‘ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

‘ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಚಾಲನೆ

February 16, 2021

ಮೈಸೂರು, ಫೆ.15(ಎಂಕೆ)- ಮೈಸೂರಿನ ಅಗ್ರಹಾರದ ಸಮೀಪದಲ್ಲಿರುವ ಶ್ರೀಮದ್ ಉತ್ತರಾದಿ ಮಠದ ಸಭಾಂಗಣದಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಹಾಗೂ ಉತ್ತರಾದಿ ಮಠದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 7 ದಿನಗಳ `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಶ್ರೀಮದ್ ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ್ ವಿದ್ಯಾದೀ ಶಾಚಾರ್ ಗುತ್ತಲ್, `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾವು ಮಾಡುವ ಎಲ್ಲಾ ಕಾರ್ಯಕ್ಕೂ ಭಗವಂತನ ಕೃಪೆಯಿದೆ. ನಾವು ಸಾಗುವ ದಾರಿತಪ್ಪದ್ದಂತೆ ನೋಡಿಕೊಳ್ಳುವ ಭಗವಂತನೆ ಧನ್ವಂತರಿ. ಮೈಸೂರಿನ ಉತ್ತರಾದಿ ಮಠದಲ್ಲಿ ಮಾ. ತಿಂಗಳಲ್ಲಿ ಧನ್ವಂತರಿ ದೇವರ ಪ್ರತಿಷ್ಠಾಪನೆಯಾಗ ಲಿದೆ ಎಂದರು. ಇದೇ ವೇಳೆ ಬೆಂಗಳೂರಿನ ವಿದುಷಿ ದಿವ್ಯ ಗಿರಿಧರ್ ಹಾಗೂ ಕಲ್ಬುರ್ಗಿಯ ವಿದ್ವಾನ್ ಅನಂತರಾಜ ಮಿಸ್ತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಮಿತಿ ಅಧ್ಯಕ್ಷ ಡಾ.ಜಿ.ರವಿ, ಕಾರ್ಯದರ್ಶಿ ಎಸ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »