ಸೈನ್ಯದಲ್ಲಿ ಸೇವೆ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದ ವಾಸು ಮೈಸೂರು, ಮಾ.14(ಆರ್‍ಕೆ)- ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ಪೊಲೀಸ್ ಕಾನ್‍ಸ್ಟೇಬಲ್ ತೀವ್ರ ಹೃದಯಾ ಘಾತದಿಂದ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ವಾಸು(43) ಸಾವನ್ನಪ್ಪಿದವರು. ಇಂದು ಬೆಳಿಗ್ಗೆ 7 ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಕಾವೇರಿ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‍ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಬೆಳಿಗ್ಗೆ 9 ಗಂಟೆ ವೇಳೆಗೆ…
ಪೊಲೀಸ್ ನೇಮಕಾತಿ ಪರೀಕ್ಷೆ:ಬಡ ಅಭ್ಯರ್ಥಿಗಳಿಗೆ ತರಬೇತಿ
February 16, 2021ಮೈಸೂರು, ಫೆ.15(ಆರ್‍ಕೆಬಿ)- ಮೈಸೂರು ಕುವೆಂಪುನಗರದ ಅಪೊಲೊ ಆಸ್ಪತ್ರೆ ಬಳಿಯ ಇಂಡಿಯನ್ ಸಿವಿಲ್ ಸರ್ವೀಸಸ್ ಟ್ರೈನಿಂಗ್ ಅಕಾಡೆಮಿ ವತಿಯಿಂದ ರಾಜ್ಯ ಪೊಲೀಸ್ ಇಲಾಖೆ ನೇಮಕ ಮಾಡಿಕೊಳ್ಳಲಿರುವ 545 ಪಿಎಸ್‍ಐ ಹುದ್ದೆಯ ಬಡ ಆಕಾಂಕ್ಷಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಎಸ್. ರಮೇಶ್‍ಗೌಡ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಆರ್ಥಿಕ ಪರಿಸ್ಥಿತಿ ಆಧರಿಸಿ ಶಿಷ್ಯ ವೇತನದೊಡನೆ ತರಬೇತಿಗೆ ಆಯ್ಕೆ ಮಾಡಲಾಗು ತ್ತದೆ. ಇವರಿಗೆ ತಮ್ಮ ಸಂಸ್ಥೆಯಲ್ಲಿ ಶೈಕ್ಷಣಿಕ ತರಬೇತಿ, ಓವಲ್ ಮೈದಾನದಲ್ಲಿ…
ರೆವಿನ್ಯೂ ಇನ್ಸ್‍ಪೆಕ್ಟರ್ ಸಮಾನ ಪೊಲೀಸ್ ಪೇದೆಗಳಿಗೆ ವೇತನ
September 13, 2018ಬೆಂಗಳೂರು: ಪೊಲೀಸ್ ಕಾನ್‍ಸ್ಟೆಬಲ್‍ಗಳ ವೇತನವನ್ನು ರೆವಿನ್ಯೂ ಇನ್ಸ್‍ಪೆಕ್ಟರ್ (ಕಂದಾಯ ಇಲಾಖೆಯ ನಿರೀಕ್ಷಕರ) ಹುದ್ದೆಗೆ ಸರಿಸಮಾನವಾಗಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಆರನೇ ವೇತನ ಆಯೋಗ ಜಾರಿ ವೇಳೆ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯ ಲ್ಲಿಂದು ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ರಚಿಸಲಾ ಗಿದ್ದ ಹಿರಿಯ ಪೊಲೀಸ್ ಅಧಿಕಾರಿ…
ಡೊಳ್ಳು ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಎಡಿಜಿಪಿ ಭಾಸ್ಕರ್‍ರಾವ್ ಸೂಚನೆ
July 9, 2018ಮೈಸೂರು: ಪೊಲೀಸರಲ್ಲಿ ಆರೋಗ್ಯದ ಬಗ್ಗೆ ಶಿಸ್ತು ಮೂಡಿಸಲು ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯು ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಡೊಳ್ಳು ಹೊಟ್ಟೆ, ಬೊಜ್ಜು ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ದೈಹಿಕ ಸಾಮಥ್ರ್ಯದಿಂದ ಇಲಾಖೆಯಲ್ಲಿ ಅಶಿಸ್ತು ಮೂಡಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಾಗಾಗಿ ಈ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 12 ಕೆಎಸ್‍ಆರ್‍ಪಿ ಪಡೆಗಳಲ್ಲಿರುವ ಪೊಲೀಸರ ಡೊಳ್ಳು ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾಯ ಕಮಾಂಡೆಂಟ್‍ಗಳದ್ದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ….
ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಿ
June 23, 2018ಬೆಂಗಳೂರು: ಮೈತ್ರಿ ಸರ್ಕಾರ ದಲ್ಲಿ ಬರುವ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆ ನಡೆಸಿದರು. ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಶಾಂತಿ-ಸೌಹಾರ್ದತೆ ಕಾಪಾಡಿ ಜನಸ್ನೇಹಿಯಾಗಿರಬೇಕು. ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕು. ರೌಡಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯ ವಾಗಿ ನಿಯಂತ್ರಿಸಿ,…
ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ‘ಆರೋಗ್ಯ ಭಾಗ್ಯ’ ಯೋಜನೆ
June 23, 2018ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರ ‘ಆರೋಗ್ಯ ಭಾಗ್ಯ ಯೋಜನೆ’ ರೂಪಿಸಿ 10 ಕೋಟಿ ರೂ. ಮಂಜೂರು ಮಾಡಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಮೈಸೂರು-ಚಾಮರಾಜನಗರ ಘಟಕದ ಅಧ್ಯಕ್ಷ ಎಂ.ಸಿ.ಮರಿಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದಲ್ಲಿ ತಾವು ನೆಲೆಸಿರುವ ಜಿಲ್ಲೆ ಮತ್ತು ನಗರದಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸದಸ್ಯತ್ವ ಪಡೆದು, ಮಾಸಿಕ ವಂತಿಗೆ ಪಾವತಿ ಮಾಡುವ…
ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಪೊಲೀಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿ
June 1, 2018ಮೈಸೂರು: ಕರ್ನಾಟಕ ರಾಜ್ಯ ಪೊಲೀಸ್‍ಗೆ ಎಮರ್ಜೆನ್ಸಿ ರೆಸ್ಪಾನ್ಸ್ ಕ್ಯಾಟಗರಿ ಇನಿಷಿಯೇಟಿವ್ ಹೈವೆ ಪೆಟ್ರೋಲಿಂಗ್ ಸಿಸ್ಟಂನಲ್ಲಿ `ಸ್ಮಾರ್ಟ್ ಪೊಲೀಸಿಂಗ್ -2018’ ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದೆ. ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ವತಿಯಿಂದ ನೀಡುವ ಪ್ರಶಸ್ತಿಯನ್ನು ನವದೆಹಲಿಯ ತನ್‍ಸೆನ್ ಮಾರ್ಗದಲ್ಲಿರುವ ಎಫ್‍ಐಸಿಸಿಐ ಫೆಡರೇಷನ್ ಹೌಸ್‍ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಕ್ರೈಂ ಅಂಡ್ ಟೆಕ್ನಿಕಲ್ ಸರ್ವಿಸಸ್) ಮತ್ತು ಟ್ರಾಫಿಕ್ ಅಂಡ್ ರೋಡ್ ಸೇಫ್ಟಿ ಕಮೀಷ್ನರ್…