ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಪೊಲೀಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿ
ಮೈಸೂರು

ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಪೊಲೀಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿ

June 1, 2018

ಮೈಸೂರು:  ಕರ್ನಾಟಕ ರಾಜ್ಯ ಪೊಲೀಸ್‍ಗೆ ಎಮರ್ಜೆನ್ಸಿ ರೆಸ್ಪಾನ್ಸ್ ಕ್ಯಾಟಗರಿ ಇನಿಷಿಯೇಟಿವ್ ಹೈವೆ ಪೆಟ್ರೋಲಿಂಗ್ ಸಿಸ್ಟಂನಲ್ಲಿ `ಸ್ಮಾರ್ಟ್ ಪೊಲೀಸಿಂಗ್ -2018’ ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದೆ.

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ವತಿಯಿಂದ ನೀಡುವ ಪ್ರಶಸ್ತಿಯನ್ನು ನವದೆಹಲಿಯ ತನ್‍ಸೆನ್ ಮಾರ್ಗದಲ್ಲಿರುವ ಎಫ್‍ಐಸಿಸಿಐ ಫೆಡರೇಷನ್ ಹೌಸ್‍ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಕ್ರೈಂ ಅಂಡ್ ಟೆಕ್ನಿಕಲ್ ಸರ್ವಿಸಸ್) ಮತ್ತು ಟ್ರಾಫಿಕ್ ಅಂಡ್ ರೋಡ್ ಸೇಫ್ಟಿ ಕಮೀಷ್ನರ್ ಡಾ. ಎಂಎ ಸಲೀಂ ಅವರು ಕೇಂದ್ರ ಪಾರ್ಲಿಮೆಂಟರಿ ಅಫೇರ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್ ಹಾಗೂ ಪ್ರೋಗ್ರಾಂ ಇಂಪ್ಲಿಮೆಂಟೇಷನ್ ರಾಜ್ಯ ಸಚಿವ ವಿಜಯ್ ಗೋಯಲ್ ಅವರಿಂದ ಸ್ವೀಕರಿಸಿದರು.

ಕೇಂದ್ರ ಸರ್ಕಾರದ ಮಾಜಿ ಕೇಂದ್ರ ಗೃಹಕಾರ್ಯದರ್ಶಿ ಹಾಗೂ ಎಫ್‍ಐಸಿಸಿಐ ಹೋಂ ಲ್ಯಾಂಡ್ ಸೆಕ್ಯೂರಿಟಿ ಸಮಿತಿ ಸಲಹೆಗಾರ ಜಿ.ಕೆ.ಪಿಳ್ಳೈ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಶ್ರೀಮತಿ ನೀಲಮಣ ಎನ್.ರಾಜು ಅವರ ಮಾರ್ಗದರ್ಶನದಲ್ಲಿ ರಾಜ್ಯ ಪೊಲೀಸರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಗಳಿಸಿದ್ದಾರೆ.

ಕರ್ನಾಟಕ ರಾಜ್ಯವು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, 14 ರಾಷ್ಟ್ರೀಯ ಹೆದ್ದಾರಿಗಳು, 114 ರಾಜ್ಯ ಹೆದ್ದಾರಿ ಸೇರಿ ಒಟ್ಟು 28,311 ಕಿ.ಮೀ. ಉದ್ದದ ಸಂಪರ್ಕವಿರುವುದರಿಂದ ಹೈವೇ ಪೆಟ್ರೋಲಿಂಗ್ ಪೊಲೀಸರು, ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಗೋಲ್ಡನ್ ಹವರ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

133 ಸುಸಜಿತ ಹೈವೇ ಪೆಟ್ರೋಲಿಂಗ್ ವಾಹನಗಳು ಹಾಗೂ ಸಿಬ್ಬಂದಿಗಳು ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಸನ್ನದ್ಧರಾಗಿದ್ದಾರೆ. ಕರ್ನಾಟಕ ರಾಜ್ಯಕ್ಕೆ `Transparent Recruitment process’ ವಿಷಯದಲ್ಲಿ `Special Jury Award ಸಹ ಬಂದಿದ್ದು ರಾಜ್ಯ ಪೊಲೀಸ್ ಪರವಾಗಿ ಎಡಿಜಿಪಿ (ನೇಮಕಾತಿ) ರಾಘವೇಂದ್ರ ಔರಾದ್ಕರ್ ಪ್ರಶಸ್ತಿಯನ್ನು ಇಂದು ಸ್ವೀಕರಿಸಿದರು.

Translate »