರು.

ಸಮಾರಂಭದಲ್ಲಿ ಉಪವಿಭಾಗಾದಿಕಾರಿ ಶಿವೇಗೌಡ ಮಾತನಾಡಿ, ನಂಜನಗೂಡು ವಕೀಲರ ಸಂಘದ ಅಧ್ಯಕ್ಷರಾದ ಗಿರಿರಾಜ್, ಕಾರ್ಯದರ್ಶಿ ಹೆಜ್ಜಿಗೆ ನಾಗೇಂದ್ರಪ್ಪ ಹಾಗೂ ಪದಾಧಿಕಾರಿಗಳ ಮನವಿ ಮೇರೆಗೆ ಎ.ಸಿ.ಕೋರ್ಟ್ ಅನ್ನು ಸರ್ಕಾರ ಮಂಜೂರು ಮಾಡಿದ್ದು, ಇನ್ನು ಮುಂದೆ ಮೈಸೂರು ಉಪ ವಿಭಾಗಾ ಧಿಕಾರಿಗಳ ನ್ಯಾಯಾಲಯದಲ್ಲಿ ದಾಖ ಲಾಗಿರುವ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿ ಯಿಂದ ನಂಜನಗೂಡು ತಾಲೂಕು ವ್ಯಾಪ್ತಿಯ ಪ್ರಕರಣಗಳನ್ನು ಇಲ್ಲಿನ ತಾಲೂಕು ಕಛೇರಿಯ ನ್ಯಾಯಾಲಯ ಸಭಾಂಗಣ ದಲ್ಲಿ ಕಲಾಪಗಳನ್ನು ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಗಿರಿರಾಜ್, ಕಾರ್ಯದರ್ಶಿ ಹೆಜ್ಜಿಗೆ ನಾಗೇಂದ್ರಪ್ಪ ಮಾತನಾಡಿ ಇಲ್ಲಿಗೆ ಉಪ ವಿಭಾಗದ ನ್ಯಾಯಾಲಯ ಮಂಜೂ ರಾಗಲು ಕಾರಣರಾದವರನ್ನು ಸ್ಮರಿಸಿ ಕೊಂಡರು. ಆಗಸ್ಟ್ 15 ರೊಳಗೆ ಈ ನ್ಯಾಯಾಲಯ ನಂಜನಗೂಡು ನ್ಯಾಯಾ ಲಯಕ್ಕೆ ಮಂಜೂ ರಾಗಲಿದೆ ಎಂದು ಸಿಹಿ ಸುದ್ದಿ ನೀಡಿದರು.

ಉಪಾಧ್ಯಕ್ಷ ಎ.ಸಿ.ಪ್ರಕಾಶ್ ವಂದಿಸಿ ದರು ಸಭೆಯಲ್ಲಿ ವಕೀಲರು ಸಂಘದ ಎಲ್ಲಾ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.

Translate »