ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ ಇಂದು
ಮೈಸೂರು

ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ ಇಂದು

October 6, 2018

ನಂಜನಗೂಡು:  ನಗರದ ವಿದ್ಯಾವರ್ಧಕ ಮೈದಾನದಲ್ಲಿ ನಾಳೆ(ಶನಿವಾರ) ಬೆಳಿಗ್ಗೆ 10 ಗಂಟೆಗೆ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಸಂಸದ ಆರ್.ಧ್ರುವನಾರಾಯಣ್ ಸಿದ್ಧತೆ ಪರಿಶೀಲಿಸಿದರು.
ಉದ್ಯೋಗ ಮೇಳಕ್ಕೆ ಸಜ್ಜಾದ ವೇದಿಕೆ ಮತ್ತು ಕೈಗಾರಿಕಾ ಕೇಂದ್ರಗಳ ಸಂದರ್ಶನದ ಕೌಂಟರ್‍ಗಳನ್ನು ಪರಿಶೀಲಿಸಿ, ಆಹಾರ ವಿತರಣೆಯ ವಿಭಾಗವನ್ನು ವಿಕ್ಷೀಸಿ ಬರುವ ನಿರುದ್ಯೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಇದ್ದರು

Translate »