ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ
ಮೈಸೂರು

ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ

October 6, 2018

ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ಅ. 24ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆ ಯಲ್ಲಿ ಅವರು ಮಾತನಾಡಿದರು.

ಜಯಂತಿ ಆಚರಣೆ ಮಾಡವಲ್ಲಿ ಸಾರ್ವ ಜನಿಕರು, ಪ್ರಗತಿಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದ ಅವರು, ಕೆಲವು ಅಧಿಕಾರಿಗಳು ಮಹನೀಯರ ಜಯಂತಿ ಕಾರ್ಯ ಕ್ರಮಗಳಿಗೆ ಗೈರು ಹಾಜರಾಗುತ್ತಿರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಅಧಿಕಾರಿಗಳು ಮಾಡಬಾರದು. ಇದೇ ವರ್ತನೆ ಪುನಾರ ವರ್ತಿಸಿದರೆ ಅವರ ವಿರುದ್ಧ ಕ್ರಮ ಜರು ಗಿಸಲಾಗುವುದು ಎಂದರು.

ಕಾರ್ಯಕ್ರಮ ನಡೆಯುವ ದಿನ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ಶ್ರೀ ವಾಲ್ಮೀಕಿ ವೃತ್ತದಿಂದ ಮೆರವಣಿಗೆಗೆ ಚಾಲನೆ ನೀಡ ಲಾಗುವುದು. ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನಂದಿಕಂಬ, ಸತ್ತಿಗೆ, ವೀರಗಾಸೆ, ಕಂಸಾಳೆ, ಕೋಲಾಟ, ಡೊಳ್ಳು ಕುಣಿತ ಮತ್ತು ಮಂಗಳ ವಾದ್ಯದ ತಂಡಗಳು ಮೆರ ವಣಿಗೆಯಲ್ಲಿ ಪಾಲ್ಗೊಳ್ಳುವುದು ಎಂದರು.ತಹಶೀಲ್ದಾರ್ ಮಂಜುನಾಥ್ ಮಾತ ನಾಡಿ, ಶ್ರೀ ಮಹರ್ಷಿ ಜಯಂತಿ ಎಂದರೆ ನಾಡಿನ ಸಂಸೃತಿ ಪ್ರತೀಕ ಇದ್ದಂತೆ. ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂದರು.

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಗಿರಿಗೌಡ, ಸದಸ್ಯ ರಾದ ಅಂಕನಾಯಕ, ಸ್ಟಾನ್ಲಿ ಬ್ರಿಟೋ, ಪುರಸಭೆ ಸದಸ್ಯ ನಾಗರಾಜು, ಸರಗೂರು ಪಟ್ಟಣ ಪಂಚಾಯಿತಿ ಸದಸ್ಯ ಹನುಮ ನಾಯಕ ಮುಖಂಡರಾದ ಎಂ.ಸಿ.ದೊಡ್ಡ ನಾಯಕ, ಚಿಕ್ಕವೀರನಾಯಕ, ಈರೇಗೌಡ, ಬಸವರಾಜು, ಮುದ್ದುಮಲ್ಲಯ್ಯ, ಕ್ಯಾತನ ಹಳ್ಳಿ ನಾಗರಾಜು, ರಾಜನಾಯಕ, ಚಾಕಹಳ್ಳಿ ಕೃಷ್ಣ, ಜೀವಿಕಾ ಬಸವರಾಜು, ಇಟ್ನಾ ರಾಜಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದರ್ಶನ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯ ಕುಮಾರ್ ಹಾಜರಿದ್ದರು.

Translate »