ಆನ್‍ಲೈನ್ ಔಷಧಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟೀಸ್
ಮೈಸೂರು

ಆನ್‍ಲೈನ್ ಔಷಧಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟೀಸ್

October 6, 2018

ಮೈಸೂರು:  ಆನ್‍ಲೈನ್ ಮೂಲಕ ಔಷಧಿ ವಿವರ ಪ್ರಸಾರ ಹಾಗೂ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂಬ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿಯ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧ ಪಟ್ಟವರಿಗೆ ನೊಟೀಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ವಿಬಾಹು ಬಕ್ರು ಅವರ ಏಕಸದಸ್ಯ ಪೀಠ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಘಟನೆ, ಆಹಾರ ಮತ್ತು ಔಷಧಿಗಳ ಆಯುಕ್ತರಿಗೆ ನೊಟೀಸ್ ಜಾರಿ ಮಾಡಿದೆ. ಆನ್‍ಲೈನ್ ಮೂಲಕ ಔಷಧಿಗಳ ವಿವರ ಪ್ರಸಾರ ಹಾಗೂ ಮಾರಾಟಕ್ಕೆ ಯಾವುದೇ ಕಾನೂನು ನೆಲೆಯಿಲ್ಲ. ಇದೊಂದು ಕಾನೂನು ಬಾಹಿರ ವಾದ ಪ್ರಕ್ರಿಯೆ ಎಂದು ವಕೀಲ ಅಮಿತ್‍ಗುಪ್ತಾ, ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ, ನೊಟೀಸ್ ಜಾರಿ ಮಾಡಿದೆ.

Translate »