ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್
ಮೈಸೂರು

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್

September 5, 2018

ಹುಣಸೂರು: ಸಾಹಿತಿಗಳನ್ನು ಚಿಂತಕರನ್ನು ಬಂಧಿಸಿ ದೇಶದ್ರೋಹಿಗಳಂತೆ ನಡೆಸಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ಶೋಭಾಯಮಾನವಲ್ಲ ಒಬ್ಬ ಸಾಹಿತಿಯಾಗಿ ಮತ್ತು ಬರಹಗಾರನಾಗಿ ಕೇಂದ್ರದ ಕ್ರಮವನ್ನು ಖಂಡಿಸುತ್ತೇನೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು.

ಇಂದು ಸಂಜೆ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿಗಳು ಬರಹಗಾರರು, ಚಿಂತಕರು, ಮಾಧ್ಯಮಗಳಲ್ಲಿ ಬರೆಯುವವರನ್ನು ಪಟ್ಟಿ ಮಾಡುತ್ತಿದ್ದೀರಿ. ಈ ಬೆಳವಣಿಗೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಇಣುಕಿ ನೋಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಆತಂಕ ವ್ಯಕ್ತಪಡಿಸಿದರು.ಈ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಹಿತ್ಯ ಕ್ಷೇತ್ರದ ಸಾಹಿತಿಗಳು, ಚಿಂತಕರು, ಬರಹಗಾರರು, ಮಾಧ್ಯಮದ ಅಂಕಣಕಾರರು ಬರವಣಿಗೆ ಮೂಲಕ ಹೋರಾಟ ಮಾಡಬೇಕಾಗಿದೆ ಎಂದರು.

ಗುಪ್ತಚಾರ ಇಲಾಖೆ ಹಾಗು ಸಿಬಿಐಯನ್ನು ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದೆ ತನಿಖಾ ತಂಡಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ.ದೇಶದ ಪ್ರಧಾನಿ ಹತ್ಯೆಗೆ ಪ್ರಗತಿಪರ ಚಿಂತಕರು ಸಂಚು ನಡೆಸಿದ್ದಾರೆ ಎಂಬುದು ಸರಿ ಅಲ್ಲ ಎಂದರು.

ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕೊಂದಿದ್ದು ಬುದ್ದಿಜೀವಿಗಳಲ್ಲ ಕ್ರೀಮಿನಲ್‍ಗಳು, ಭಿನ್ನ ಧ್ವನಿಗಳನ್ನು ಮಟ್ತ ಹಾಕಲು ಕೇಂದ್ರ ಸರ್ಕಾರ ಮಾಡಿರುವ ಪ್ರಯೋಗ ಇದಾಗಿದ್ದು ಇದು ಕೊನೆಗೆ ಎಲ್ಲಿ ಹೋಗಿ ಮುಟ್ಟುತ್ತದೆ ಎಂಬುದು ತುಂಬ ಗಂಭೀರವಾಗಿದೆ ತಾತ್ಸಾರ ಮನಸ್ಸುಗಳೇ ಹೆಚ್ಚಾಗಿರುವ ಪ್ರಸ್ತುತ ವಾತಾವರಣದಲ್ಲಿ ಸಾಧನೆಗಳು ಹೇಗೆ ಸಾಧ್ಯ ಎಂದರು.

ಇಂದಿರಾಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ಮೂಲಕ ಬಡ ಜನರಿಗೆ ಭೂಮಿ, ಜೀತ ಪದ್ಧತಿ ನಿವಾರಣೆ, ಶಾಲೆಗಳ ತೆರೆಯುವಿಕೆ, ಭೂಸುಧಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು ಅದರೆ ಈಗ ಅದಕ್ಕಿಂತ ಹೆಚ್ಚಿನ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಜೆಡಿಎಸ್‍ಅಧ್ಯಕ್ಶ ಹರಳಳ್ಳಿ ಮಾದೇಗೌಡ, ಅಣ್ಣಯ್ಯನಾಯ್ಕ, ಕಿರಂಗೂರು ಬಸವರಾಜು, ಹೊನ್ನಪ್ಪರಾವ್ ಕಾಳಿಂಗೆ ಉಪಸ್ಥಿತರಿದ್ದರು.

Translate »