ಹುಣಸೂರು ಡಿ.ದೇವರಾಜ ಅರಸ್ ಕಾಲೇಜಲ್ಲಿ ಗಾಂಧೀಜಿ 150ನೇ ಜನ್ಮ ದಿನಾಚರಣೆ
ಮೈಸೂರು

ಹುಣಸೂರು ಡಿ.ದೇವರಾಜ ಅರಸ್ ಕಾಲೇಜಲ್ಲಿ ಗಾಂಧೀಜಿ 150ನೇ ಜನ್ಮ ದಿನಾಚರಣೆ

October 6, 2018

ಹುಣಸೂರು:  ಹುಣಸೂರಿನ ಡಿ ಡಿ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾ ಚರಣೆಯನ್ನು ‘ಬಾ ಬಾಪೂ’ ಶೀರ್ಷಿಕೆ ಅಡಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾ ಗಿದ್ದ ಶ್ರೀನಟರಾಜ ಮಹಿಳಾ ವಸತಿ ಪ್ರಥಮದರ್ಜೆ ಕಾಲೇಜಿನ ಉಪಪ್ರಾಂಶು ಪಾಲರಾದ ಪ್ರಸಾದಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಸಮಕಾಲೀನ ಸಂದರ್ಭದಲ್ಲಿ ಗಾಂಧಿ ಎಷ್ಟು ಪ್ರಸ್ತುತü ಎಂಬುದನ್ನು ವರ್ತಮಾನದ ವಿದ್ಯಮಾನ ಗಳ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಪರಿಚ ಯಿಸಿದರು. ಗಾಂಧಿಯವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಪಡೆಯಬೇಕಾದ ಮಾನ್ಯತೆಯ ತುರ್ತನ್ನು ತಿÀಳಿಸುತ್ತ, ಅವರ ಬದುಕಿನ ಬಗೆಗಿನ ಒಳನೋಟಗಳನ್ನು ಕಾಣಬೇಕಾದ ಅನಿವಾರ್ಯತೆಯನ್ನೂ ವಿವರಿಸಿದರು.

20ನೇ ಶತಮಾನದ ಪ್ರಮುಖ ಚೇತನ ಗಳಾದ ಗಾಂಧಿ, ಲೋಹಿಯಾ, ಮಾಕ್ರ್ಸ್, ಅಂಬೇಡ್ಕರ್ ಅವರ ಆಶಯಗಳನ್ನು ಸಮೀಕರಿಸುತ್ತಾ, ಗಾಂಧಿಯ ಅನುರೂಪ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕಾರ್ಯಕ್ರಮದಲ್ಲಿ ಭಾರತದ ವಿವಿಧ ಭಾಷೆಗಳಲ್ಲಿ ರಚಿತವಾಗಿರುವ ಗಾಂಧಿ ಕುರಿತ ಕವಿತೆಗಳ ವಾಚನವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶಯ್ಯ ವಹಿಸಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ.ತ್ರಿವೇಣಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಗಾಂಧಿ ಯವರ ಚಿಂತನೆಗಳನ್ನು ಇಂದಿನ ತಲೆ ಮಾರು ಪರಿಭಾವಿಸಿಕೊಳ್ಳಬೇಕಾದ ವಿಭಿನ್ನ ನೆಲೆಗಳನ್ನು ಅರಿಯಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಕನಕಮಾಲಿನಿ, ಕೃಷ್ಣಮೂರ್ತಿಮಯ್ಯ, ಡಾ. ಎಂ.ಎಸ್.ಫಾಲಾಕ್ಷ, ಡಾ. ಆನಂದ, ಡಾ.ಚಂದ್ರಕಾಂತ್ ಕೆ, ಪ್ರೊ. ಆರ್.ಗುರು ಸ್ವಾಮಿ, ಶ್ರೀ ರಮೇಶ್ ಮುಂತಾದ ಅಧ್ಯಾಪಕರು ಉಪಸ್ಥಿತರಿದ್ದರು.

Translate »