ನಾಳೆ `ಖಗೋಳ ವಿಜ್ಞಾನ: ಮಾಹಿತಿ ಕೋಶ’ ಬಿಡುಗಡೆ
ಮೈಸೂರು

ನಾಳೆ `ಖಗೋಳ ವಿಜ್ಞಾನ: ಮಾಹಿತಿ ಕೋಶ’ ಬಿಡುಗಡೆ

October 6, 2018

ಮೈಸೂರು: ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್ ಅವರ `ಖಗೋಳ ವಿಜ್ಞಾನ: ಮಾಹಿತಿ ಕೋಶ’ ಪುಸ್ತಕ ಅ.7ರಂದು ಬಿಡುಗಡೆಯಾಗಲಿದೆ. ಮೈಸೂರಿನ ತಳುಕಿನ ವೆಂಕ ಣ್ಣಯ್ಯ ಸ್ಮಾರಕ ಗ್ರಂಥಮಾಲೆ ಹಾಗೂ ವೆಂಕಟ ಗಿರಿ ಪ್ರಕಾಶನದ ಸಹಯೋಗದಲ್ಲಿ ಅಂದು ಬೆಳಿಗ್ಗೆ 11ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ, ಕುವೆಂಪು ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟ ರಾಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋ ಧನಾ ಲಯದ ನಿವೃತ್ತ ನಿರ್ದೇಶಕ, ಸಿಎಸ್‍ಐಆರ್ ಸಂಸ್ಥೆಯ ವಿಜ್ಞಾನಿ ಪದ್ಮಶ್ರೀ ಡಾ.ವಿ.ಪ್ರಕಾಶ್ ಅವರು ಸಮಾರಂಭ ಉದ್ಘಾಟಿಸಲಿದ್ದು, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್. ಎನ್.ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ರೀಜನಲ್ ಇನ್ಸ್‍ಟಿಟ್ಯೂಟ್ ಆಫ್ ಎಜುಕೇಶನ್‍ನ ಭೌತ ವಿಜ್ಞಾನ ಪ್ರಾಧ್ಯಾಪಕರೂ ಆದ ಖಗೋಳ ವಿಜ್ಞಾನಿ ಡಾ.ಎಸ್.ಎನ್.ಪ್ರಸಾದ್ ಪುಸ್ತಕ ಕುರಿತು ಮಾತನಾಡಲಿದ್ದು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಟಿ.ಎಸ್. ಛಾಯಾಪತಿ ಹಾಗೂ ಶ್ರೀಮತಿ ಪ್ರತಿಭಾ ಮುರುಳಿ, ವೆಂಕಟಗಿರಿ ಪ್ರಕಾಶನದ ಪ್ರೊ.ನೀ. ಗಿರಿಗೌಡ, ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ.

Translate »