ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀದಿಸುವ ಉತ್ಪನ್ನಗಳಲ್ಲಿ  ಎಸ್‍ಸಿ-ಎಸ್‍ಟಿ ಉದ್ಯಮಿಗಳಿಂದ ಶೇ.4ರಷ್ಟು ಖರೀದಿಸಲು ಅವಕಾಶ ಇದ್ದರೂ ಪೂರೈಕೆ ಮಾತ್ರ ಕೇವಲ ಶೇ.0.8
ಮೈಸೂರು

ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀದಿಸುವ ಉತ್ಪನ್ನಗಳಲ್ಲಿ ಎಸ್‍ಸಿ-ಎಸ್‍ಟಿ ಉದ್ಯಮಿಗಳಿಂದ ಶೇ.4ರಷ್ಟು ಖರೀದಿಸಲು ಅವಕಾಶ ಇದ್ದರೂ ಪೂರೈಕೆ ಮಾತ್ರ ಕೇವಲ ಶೇ.0.8

February 16, 2021

ಮೈಸೂರು,ಫೆ.15(ಪಿಎಂ)- ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀ ದಿಸುವ ಉತ್ಪನ್ನಗಳಲ್ಲಿ ಶೇ.4ರಷ್ಟನ್ನು ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಗಾ ರಿಕೋದ್ಯಮಿಗಳಿಂದ ಕೊಳ್ಳಲು ಅವಕಾಶ ವಿದೆ. ಆದರೆ ಪೂರೈಕೆ ಆಗುತ್ತಿರುವುದು ಕೇವಲ ಶೇ.0.8ರಷ್ಟು ಮಾತ್ರ ಎಂದು ಬೆಂಗ ಳೂರಿನ ರಾಷ್ಟ್ರೀಯ ಎಸ್‍ಸಿ-ಎಸ್‍ಟಿ ಹಬ್‍ನ (ಎಸ್‍ಸಿ-ಎಸ್‍ಟಿ ಉದ್ಯಮಿಗಳಿಗೆ ವೃತ್ತಿಪರ ಬೆಂಬಲ ನೀಡುವ ವ್ಯವಸ್ಥೆ) ಶಾಖಾ ಮುಖ್ಯಸ್ಥೆ ಎ.ಕೋಕಿಲಾ ಹೇಳಿದರು.

ಹೆಬ್ಬಾಳು ಕೈಗಾರಿಕಾ ವಸತಿ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಕೈಗಾ ರಿಕೋದ್ಯಮಿಗಳ ಸರಕು, ಸಲಕರಣೆ, ಸರಬ ರಾಜು ಮತ್ತು ಮಾರಾಟ ಸಹಕಾರ ಸಂಘದ ಕೈಗಾರಿಕಾ ಸಾಮಗ್ರಿಗಳ ಮಾರಾಟ ಹಾಗೂ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ವ್ಯಾಪ್ತಿಗೆ 150ಕ್ಕೂ ಹೆಚ್ಚು ಇಲಾಖೆಗಳು ಬರಲಿದ್ದು, ಇವುಗಳಿಗೆ ಅಗತ್ಯವಿರುವ ಉತ್ಪನ್ನಗಳ ಖರೀದಿಯಲ್ಲಿ ಶೇ.4ರಷ್ಟನ್ನು ಎಸ್‍ಸಿ-ಎಸ್‍ಟಿ ಕೈಗಾರಿ ಕೋದ್ಯಮಿಗಳಿಂದ ಖರೀದಿಸಲು ಅವಕಾಶ ವಿದೆ. ಸರ್ಕಾರ ಇಂತಹ ಅವಕಾಶ ಕಲ್ಪಿಸಿ ದ್ದರೂ ಪೂರೈಕೆ ಕೇವಲ ಶೇ.0.8ರಷ್ಟು ಮಾತ್ರ. ಅದೇ ರೀತಿ ಸಾಮಾನ್ಯ ವರ್ಗದಿಂದ ಶೇ.20, ಮಹಿಳಾ ವರ್ಗದಿಂದ ಶೇ.3ರಷ್ಟು ಉತ್ಪನ್ನ ಖರೀದಿಸಲು ಸರ್ಕಾರ ಅವಕಾಶ ನೀಡಿದೆ. ಈ ಮಾದರಿಯನ್ನು ರಾಜ್ಯ ಸರ್ಕಾ ರವೂ ಅಳವಡಿಸಿಕೊಂಡರೆ ಈ ವರ್ಗದ ಉದ್ಯಮಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸ ಬಹುದು ಎಂದು ಅಭಿಪ್ರಾಯಪಟ್ಟರು.

ಎಸ್‍ಸಿ-ಎಸ್‍ಟಿ ಕೈಗಾರಿಕೋದ್ಯಮಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಹಾಗೂ ಸಾಲಸೌಲಭ್ಯಕ್ಕೆ ಮಾತ್ರವೇ ಸೀಮಿತ ಗೊಳ್ಳದೇ ಸಹಕಾರ ವ್ಯವಸ್ಥೆ ಬಳಸಿಕೊಳ್ಳಲು ಮುಂದಾಗಬೇಕು. ತಮ್ಮ ಉತ್ಪನ್ನಗಳಿಗೆ ಸಹ ಕಾರ ವ್ಯವಸ್ಥೆ ಮಾರುಕಟ್ಟೆ ಸೌಲಭ್ಯ ಬಳಸಿಕೊಳ್ಳ ಬೇಕು. ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿ ಗಳು ತಮ್ಮ ಉತ್ಪನ್ನಗಳಿಗೆ ಸಹಕಾರ ಮಾರು ಕಟ್ಟೆ ಸೌಲಭ್ಯ ಬಳಸಿಕೊಂಡು ವಹಿವಾಟು ವಿಸ್ತರಿಸಿಕೊಳ್ಳಲು ಅವಕಾಶವಿದೆ ಎಂದರು.

ಎಂಎಸ್‍ಎಂಇ ನಿರ್ದೇಶಕ ಅಕದಾಸ್ ಮಾತನಾಡಿ, ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯಡಿ ವಿದೇಶಿ ಉತ್ಪನ್ನಗಳ ಆಮದು ಕಡಿಮೆಗೊಳಿಸಿ ಸ್ಥಳೀಯ ಮಟ್ಟದ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಿದೆ. ಆ ಮೂಲಕ ದೇಸಿಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ಮುಂದಾಗಿದೆ ಎಂದರು. ಇದಕ್ಕೂ ಮುನ್ನ ಶಾಸಕ ಎಲ್.ನಾಗೇಂದ್ರ ಸದರಿ ಸಹಕಾರ ಸಂಘದ ಉತ್ಪಾದನಾ ಘಟಕ ಉದ್ಘಾಟಿಸಿ ದರು. ಕೈಗಾರಿಕಾ ಸಾಮಗ್ರಿಗಳ ಮಾರಾಟಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದ ರಾಜು ಚಾಲನೆ ನೀಡಿದರೆ, ಕಚೇರಿ ಉದ್ಘಾ ಟನೆಯನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ನೆರವೇ ರಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾ ರಿಕಾ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು, ಸಹಕಾರ ಸಂಘದ ಅಧ್ಯಕ್ಷ ವಿಜಯ್ ಶಂಕರ್, ಉಪಾಧ್ಯಕ್ಷ ಮಂಜು ನಾಥ್, ನಿರ್ದೇಶಕ ಡಿ.ಈಶ್ವರ್ ಇದ್ದರು.

Translate »