ತಂಬಾಕು ಬ್ಯಾರನ್‍ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ
ಮೈಸೂರು

ತಂಬಾಕು ಬ್ಯಾರನ್‍ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ

July 31, 2018

ಪಿರಿಯಾಪಟ್ಟಣ:  ತಂಬಾಕು ಸಂಸ್ಕರಣೆ ಮಾಡುವಾಗ ಬ್ಯಾರನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ತಂಬಾಕು ಭಸ್ಮವಾಗಿದ್ದು, ರೈತನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ತಾಲೂಕಿನ ನಾಗನಹಳ್ಳಿ ಪಾಳ್ಯದ ರೈತ ವೆಂಕಟೇಶ ಬೋವಿ ಎಂಬುವರ ಬ್ಯಾರನ್ ನಲ್ಲಿ ತಂಬಾಕು ಹದ ಮಾಡುವ ಸಮಯದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಹದ ಮಾಡುತ್ತಿದ್ದ ತಂಬಾಕು ಮಾತ್ರ ವಲ್ಲದೆ ಈ ಹಿಂದೆ ಹದ ಮಾಡಿ ಸಂಗ್ರಹಿ ಸಿದ್ದ ಒಂದೂವರೆ ಲಕ್ಷ ರೂ.ಮೌಲ್ಯದ ತಂಬಾಕು, ಬ್ಯಾರನ್, ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಆರಿಸಲು ಹೋದ ವೆಂಕಟೇಶ ಬೋವಿ ಎಂಬುವರ ಮಗರ ಸಂತೋಷ್ ಕೈ ಕಾಲುಗಳಿಗೆ ಸುಟ್ಟು ಗಾಯವಾಗಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಯಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಬೆಟ್ಟದಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ತಂಬಾಕು ಮಂಡಳಿ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ಕಲ್ಪಿಸಬೇಕೆಂದು ವೆಂಕ ಟೇಶ ಬೋವಿ ಮನವಿ ಮಾಡಿಕೊಂಡಿದ್ದಾರೆ.

Translate »