ಪೊಲೀಸ್ ನೇಮಕಾತಿ ಪರೀಕ್ಷೆ:ಬಡ ಅಭ್ಯರ್ಥಿಗಳಿಗೆ ತರಬೇತಿ
ಮೈಸೂರು

ಪೊಲೀಸ್ ನೇಮಕಾತಿ ಪರೀಕ್ಷೆ:ಬಡ ಅಭ್ಯರ್ಥಿಗಳಿಗೆ ತರಬೇತಿ

February 16, 2021

ಮೈಸೂರು, ಫೆ.15(ಆರ್‍ಕೆಬಿ)- ಮೈಸೂರು ಕುವೆಂಪುನಗರದ ಅಪೊಲೊ ಆಸ್ಪತ್ರೆ ಬಳಿಯ ಇಂಡಿಯನ್ ಸಿವಿಲ್ ಸರ್ವೀಸಸ್ ಟ್ರೈನಿಂಗ್ ಅಕಾಡೆಮಿ ವತಿಯಿಂದ ರಾಜ್ಯ ಪೊಲೀಸ್ ಇಲಾಖೆ ನೇಮಕ ಮಾಡಿಕೊಳ್ಳಲಿರುವ 545 ಪಿಎಸ್‍ಐ ಹುದ್ದೆಯ ಬಡ ಆಕಾಂಕ್ಷಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಎಸ್. ರಮೇಶ್‍ಗೌಡ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಶಿಷ್ಯ ವೇತನದೊಡನೆ ತರಬೇತಿಗೆ ಆಯ್ಕೆ ಮಾಡಲಾಗು ತ್ತದೆ. ಇವರಿಗೆ ತಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ತರಬೇತಿ, ಓವಲ್ ಮೈದಾನದಲ್ಲಿ ದೈಹಿಕ ಸಾಮಥ್ರ್ಯ ತರಬೇತಿ ನೀಡಲಾಗುತ್ತದೆ. ನಾಗರಿಕ ಸೇವೆ, ರೇಲ್ವೇಸ್, ಬ್ಯಾಂಕಿಂಗ್ ಮೊದಲಾದ ಪರೀಕ್ಷೆಗಳಿಗೆ ಹಾಜರಾಗುವವರಿಗೂ ಪ್ರಚಲಿತ ವಿದ್ಯಮಾನ, ಪರಿಮಾ ಣಾತ್ಮಕ, ಗುಣಾತ್ಮ, ಅರ್ಹತೆ, ವಾಕ್ ಸಾಮಥ್ರ್ಯ ಮೊದಲಾದವನ್ನು ಕರಗತಗೊಳಿಸಿ, ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಲು ನೆರವಾಗುತ್ತಿರುವುದಾಗಿ ಹೇಳಿದರು. ಆಸಕ್ತರು ಹೆಚ್ಚಿನ ಮಾಹಿತಿಗೆ ದೂ.0821- 4191595 ಸಂಪರ್ಕಿಸಬಹುದೆಂದರು.

 

Translate »