ಕೊಡಗಿನ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ
ಕೊಡಗು

ಕೊಡಗಿನ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ

September 5, 2018

ಮಡಿಕೇರಿ: ಜಿಲ್ಲಾ ಮಟ್ಟದಲ್ಲಿ ಪ್ರಸಕ್ತ ವರ್ಷದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕ ಟಿಸಲಾಗಿದೆ. ತಾಲೂಕುವಾರು ವಿವರ ಇಂತಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗ(ಕಿರಿಯ)ದಲ್ಲಿ 2ನೇ ಮೊಣ್ಣಂಗೇರಿಯ ಮದೆ ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಸದಾನಂದ, ಪ್ರಾಥಮಿಕ ಶಾಲಾ ವಿಭಾಗ (ಹಿರಿಯ)ದಲ್ಲಿ ಕೋಟೆ ಪೆರಾಜೆ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಬಿ.ಶ್ರೀನಿವಾಸ್‍ರಾವ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸಿ.ಎಂ.ಮುನೀರ್ ಅವರು ಆಯ್ಕೆಯಾಗಿದ್ದಾರೆ.

ಸೋಮವಾರಪೇಟೆ ತಾಲೂ ಕಿನಲ್ಲಿ ಬಿಳಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎ.ಪಿ.ದರ್ಮಪ್ಪ, ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಿ.ಎಸ್.ಪರಮೇಶ್ವರ ಸ್ವಾಮಿ, ಪ್ರೌಢಶಾಲಾ ವಿಭಾಗದಲ್ಲಿ ಕುಶಾಲನಗ ರದ ಸ.ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕ ಸದಾ ಶಿವಯ್ಯ ಎಸ್.ಪಲ್ಲೇದ್ ಅವರು ಆಯ್ಕೆಯಾಗಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ವಿಭಾಗ (ಕಿರಿಯ)ದಲ್ಲಿ ಎಲಿಯಂಗಾಡು ಸ.ಕಿ.ಪ್ರಾ.ಶಾಲೆಯ ನಟರಾಜು ಷಣ್ಮುಖಪ್ಪ ಲಕ್ಕುಂಡಿ, ಪ್ರಾಥಮಿಕ ಶಾಲಾ ವಿಭಾಗ(ಹಿರಿಯ)ದಲ್ಲಿ ಮಂಚಳ್ಳಿಯ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ. ಸೋಮಯ್ಯ ಹಾಗೂ ಪ್ರೌಢಶಾಲಾ ವಿಭಾಗ ದಲ್ಲಿ ಬೆಕ್ಕೆಸೊಡ್ಲೂರಿನ ಶ್ರೀಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕ ಎನ್.ಡಿ.ತಿಮ್ಮಯ್ಯ ಆಯ್ಕೆಯಾಗಿದ್ದಾರೆ.
ಆಯ್ಕೆಗೊಂಡ ಶಿಕ್ಷಕರು ಸೆಪ್ಟೆಂಬರ್ 5 ರಂದು ಬೆಳಗ್ಗೆ 9ಕ್ಕೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆಯುವ ಪ್ರಶಸ್ತಿ ಸಮಾ ರಂಭದಲ್ಲಿ ಹಾಜರಿದ್ದು, ಪ್ರಶಸ್ತಿ ಸ್ವೀಕರಿಸು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಾಲ್ಟರ್ ಡೆಮೊಲ್ಲೊ ಅವರು ತಿಳಿಸಿದ್ದಾರೆ.

Translate »