ಹನಗೋಡು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಿವಾಸಿ ಜನಾಂಗದ ಉನ್ನತಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹಣದ ಆಸೆಗೆ ಇತರರಿಗೆ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಎಚ್ಚರಿಸಿದರು. ಹನಗೋಡಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ವತಿಯಿಂದ ಜೇನುಕುರುಬ ಜನಾಂಗದವರಿಗೆ ಉಳುಮೆ ಎತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಅರಣ್ಯದ ಮೇಲೆ ಅವಲಂಬಿತವಾಗಿದ್ದ ಆದಿವಾಸಿಗಳ ಆರ್ಥಿಕ ಸ್ಥಿತಿ ಬದಲಾವಣೆಗಾಗಿ ಸರ್ಕಾರಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿ ಕೊಂಡು…
ಗ್ರಾಮೀಣ ದಸರಾ ಮೂಲಕ ಸಂಸ್ಕೃತಿ, ಕಲೆ ಉಳಿವು ಸಾಧ್ಯ-ಶಾಸಕ ಹೆಚ್.ವಿಶ್ವನಾಥ್
October 12, 2018ಹುಣಸೂರು: ನಾಡಿನ ಪಾರಂಪರಿಕ ಗ್ರಾಮೀಣ ಕಲೆಗಳನ್ನು ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಮೂಲಕ ಕಲೆಗಳನ್ನು ಉಳಿಸಿಕೊಳ್ಳಬಹುದು ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗ್ರಾಮೀಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಹಬ್ಬಗಳ ಆಚರಣೆ ಮೂಲಕ ಸಾಂಪ್ರದಾಯಿಕ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದರು. ಬಿಳಿಕೆರೆಯ ಕಾಲೇಜು ಮುಂಭಾಗದಿಂದ ಹೊರಟ ಗ್ರಾಮೀಣ ದಸರಾ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಂಗಳವಾದ್ಯದೊಂದಿಗೆ ಕಳಸ ಹೊತ್ತ ಮಹಿಳೆಯರು, ಬೆಳ್ಳಿರಥದಲ್ಲಿ ತಾಯಿ ಚಾಮುಂಡೇಶ್ವರಿ…
ಸಾರ್ವಜನಿಕರೊಂದಿಗೆ ಪೊಲೀಸರ ಸಾಮರಸ್ಯ ಅಗತ್ಯ
October 10, 2018ಹುಣಸೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಾರ್ವಜನಿಕ ರೊಂದಿಗಿನ ಸಾಮರಸ್ಯದ ಕೊರತೆಯಿಂದಾಗಿ ಠಾಣೆಗಳಲ್ಲಿ ಜಾತಿ ವಿಂಗಡಣೆ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ದಸಂಸ ಸಂಚಾ ಲಕ ನಿಂಗರಾಜ್ ಮಲ್ಲಾಡಿ ದೂರಿದರು. ನಗರದ ಪೊಲೀಸ್ ಠಾಣೆಯಲ್ಲಿ ಏರ್ಪ ಡಿಸಿದ್ದ ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಭೆ ಯಲ್ಲಿ ಮಾತನಾಡಿದ ಅವರು, ಕಷ್ಟ, ನೋವು, ದೌರ್ಜನ್ಯಗಳಂತಹ ಘಟನೆ ಯಿಂದ ನೊಂದು ನ್ಯಾಯಕ್ಕಾಗಿ ಬರುವ ಅಸಹಾಯಕರಿಗೆ ಠಾಣೆಗಳನ್ನು ಜಾತಿ ವೈಷಮ್ಯ ಬಿತ್ತಲಾಗುತ್ತಿದೆ. ಇದರಿಂದ ಸಾರ್ವ ಜನಿಕರಲ್ಲಿ ಪೊಲೀಸರ ಬಗ್ಗೆ…
ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…
October 9, 2018ಮೈಸೂರು: ರೌಡಿಸಂ ಬಿಟ್ಟು ಸಹಜ ಜೀವನಕ್ಕೆ ಮರಳಿದ ರೌಡಿಗಳು ದಾರುಣವಾಗಿ ಹತ್ಯೆಯಾಗಿ ಮರುಕ ಉಂಟುಮಾಡುವಂತಹ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಅದೇ ರೀತಿ ತನ್ನ ರೌಡಿಸಂ ಬಿಟ್ಟು ಶಾಂತ ಸ್ವರೂಪನಾಗಿ ಅಡ್ಡಾಡುತ್ತಿದ್ದ ಸಾಕಾನೆ ರಂಗ ಇಂದು ಮುಂಜಾನೆ ಖಾಸಗಿ ಬಸ್ ಡಿಕ್ಕಿಯಿಂದ ಸಾವಿಗೀಡಾಗಿ, ಎಲ್ಲರೂ ಮರುಕ ಪಡುವಂತೆ ಮಾಡಿದ್ದಾನೆ. ಈತ ಎರಡು ವರ್ಷಗಳ ಹಿಂದೆ ಸಾವನದುರ್ಗ ಅರಣ್ಯದಲ್ಲಿ ಸೆರೆಯಾಗುವ ಮುನ್ನ ‘ರೌಡಿ ರಂಗ’ ಎಂದೇ ಕರೆಯಲ್ಪಡುತ್ತಿದ್ದ. ರಾಮನಗರ, ಆನೆಕಲ್, ಬನ್ನೇರುಘಟ್ಟ ಅರಣ್ಯಗಳಲ್ಲಿ ತನಗೆ ಯಾರೂ ಸರಿಸಾಟಿ ಇಲ್ಲವೆಂಬಂತೆ ಸ್ವಚ್ಛಂದವಾಗಿ…
ತಾಲೂಕು ಆಡಳಿತದಿಂದ ಅಲೆಮಾರಿ ಕುಟುಂಬಗಳಿಗೆ ನೆಲೆ
October 9, 2018ಹುಣಸೂರು: ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಮಾಳ ಗ್ರಾಮದ ಡೋಂಗ್ರಿ ಗೆರಾಸಿಯಾ ಜಾತಿಯ ನಿರ್ಗತಿಕ 28 ಅಲೆಮಾರಿ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಕೃಷ್ಣಕುಮಾರ್ ತಿಳಿಸಿದರು. ಇತ್ತೀಚೆಗೆ ಮಂಗಳೂರು ಮಾಳ ಗ್ರಾಮಕ್ಕೆ ಭೇಟಿ ನೀಡಿ ನಿರ್ಗತಿಕ ಅಲೆ ಮಾರಿ ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ಹುಣಸೂರು ತಾಲೂಕು ದಸಂಸ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಹುಟ್ಟು ಸಾವುಗಳಿಗೆ…
ಸರ್ವಾಧಿಕಾರ ಧೋರಣೆಯಿಂದ ಹುಣಸೂರು ನಗರ ಸಭೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ವಿಶ್ವನಾಥ್ ಆರೋಪ
October 8, 2018ಹುಣಸೂರು: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ವಿದ್ದರೂ, ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಅವರ ಸರ್ವಾಧಿಕಾರವೇ ಕಾರಣವಾಗಿದೆ ಎಂದು ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಆ ಸಮುದಾಯಕ್ಕೆ ರಾಜಕೀಯ ಶಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಸಮಾಜಗಳಿಗೆ ರಾಜಕೀಯ ಶಕ್ತಿ ನೀಡಿದೆ ಎಂದರು. ಪಕ್ಷ ಸಮಾಜದ ಅತ್ಯಂತ ಸಣ್ಣಕೋಮಿಗೆ…
ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ
October 7, 2018ಹುಣಸೂರು: ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹೆಚ್.ವೈ.ಮಹದೇವು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಪ್ರವಾಸದಲ್ಲಿದ್ದ ನಗರ ಸಭೆಯ 17 ಸದಸ್ಯರು ಇಂದು ಬೆಳಿಗ್ಗೆ ಚುನಾವಣಾ ಸಮಯಕ್ಕೆ ಹಾಜರಾದರು. ಶಾಸಕ ಹೆಚ್. ವಿಶ್ವನಾಥ್‍ರವರ ಸಾರಥ್ಯದಲ್ಲಿ ನಗರಸಭಾ ಸದಸ್ಯರಾದ ಜೆಡಿಎಸ್‍ನ ಹೆಚ್.ಪಿ.ಸತೀಶ್, ಎಸ್.ಶರವಣ್ಣ, ಮಹಮದ್ ಪೀರ್, ಕೃಷ್ಣ ರಾಜಗುಪ್ತ, ಹಜರತ್‍ಜಾನ್, ಹೆಚ್.ಎಂ. ನಸರುಲ್ಲಾ, ಎಸ್.ಎಲ್.ಪ್ರೇಮಕುಮಾರಿ ಕಾಂಗ್ರೆಸ್‍ನ ಎಂ.ಶಿವಕುಮಾರ್, ಕೆ.ಎನ್. ನರಸಯ್ಯ, ಆರ್.ವೆಂಕಟೇಶ್, ಶಿವರಾಜ್, ಸುನೀತಾ ಜಯರಾಮೇಗೌಡ, ಹೆಚ್.ಜೆ. ಯೋಗಾನಂದ, ಧನಲಕ್ಷ್ಮಿರಾಜಣ್ಣ,…
ಹುಣಸೂರು ಡಿ.ದೇವರಾಜ ಅರಸ್ ಕಾಲೇಜಲ್ಲಿ ಗಾಂಧೀಜಿ 150ನೇ ಜನ್ಮ ದಿನಾಚರಣೆ
October 6, 2018ಹುಣಸೂರು: ಹುಣಸೂರಿನ ಡಿ ಡಿ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾ ಚರಣೆಯನ್ನು ‘ಬಾ ಬಾಪೂ’ ಶೀರ್ಷಿಕೆ ಅಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾ ಗಿದ್ದ ಶ್ರೀನಟರಾಜ ಮಹಿಳಾ ವಸತಿ ಪ್ರಥಮದರ್ಜೆ ಕಾಲೇಜಿನ ಉಪಪ್ರಾಂಶು ಪಾಲರಾದ ಪ್ರಸಾದಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಸಮಕಾಲೀನ ಸಂದರ್ಭದಲ್ಲಿ ಗಾಂಧಿ ಎಷ್ಟು ಪ್ರಸ್ತುತü ಎಂಬುದನ್ನು ವರ್ತಮಾನದ ವಿದ್ಯಮಾನ ಗಳ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಪರಿಚ ಯಿಸಿದರು. ಗಾಂಧಿಯವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಪಡೆಯಬೇಕಾದ…
ಹುಣಸೂರು: ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ
October 1, 2018ಹುಣಸೂರು: ನಗರದ ಚೆಸ್ಕ್‍ಂ ವಿಭಾಗದ ಕಚೇರಿಯಲ್ಲಿ ಶನಿವಾರ ಮೈಸೂರು ವಿಭಾಗದ ಇಇ ಮುಜಾಹಿದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳು ಅನಾವರಣಗೊಂಡಿತ್ತು. ಗ್ರಾಮಹರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ಗ್ರಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿದರು. ತಾಲೂಕಿನ ಕಣಗಾಲ್ ಗ್ರಾಮದ ರಾಮೇಗೌಡರ ಮನೆಯ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಇಲಾಖೆಯ ಸಿಬ್ಬಂದಿ ಮನೆಯಲ್ಲಿದ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ…
ಶಾಖಾ ವ್ಯವಸ್ಥಾಪಕರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
September 28, 2018ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು, ಬಿಳಿಕೆರೆ ಶಾಖೆಯಲ್ಲಿನ ಕೋಟ್ಯಾಂತರ ರೂ. ಅವ್ಯವಹಾರ ಪ್ರಕರಣ ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಲ್ಲಿ ನಡೆದಿರುವ ಕೋಟ್ಯಾಂತರ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಹುಣಸೂರು ಶಾಖೆಯ ಹಿಂದಿನ ಮ್ಯಾನೇಜರ್ ರಾಮಪ್ಪ ಪೂಜಾರ್ ಮತ್ತು ಬಿಳಿಕೆರೆ ಶಾಖೆಯ ಹಿಂದಿನ ಮ್ಯಾನೇಜರ್ ಜಿ.ಎಸ್.ಶಶಿಧರ್ ಸೇರಿದಂತೆ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಬಿಳಿಕೆರೆ ಶಾಖೆಯ ಹಾಲಿ ಮ್ಯಾನೇಜರ್ ಎಂ.ಟಿ.ಶಶಿಧರ ಅವರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು…