ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಸ್ಥಾಪಿಸಿದ ಪರಿಹಾರ ಕೇಂದ್ರಗಳಲ್ಲಿ ಆರಂಭಿಕ ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರು ನೆಲೆಸಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ವಾತಾವರ ಣದಲ್ಲಾದ ಬದಲಾವಣೆಯಿಂದ ಈ ಸಂಖ್ಯೆ ಪ್ರಸ್ತುತ 1,666ಕ್ಕೆ ಇಳಿದಿದೆ.
ಬಹಳಷ್ಟು ಮಂದಿಯಲ್ಲಿ ತಮ್ಮ ಬದುಕಿನ ಹಾದಿಯನ್ನು ತಾವೇ ಕಂಡು ಕೊಳ್ಳುವ ಹುಮ್ಮಸ್ಸು ಸರಕಾರದ ಶಾಶ್ವತ ನೆರವಿಗೂ ಮೊದಲೇ ಚಿಗುರೊಡೆಯ ತೊಡಗಿದೆ. ಜಿಲ್ಲಾಡಳಿತ ಮತ್ತು ಶಾಸ ಕರುಗಳ ಪ್ರಯತ್ನಗಳ ಹಿನ್ನೆಲೆಯಲ್ಲಿ ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ಭಾಗಗಳಿಗೆ ಕನಿಷ್ಠ ಜೀಪನ್ನಾದರು ತೆಗೆ ದುಕೊಂಡು ಸಾಧ್ಯವಾಗಬಲ್ಲ ಸಣ್ಣ ಹಾದಿಗಳ ನಿರ್ಮಾಣ ಕಾರ್ಯ ಸಾಕಷ್ಟು ಭರದಿಂದ ನಡೆಯುತ್ತಿದೆ. ರಸ್ತೆ ಸಂಪರ್ಕ ವೇರ್ಪಟ್ಟಲ್ಲಿ ಗ್ರಾಮೀಣ ಭಾಗಗಳಲ್ಲಿ ಜೀವಕಳೆ ಮತ್ತೆ ಮೂಡಲಿದೆ ಎನ್ನುವ ವಿಶ್ವಾಸ ಗ್ರಾಮಸ್ಥರದ್ದು.
ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ. ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆ ಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಾ ಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರ ಗಳಾದ ನಗರದ ಜಿಲ್ಲಾಡಳಿತ ಭವನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾ ಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಗೆ ಆಹಾರ ಸಾಮಾಗ್ರಿಗಳು, ವೈದ್ಯಕೀಯ ಸಾಮಾಗ್ರಿ ಗಳು, ಕುಡಿಯುವ ನೀರು ಹಾಗೂ ಹಾಗೂ ಇತರೆ ಅಗತ್ಯ ಪರಿಹಾರ ಸಾಮಾಗ್ರಿಗಳು 10 ಭಾರಿ ಹಾಗೂ ಲಘು ವಾಹನಗಳಲ್ಲಿ ಸೆ.3 ರಂದು ಜಿಲ್ಲೆಗೆ ಬಂದಿದೆ.
ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರು: ಮಡಿಕೇರಿ ತಾಲೂಕಿನ 11 ಪರಿಹಾರ ಕೇಂದ್ರಗಳಲ್ಲಿ 430 ಕುಟುಂಬ ಗಳು ಆಶ್ರಯ ಪಡೆದಿದ್ದು, ಅವರಲ್ಲಿ 559 ಪುರುಷ ಮತ್ತು 592 ಮಹಿಳೆಯರು ಸೇರಿದಂತೆ 1151 ಜನ ಸಂತ್ರಸ್ತರಿದ್ದಾರೆ.
ಸೋಮವಾರಪೇಟೆ ತಾಲೂಕಿನ 3 ಪರಿಹಾರ ಕೇಂದ್ರಗ ಳಲ್ಲಿ 190 ಕುಟುಂಬ ಗಳು ಆಶ್ರಯ ಪಡೆದಿದ್ದು, ಅವರಲ್ಲಿ 251 ಪುರುಷ ಮತ್ತು 264 ಮಹಿಳೆಯರು ಸೇರಿದಂತೆ ಒಟ್ಟು 515 ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 14 ಪರಿಹಾರ ಕೇಂದ್ರಗಳಲ್ಲಿ ಒಟ್ಟು 620 ಕುಟುಂಬಗಳು ಆಶ್ರಯ ಪಡೆದಿದ್ದು, ಅವರಲ್ಲಿ 810 ಪುರುಷರು ಮತ್ತು 856 ಮಹಿಳೆಯರು ಸೇರಿದಂತೆ ಒಟ್ಟು 1666 ಜನ ಸಂತ್ರಸ್ತ ರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಿಳಿಸಿದ್ದಾರೆ.
ತಾತ್ಕಾಲಿಕ ಶೆಡ್‍ನಲ್ಲಿರಲು ಹಿಂದೇಟು:
ನಿರಾಶ್ರಿತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಗುರುತಿಸಲ್ಪಟ್ಟ ಪ್ರದೇಶದಲ್ಲಿ ಶೆಡ್‍ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು, ಮಾದರಿ ಶೆಡ್‍ನ್ನು ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿಡಲಾಗಿದೆ. ಆದರೆ ಸಂತ್ರಸ್ತರು ಈ ಶೆಡ್‍ನಲ್ಲಿರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡಿದ್ದು, ಜಿಂಕ್ ಶೀಟ್‍ನಿಂದ ನಿರ್ಮಿಸಿದ ಶೆಡ್ ಅತಿ ತಾಪಮಾನವನ್ನು ಉಂಟು ಮಾಡುವುದಲ್ಲದೆ ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಹಸಿರ ಪರಿಸರದೊಂದಿಗೆ ಪ್ರಕೃತಿಯನ್ನೇ ಮನೆ ಮಾಡಿಕೊಂಡು ಇದ್ದ ಗ್ರಾಮಸ್ಥರಿಗೆ ಈ ಶೆಡ್ ಬಗ್ಗೆ ಒಲವಿಲ್ಲ. ಅಲ್ಲದೆ ತಾತ್ಕಾಲಿಕ ಶೆಡ್‍ನಲ್ಲಿ ಒಂದು ಬಾರಿ ನೆಲೆಸಲು ಆರಂಭಿಸಿದರೆ ನಂತರ ದಿನಗಳಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕಾಳಜಿಯನ್ನು ಸರಕಾರ ಕಳೆದುಕೊಳ್ಳಲಿದೆ ಎನ್ನುವ ಆತಂಕವೂ ಸಂತ್ರಸ್ತರಲ್ಲಿದೆ. ಈ ಬೆಳವಣಿಗೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಲಿದೆ.