ಕೊಡಗಿಗೆ ಪ್ರವಾಸಿಗರ ನಿರ್ಬಂಧ ತೆರವಿಗೆ ಒತ್ತಾಯ
ಕೊಡಗು

ಕೊಡಗಿಗೆ ಪ್ರವಾಸಿಗರ ನಿರ್ಬಂಧ ತೆರವಿಗೆ ಒತ್ತಾಯ

September 5, 2018

ವಿರಾಜಪೇಟೆ: ಪ್ರಕೃತಿ ವಿಕೋಪ ವನ್ನು ಮುಂದಿಟ್ಟು ಹೊರ ಜಿಲ್ಲೆಯಿಂದ ಕೊಡ ಗಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಇಡೀ ಕೊಡಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವ ಶ್ಯಕತೆಯೂ ಇಲ್ಲ. ಕೊಡಗನ್ನು ಮರು ನಿರ್ಮಾಣ ಮಾಡಲು ಎಲ್ಲಾ ರೀತಿ ಯಲ್ಲೂ ಸಹಕರಿಸಲು ಬದ್ದರಾಗಿದ್ದು. ನಮಗೆ ಪ್ರವಾಸೋದ್ಯಮವನ್ನು ನಿಯಮಕ್ಕನು ಸಾರವಾಗಿ ಪ್ರಕೃತಿಗೆ ಯಾವುದೇ ಧಕ್ಕೆ ಇಲ್ಲದಂತೆ ಮುಂದುವರಿಸಬೇಕೆಂದು ಟೂರಿಸಂ ಅಧ್ಯಕ್ಷ ಸಾಗರ್ ಗಣಪತಿ ಒತ್ತಾಯಿಸಿದ್ದಾರೆ.
ವಿರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ತಿಂಗಳು ಪ್ರಕೃತಿ ವಿಕೋಪಕ್ಕೆ ಮಡಿಕೇರಿ, ಮಕ್ಕಂದೂರು ಸೇರಿದಂತೆ ಕೊಡ ಗಿನ ಇತರ ಭಾಗಗಳಲ್ಲಿ ಸುರಿದ ಮಹಾ ಮಳೆಗೆ ತುತ್ತಾಗಿ ಅನೇಕರು ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅಸೋ ಸಿಯೇಶನ್ ಆಫ್ ರೂರಲ್ ಟೂರಿಸಂ ಸಂತ್ರಸ್ತರ ಪರಿಹಾರಕ್ಕೂ ನೆರವಾಗಿ ಅಭಯಹಸ್ತ ನೀಡಿರುವುದಾಗಿಯು, ಮೈಸೂರು, ಮಂಡ್ಯ, ಬೆಂಗಳೂರು ಮಹಾನಗರಗಳಂತಹ ದಾನಿಗಳು ಕೊಡ ಗಿನ ಪ್ರಕೃತಿ ವಿಕೋಪಕ್ಕೆ ಪರಿಹಾರ ರೂಪದಲ್ಲಿ ಸ್ಪಂದಿಸಿದ್ದಾರೆ.

ಈಗ ಜಿಲ್ಲಾಧಿಕಾರಿಯವರು ಹೊರ ಜಿಲ್ಲೆಯಿಂದ ಕೊಡಗಿಗೆ ಬರುವ ಪ್ರವಾಸಿ ಗರಿಗೆ ನಿರ್ಬಂಧ ಹೇರಿದ್ದಾರೆ. ಭೂ ಕುಸಿತ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಮಾತ್ರ ಪ್ರವಾಸಿಗರು ಹೋಗುವುದಕ್ಕೆ ನಿರ್ಬಂಧ ಸರಿ. ಆದರೆ ಇಡೀ ಕೊಡಿಗಿನ ಪ್ರವಾಸ ತಾಣವನ್ನು ನಿರ್ಬಂಧಿಸುವ ಅವಶ್ಯಕತೆ ಇಲ್ಲ. ಇದರಿಂದ ರೈತರ ಕೃಷಿ ಹಾಗೂ ಕೊಡಗಿನ ವ್ಯಾಪಾರಿಗಳ ಆರ್ಥಿಕ ಸ್ಥಿತಿ ಮೇಲೆ ಸುಷ್ಪರಿಣಾಮ ಉಂಟಾಗಿದೆ ಎಂದರು. ಪ್ರವಾಸಿಗರ ನಿರ್ಬಂಧದಿಂದಾಗಿ, ರೈತರು, ಟ್ಯಾಕ್ಸಿ ಚಾಲಕರು, ಹೊಟೇಲ್, ಮಾಂಸ ಹಾಗೂ ತರಕಾರಿ ವ್ಯಾಪಾರಿಗಳು ಪ್ರವಾಸಿಗರ ವ್ಯವಹಾರದಿಂದ ವಂಚಿತರಾ ಗಲಿದ್ದಾರೆ. ಕೊಡಗು ಜಿಲ್ಲೆಯ ಈಗಿನ ಪ್ರವಾಸೋದ್ಯಮದಿಂದ ಕೊಡಗಿನ ಪ್ರಕೃ ತಿಗೆ ಯಾವುದೇ ಧಕ್ಕೆ ಇಲ್ಲ. ಬದಲಾಗಿ ಪ್ರವಾಸೋದ್ಯಮ ಆಧಾಯದ ಮೂಲವೂ ಆಗಿದೆ. ಜಿಲ್ಲಾಡಳಿತ ತಕ್ಷಣ ಪ್ರವಾಸಿಗರ ನಿರ್ಬಂಧದ ಆದೇಶವನ್ನು ಮರು ಪರಿ ಶೀಲಿಸಿ, ತೆರವುಗೊಳಿಸಿ ಕೊಡಗನ್ನು ಈ ಹಿಂದಿನಂತೆಯೇ ಪ್ರವಾಸಿ ತಾಣವಾಗಿ ಮುಂದು ವರೆಸುವಂತಾಗಬೇಕು ಎಂದರು.

ಟೂರಿಸಂ ಸಂಘಟನೆಯ ಕಾರ್ಯದರ್ಶಿ ಭಜನ್ ಬೋಪಣ್ಣ ಅವರು ಮಾತನಾಡಿ, ಕೊಡಗಿನಲ್ಲಿ ಪ್ರವಾಸಿಗರ ನಿರ್ಬಂಧದಿಂದ ಯುವಕರ ಉದ್ಯೋಗದ ಮೇಲೂ ವ್ಯತಿ ರಿಕ್ತ ಪರಿಣಾಮ ಬೀರಿದ್ದು. ಪ್ರಕೃತಿ ಸೌಂದ ರ್ಯದ ಮಡಿಲಿನಲ್ಲಿರುವ ಕೊಡಗು ಪ್ರವಾಸಿ ತಾಣವಾಗಿ ಮುಂದುವರೆಯುವು ದರಲ್ಲಿ ಯಾವುದೇ ಅಡ್ಡಿ ಅಡಚಣೆಗಳಿಲ್ಲ. ಹೊರಗಿನ ಪ್ರವಾಸಿಗರಿಗೂ ಇದು ಹೆಮ್ಮೆಯ ಪ್ರವಾಸಿ ತಾಣವಾಗಿದೆ. ಈಗಾಗಲೇ ಕೊಡ ಗಿನ ಪ್ರವಾಸೋದ್ಯಮದ ವಿವಿಧ ಕ್ಷೇತ್ರ ಗಳಲ್ಲಿ ಸುಮಾರು 16000 ಕ್ಕೂ ಹೆಚ್ಚು ಯುವಕರು ಉದ್ಯೋಗದಲ್ಲಿ ತೊಡಗಿ ದ್ದಾರೆ ಎಂದರು.

ಸಂಘಟನೆಯ ಕೆ.ಎನ್.ಪೊನ್ನಪ್ಪ ಮಾತ ನಾಡಿ, ಕೊಡಗು ಪ್ರವಾಸಿ ತಾಣಕ್ಕೆ ಪ್ರವಾ ಸಿಗರ ನಿರ್ಬಂಧ ಹೇರಿರುವುದನ್ನು ತೆರವು ಗೊಳಿಸಲು ಅಸೋಶಿಯೇಶನ್ ಆಫ್ ರೂರಲ್ ಟೂರಿಸಂ ವತಿಯಿಂದ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಟೂರಿಸಂ ಸಂಘಟನೆಯ ಚಿತ್ರಾ ಪೊನ್ನಪ್ಪ, ರಿಲೀಕ್ ಬೋಪಣ್ಣ, ಸುದೀಶ್, ಮಂದಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

Translate »