ಮೈಸೂರು, ಫೆ.15(ಎಂಕೆ)- ಮೈಸೂರಿನ ಅಗ್ರಹಾರದ ಸಮೀಪದಲ್ಲಿರುವ ಶ್ರೀಮದ್ ಉತ್ತರಾದಿ ಮಠದ ಸಭಾಂಗಣದಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಹಾಗೂ ಉತ್ತರಾದಿ ಮಠದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 7 ದಿನಗಳ `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಶ್ರೀಮದ್ ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ್ ವಿದ್ಯಾದೀ ಶಾಚಾರ್ ಗುತ್ತಲ್, `ಮಧ್ವ-ಪುರಂದರ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾವು ಮಾಡುವ ಎಲ್ಲಾ ಕಾರ್ಯಕ್ಕೂ ಭಗವಂತನ ಕೃಪೆಯಿದೆ. ನಾವು ಸಾಗುವ ದಾರಿತಪ್ಪದ್ದಂತೆ ನೋಡಿಕೊಳ್ಳುವ ಭಗವಂತನೆ ಧನ್ವಂತರಿ….